ಲಖನೌ(ಮೇ.02): ಅತ್ಯಾಚಾರವೆಸಗಲು ಬಂದವನ ಗುಪ್ತಾಂಗ ಕತ್ತರಿಸಿದ ಘಟನೆ ಉತ್ತರ ಪ್ರದೇಶದ ಎಥ್ವಾ ಜಿಲ್ಲೆಯ ದುರ್ಗಾ'ಪುರ ಹಳ್ಳಿಯಲ್ಲಿ ನಡೆದಿದೆ. 
ಅತ್ಯಾಚಾರವೆಸಗಲು ಬಂದವ ಮಹಿಳೆಗೆ ದೂರದ ಸಂಬಂಧಿಕನಾಗಬೇಕು. ಮಹಿಳೆಯ ಮನೆಗೆ ಪ್ರವೇಶಿಸಿದ ಈತ ಮಹಿಳೆಯ ಮೇಲೆ ಮಾನಭಂಗವೆಸಗಲು ಪ್ರಯತ್ನಿಸಿದ್ದಾನೆ.  ಧೈರ್ಯ ತೋರಿದ ಮಹಿಳೆ ಆತನನ್ನು ಕಂಬಕ್ಕೆ ಕಟ್ಟಿ ಗುಪ್ತಾಂಗವನ್ನು ಕತ್ತರಿಸಿ ಹಾಕಿದ್ದಾಳೆ. ತದ ನಂತರ ಪೊಲೀಸ್ ಠಾಣೆಗೆ ಸುದ್ದಿ ಮುಟ್ಟಿಸಿದ್ದಾಳೆ.
ಸ್ಥಳೀಯ ಪೊಲೀಸರು ಆಗಮಿಸಿ ಗುಪ್ತಾಂಗ ವಂಚಿತನನ್ನು ಆಸ್ಪತ್ರೆಗೆ ಸೇರಿಸಿದ್ದಾಳೆ.  ಮಹಿಳೆ ತೋರಿದ ಧೈರ್ಯಕ್ಕೆ ಎಲ್ಲಡೆ ಪ್ರಶಂಸೆ ವ್ಯಕ್ತವಾಗಿದೆ. ಇತ್ತೀಚಿಗಷ್ಟೆ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿಯನ್ನು ಉತ್ತರ ಪ್ರದೇಶ ಸರ್ಕಾರ ಗಲ್ಲು ಶಿಕ್ಷೆ ವಿಧಿಸಿತ್ತು. ಅಲ್ಲಿನ ಸಿಎಂ ಯೋಗಿ ಆದಿತ್ಯನಾಥ್ ಕೂಡ ಮಹಿಳೆ ಹಾಗೂ ಮಕ್ಕಳ ಮೇಲಿನ ಅಪರಾಧ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುವಂತೆ ಆದೇಶಿಸಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಆದ ಘಟನೆಯ ನಂತರ ಕಳೆದ ತಿಂಗಳು ಕೇಂದ್ರ ಸರ್ಕಾರ ಕೂಡ 12 ವರ್ಷದೊಳಗಿನ ಮಕ್ಕಳ ಮೇಲೆ ಅತ್ಯಾಚಾರವೆಸಗಿದರೆ ಗಲ್ಲು ಶಿಕ್ಷೆ ವಿಧಿಸುವ ಕಾನೂನನ್ನು ಫೋಕ್ಸೋ ಕಾಯಿದೆಯಡಿ ತಿದ್ದುಪಡಿ ತಂದಿದೆ.