ಗಂಡ ಮತ್ತು ಮಗುವಿನ ಎದುರೆ ಮಹಿಳೆ ಮೇಲೆ ಅತ್ಯಾಚಾರ

West Bengal: Housewife gang-raped by fellow dancers of wedding party
Highlights

ಆಕೆಯ ಗಂಡ ಮತ್ತು ಮಗುವಿನದ ಎದುರೆ ಮಹಿಳೆ ಗ್ಯಾಂಗ್ ರೇಪ್ ಗೆ ಒಳಗಾಗಿದ್ದಾರೆ.  ಮದುವೆ ಮನೆಯಿಂದ ಹಿಂದುರಿಗಿದ ಮಹಿಳೆ ಮೇಲೆ ಕಾಮುಕರು ಎರಗಿದ್ದಾರೆ. ಅಮಾನವೀಯ ಪ್ರಕರಣ ನಡೆದಿರುವುದು ಎಲ್ಲಿ?

ಕೋಲ್ಕತಾ, (ಜು.6) ಹತ್ತಿರದ ಮದುವೆ ಮನೆ ಸಮಾರಂಭಕ್ಕೆ ಕುಟುಂಬದೊಂದಿಗೆ ತೆರಳಿದ್ದ ಮಹಿಳೆ ಮೇಲೆ ಗ್ಯಾಂಗ್ ರೇಪ್ ನಡೆದಿದೆ. ಕೋಲ್ಕತ್ತಾದದ ಸಿತಾಲಕುಚ್ಚಿಯಲ್ಲಿ  ಅಮಾನವೀಯ ಪ್ರಕರಣ ನಡೆದಿದೆ. 

ಮದುವೆ ಮನೆಯ ಮನರಂಜನಾ ಕಾರ್ಯಕ್ರಮದಲ್ಲಿ ಸಂತ್ರಸ್ತ ಮಹಿಳೆ ನೃತ್ಯ ಮಾಡಿದ್ದರು. ಆರೋಪಿಗಳಾದ ಪಿಂಬು ಬರ್ಮನ್ ಮತ್ತು ಕೃಷ್ಣ ಬರ್ಮನ್ ಮಹಿಳೆಯೊಂದಿಗೆ ನೃತ್ಯ ಮಾಡಿದ್ದರು. ಮದುವೆ ಮುಗಿದ ಮೇಲೆ ಮಹಿಳೆಯನ್ನು ಆಕೆಯ ಮನೆ ತನಕ ಹಿಂಬಾಲಿಸಿದ್ದರು. 

ಭಾರತ ಮಹಿಳೆಯರಿಗೆ ಸೇಫ್ ಅಲ್ಲ... ಹೌದೆ?

ಸೋಮವಾರ ಮದುವೆ ಸಮಾರಂಭವಿದ್ದರೆ ಕಾಮುಕರು ಗುರುವಾರ ರಾತ್ರಿ ಮಹಿಳೆಯ ಮನೆಗೆ ನುಗ್ಗಿದ್ದಾರೆ. ಮನೆಯಲ್ಲಿದ್ದ ಮಹಿಳೆಯ ಗಂಡನನ್ನು ಕಟ್ಟಿ ಹಾಕಿ ಚಾಕುವಿನಿಂದ ಬೆದರಿಸಿ ಮಹಿಳೆಗೆ ಲೈಂಗಿಕ ಕ್ರಿಯೆ ಬರುವಂತೆ ಒತ್ತಾಯಿಸಿದ್ದಾರೆ. ಮಹಿಳೆ ವಿರೋಧಿಸಿದ್ದಕ್ಕೆ ಆಕೆ ಗಂಡ ಮತ್ತು ಮಗುವಿನ ಎದುರೆ ಅತ್ಯಾಚಾರ ಎಸಗಿದ್ದಾರೆ. ಸದ್ಯ ಆರೋಪಿಗಳು ಪೊಲೀಸರ ಟ್ರೀಟ್ ಮೆಂಟ್ ಪಡೆದುಕೊಳ್ಳುತ್ತಿದ್ದಾರೆ.

loader