ದಲಿತರ ಮನೆಗೆ ಹೋಗಿ ಹೋಟೆಲ್ ಊಟ ತರಿಸಿ ತಿಂದ ಬಿಜೆಪಿ ಸಚಿವ

UP minister visits Dalit's home for dinner, food ordered from outside
Highlights

ಆಹ್ವಾನ ಇಲ್ಲದೆಯೇ ದಲಿತರ ಮನೆಯೊಂದಕ್ಕೆ ತೆರಳಿದ್ದ ಉತ್ತರ ಪ್ರದೇಶ ಸಚಿವ ಸುರೇಶ್ ರಾಣಾ, ಮನೆಯಲ್ಲಿ ಮಾಡಿದ ಊಟ ಸೇವಿಸದೇ ಹೋಟೆಲ್‌ನಿಂದ ಊಟ ತರಿಸಿ ತಿಂದರೆಂಬ ಆರೋಪ ಕೇಳಿಬಂದಿದೆ. 

ಆಗ್ರಾ: ಆಹ್ವಾನ ಇಲ್ಲದೆಯೇ ದಲಿತರ ಮನೆಯೊಂದಕ್ಕೆ ತೆರಳಿದ್ದ ಉತ್ತರ ಪ್ರದೇಶ ಸಚಿವ ಸುರೇಶ್ ರಾಣಾ, ಮನೆಯಲ್ಲಿ ಮಾಡಿದ ಊಟ ಸೇವಿಸದೇ ಹೋಟೆಲ್‌ನಿಂದ ಊಟ ತರಿಸಿ ತಿಂದರೆಂಬ ಆರೋಪ ಕೇಳಿಬಂದಿದೆ. 

ರಾಣಾ ಮತ್ತು ಇತರ ಬಿಜೆಪಿ ಮುಖಂ ಡರು ಅಲಿಗಢ ಜಿಲ್ಲೆಯ ಲೋಹಾಗಢ್ ಪ್ರದೇಶದ ರಾಜ್ನೀಶ್ ಕುಮಾರ್ ಎಂಬ ದಲಿತನ ಮನೆಗೆ ತೆರಳಿದ್ದರು. 

ಆದರೆ, ಪನ್ನೀರ್, ಪಲಾವ್, ತಂದೂರಿ ರೋಟಿ ಮತ್ತು ಗುಲಾಬ್ ಜಾಮೂನ್ ಅನ್ನು ಹೋಟೆಲ್‌ನಿಂದ ತರಿಸಿ ಭೋಜನ ಮಾಡಿದ್ದಾರೆ. ಆದರೆ ಸುರೇಶ್ ರಾಣಾ ‘ದಲಿತರ ಮನೆಯಲ್ಲಿಯೇ ಸಿದ್ಧ ಪಡಿಸಿದ ಆಹಾರ ಸೇವಿಸಿದ್ದೇವೆ ಎಂದು ಹೇಳಿದ್ದಾರೆ.

loader