Asianet Suvarna News Asianet Suvarna News

ಖಾಕಿ ಮನೆಯಲ್ಲೇ ನಡೆದಿತ್ತಾ ಗೌರಿ ಹತ್ಯೆ ಸ್ಕೆಚ್?

ಇನ್ಸ್ಪೆಕ್ಟರ್ ಮನೆಯಲ್ಲೇ ಗೌರಿ ಹತ್ಯೆಗೆ ಸ್ಕೆಚ್?

ಗುಂಡಿಟ್ಟ ವಾಘ್ಮೋರೆ ಬೆನ್ನಿಗೆ ನಿಂತಿದ್ದು 11 ಮಂದಿ

ಹತ್ಯೆಯಲ್ಲಿ 11 ಮಂದಿಯ ಪಾತ್ರವೇನು ಗೊತ್ತಾ?

ನಡಿಗೆ ಶೈಲಿಯಿಂದ ಸಿಕ್ಕಿಬಿದ್ದ ಗಣೇಶ್ ಮಿಸ್ಕಿನ್

ಗೌರಿ ಹತ್ಯೆಯಲ್ಲಿ ಹುಬ್ಬಳ್ಳಿ ಹುಡುಗರ ಪಾತ್ರವೇನು?

ಬೆಂಗಳೂರು(ಜು.29): ಒಟ್ಟು 12 ಮಂದಿ, ಒಬ್ಬೊಬ್ಬರಿಗೂ ಒಂದೊಂದು ಉಸಾಬರಿ, ಒಬ್ಬರ ನಂತರ ಮತ್ತೊಬ್ಬ ಎಸ್ಐಟಿ ಬಲೆಗೆ ಬೀಳ್ತಿದ್ದಾರೆ. ಎಸ್ಐಟಿ  ಅರೆಸ್ಟ್ ಮಾಡಿರೋ ಆರೋಪಿಗಳೇ ನಿಜವಾಗಲೂ ಗೌರಿ ಹಂತಕರಾ.? ಪೊಲೀಸರು ಕಂಡಿರೋ ಗೌರಿ ಹತ್ಯೆಯ ಊಹೆಗಳು ಸತ್ಯನಾ?. ಖಾಕಿ ಮನೆಯಲ್ಲೇ ಕುಳಿತು ಸ್ಕೆಚ್ ಹಾಕಿದ್ದರಾ ಆರೋಪಿಗಳು?  

ಒಂದು ಪ್ರಕರಣ ಅಂತಿಮ ಘಟ್ಟಕ್ಕೆ ಬಂದಿದೆ ಅನ್ನೋ ಖುಷಿ ಪೊಲೀಸರಿಗೆ. ಆದ್ರೆ ಮತ್ತೊಂದು ಕಡೆ ಹಿಂದೂ ಪರ ಸಂಘಟನೆ ಹಾಗೂ ಆರೋಪಿಗಳ ಮನೆಯವರ ಆಕ್ರೋಶ. ಎಸ್ಐಟಿ ಅಮಾಯಕರನ್ನ ಬಲಿಪಶುವನ್ನಾಗಿ ಮಾಡುತ್ತಿದೆ ಅನ್ನೋ ಆರೋಪ ಕೂಡ ಕೇಳಿ ಬಂದಿದೆ. ಹಿಂದೂ ಪರ ಸಂಘಟನೆ ಹಾಗೂ ಆರೋಪಿಗಳ ಮನೆಯವರು ಹೇಳೋದೇನು ಅಂತಾ ನೀವೇ ನೋಡಿ.  ಮುಗಿಯದ ಕಥೆಯ ಪ್ರತಿ ಮಗ್ಗಲುಗಳು ಇಲ್ಲಿದೆ ನೋಡಿ..   

Video Top Stories