ಪಾಕ್ ಬಣ್ಣ ಬಯಲು ಮಾಡಿದ ಎಕ್ಸ್ ಐಎಸ್ ಐ ಚೀಫ್..!

Pak knew of Operation against Osama: Ex ISI chief
Highlights

ಕುಖ್ಯಾತ ಭಯೋತ್ಪಾದಕ, ಅಲ್ ಖೈದಾ ಮಾಜಿ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ತನ್ನ ನೆಲದಲ್ಲಿ ಆಶ್ರಯ ಪಡೆದ ವಿಷಯ ಪಾಕಿಸ್ತಾನಕ್ಕೆ ತಿಳಿದಿತ್ತು ಎಂದು ಮಾಜಿ ಐಎಸ್ ಐ ಮುಖ್ಯಸ್ಥ ಅಸದ್ ದುರಾನಿ ಹೇಳಿದ್ದಾರೆ. ಅಲ್ಲದೇ ಅಮೆರಿಕದ ಅಬೊಟಾಬಾದ್ ಕಾರ್ಯಾಚರಣೆ ಕೂಡ ಪಾಕ್ ಗೆ ಮೊದಲೇ ತಿಳಿಸಲಾಗಿತ್ತು ಎಂದು ಅವರು ಮಾಹಿತಿ ಹೊರಗೆಡವಿದ್ದಾರೆ.

ಇಸ್ಲಾಮಾಬಾದ್(ಮೇ 29): ಕುಖ್ಯಾತ ಭಯೋತ್ಪಾದಕ, ಅಲ್ ಖೈದಾ ಮಾಜಿ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ತನ್ನ ನೆಲದಲ್ಲಿ ಆಶ್ರಯ ಪಡೆದ ವಿಷಯ ಪಾಕಿಸ್ತಾನಕ್ಕೆ ತಿಳಿದಿತ್ತು ಎಂದು ಮಾಜಿ ಐಎಸ್ ಐ ಮುಖ್ಯಸ್ಥ ಅಸದ್ ದುರಾನಿ ಹೇಳಿದ್ದಾರೆ.  ಅಲ್ಲದೇ ಅಮೆರಿಕದ ಅಬೊಟಾಬಾದ್ ಕಾರ್ಯಾಚರಣೆ ಕೂಡ ಪಾಕ್ ಗೆ ಮೊದಲೇ ತಿಳಿಸಲಾಗಿತ್ತು ಎಂದು ಅವರು ಮಾಹಿತಿ ಹೊರಗೆಡವಿದ್ದಾರೆ.

ಲಾಡೆನ್ ಪಾಕಿಸ್ತಾನದಲ್ಲಿ ಇರುವುದು ಐಎಸ್ ಐ ಮತ್ತು ಪಾಕ್ ಸರ್ಕಾರಕ್ಕೆ ಮೊದಲೇ ತಿಳಿದಿತ್ತು ಎಂದಿರುವ ದುರಾನಿ, ಅಲ್ಲದೇ ಅಮೆರಿಕ ಪಡೆಗಳು ಅಬೋಟಾಬಾದ್ ಮೇಲೆ ದಾಳಿ ಮಾಡಿ ಲಾಡೆನ್ ಹತ್ಯೆ ಮಾಡಲಿದ್ದಾರೆ ಎಂಬುದೂ ಮೊದಲೇ ಗೊತ್ತಾಗಿತ್ತು ಎಂದು ಅವರು ಹೇಳಿದ್ದಾರೆ. 

ಲಾಡೆನ್ ಹತ್ಯೆ ಕಾರ್ಯಾಚರಣೆ ವೇಳೆ ಪಾಕ್ ಎರಡು ರೀತಿಯ ಯೋಜನೆ ಸಿದ್ದಪಡಿಸಿತ್ತು. ಅಮೆರಿಕ ಪಡೆಯನ್ನು ತನ್ನ ನೆಲದೊಳಗೆ ಬಿಟ್ಟು ಲಾಡೆನ್ ಇನ್ನಿಲ್ಲದಂತೆ ಮಾಡುವುದು ಮತ್ತು ಆ ಮೂಲಕ ಭಯೋತ್ಪಾದನೆ ವಿರುದ್ದದ ಹೋರಾಟದಲ್ಲಿ ಅಮೆರಿಕದ ವಿಶ್ವಾಸ ಗಳಿಸುವುದು. ಎರಡನೇಯದಾಗಿ ಲಾಡೆನ್ ವಿರುದ್ದದ ಕಾರ್ಯಾಚರಣೆ ತನಗೆ ಗೊತ್ತೇ ಇರಲಿಲ್ಲ ಎಂದು ನಾಟಕವಾಡಿ ಭಯೋತ್ಪಾದಕರ ಸಹಾನುಭೂತಿ ಗಳಿಸುವುದು ಎಂದು ದುರಾನಿ ಹೇಳಿದ್ದಾರೆ.

ಇಷ್ಟೇ ಅಲ್ಲದೇ ದುರಾನಿ ಅವರು ಪಾಕ್ ಸೇನೆಯ ಮಹತ್ವದ ರಹಸ್ಯಗಳನ್ನು ಕೂಡ ತಮ್ಮ ಪುಸ್ತಕದಲ್ಲಿ ಬಿಚ್ಚಿಟ್ಟಿದ್ದಾರೆ. ದೇಶದ ರಾಜಕೀಯ ಮತ್ತು ಸರ್ಕಾರದ ಆಡಳಿತದಲ್ಲಿ ಸೇನೆಯ ನಿರ್ಣಯವೇ ಅಂತಿಮ ಎಂದು ಹೇಳಿದ್ದಾರೆ. ಇನ್ನು ದುರಾನಿ ವಿರುದ್ದ ಗರಂ ಆಗಿರುವ ಪಾಕ್ ಸೇನೆ ಅವರ ವಿರುದ್ದ ಸಮನ್ಸ್ ಜಾರಿಗೊಳಿಸಿದ್ದಲ್ಲದೇ ಅವರ ವಿಮಾನ ಸಂಚಾರದ ಮೇಲೂ ನಿರ್ಬಂಧ ವಿಧಿಸಿದೆ.       

loader