ಬ್ಯಾಂಕಾಕ್‌: ಫಿಲಿಪ್ಪೀನ್ಸ್‌ನ ಕ್ಯಾಟ್ರಿಯೋನಾ ಗ್ರೇ, 2018ನೇ ಸಾಲಿನ ವಿಶ್ವಸುಂದರಿಯಾಗಿ ಆಯ್ಕೆಯಾಗಿದ್ದಾರೆ. ಸೋಮವಾರ ಬ್ಯಾಂಕಾಕ್‌ನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ 24 ವರ್ಷದ ಗಾಯಕಿ ಹಾಗೂ ಮಾಡೆಲ್‌ ಆಗಿರುವ ಗ್ರೇ ವಿಶ್ವಸುಂದರಿಯಾಗಿ ಆಯ್ಕೆಯಾದರು.

ದಕ್ಷಿಣ ಆಫ್ರಿಕಾದ ತಮರ‍್ಯನ್‌ ಗ್ರೀನ್‌ ಮತ್ತು ವೆನಿಜುವೆಲಾದ ಸ್ಟೆಫನಿ ಗ್ಯುಟೆರೆಜ್‌ ಅವರು ಕ್ರಮವಾಗಿ 2 ಮತ್ತು 3ನೇ ಸ್ಥಾನಕ್ಕೆ ತೃಪ್ತಿಪಟ್ಟರು. 

ವಿಶ್ವಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ನೇಹಲ್‌ ಚೂಡಾಸಮ ಅವರು ಅಂತಿಮ ಟಾಪ್‌ 20ರೊಳಗೆ ಬರುವಲ್ಲಿಯೂ ವಿಫಲರಾದರು.