ಪ್ರಾಣಿಗಳ ಬದಲು ಬಡ ಗ್ರಾಮಸ್ಥರ ಮೇಲೆ ಔಷಧ ಪ್ರಯೋಗ: ಭಾರೀ ವಿವಾದ

Medical experiments on humans
Highlights

ಯಾವುದೇ ಔಷಧ ಮಾರುಕಟ್ಟೆಗೆ ಬಿಡುಗಡೆ ಮೊದಲು ಅದನ್ನು ಪ್ರಾಣಿಗಳ ಮೇಲೆ ಪ್ರಯೋಗಿಸಿ, ಅದು ಹಾನಿಕಾರಕವಲ್ಲ ಎಂದು ಸಾಬೀತಾದ ಮೇಲೆ ಮಾನವರ ಮೇಲೆ ಪ್ರಯೋಗಿಸಲಾಗುತ್ತದೆ.

ಜೈಪುರ: ಯಾವುದೇ ಔಷಧ ಮಾರುಕಟ್ಟೆಗೆ ಬಿಡುಗಡೆ ಮೊದಲು ಅದನ್ನು ಪ್ರಾಣಿಗಳ ಮೇಲೆ ಪ್ರಯೋಗಿಸಿ, ಅದು ಹಾನಿಕಾರಕವಲ್ಲ ಎಂದು ಸಾಬೀತಾದ ಮೇಲೆ ಮಾನವರ ಮೇಲೆ ಪ್ರಯೋಗಿಸಲಾಗುತ್ತದೆ.  

ಆದರೆ ವಿದೇಶಿ ಕಂಪನಿಯೊಂದು, ರಾಜಸ್ಥಾನದ ಚುರು ಜಿಲ್ಲೆಯಲ್ಲಿ ಕಾನೂನು ಬಾಹಿರವಾಗಿ ಬಡ ಗ್ರಾಮಸ್ಥರ ಮೇಲೆ ಔಷಧ ಪ್ರಯೋಗ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ.

ಔಷಧ ಸೇವನೆಯಿಂದ ಅಸ್ಥಸ್ಥಗೊಂಡಿರುವ 21 ಗ್ರಾಮಸ್ಥರನ್ನು ಇದೀಗ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕಾನೂನು ಬಾಹಿರ ಔಷಧ ಪ್ರಯೋಗದಲ್ಲಿ ಭಾಗವಹಿಸುವುದಕ್ಕೆ ಒಬ್ಬರಿಗೆ 500 ರು. ನೀಡಲಾಗಿತ್ತು.

ಮಾ.19ರಂದು ಔಷಧ ನೀಡಲಾಗಿತ್ತು. ಔಷಧ ಪಡೆದ ನಂತರ ಅವರ ಆರೋಗ್ಯ ಹದಗೆಡುತ್ತಾ ಸಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಆರೋಗ್ಯ ಸಚಿವರು ತನಿಖೆಗೆ ಆದೇಶಿಸಿದ್ದಾರೆ.

 

loader