ಸಚಿವ ಸ್ಥಾನ ಬೇಡವೇ ಬೇಡ, ಕೊಟ್ಟರೆ ಡಿಸಿಎಂ ಕೊಡಿ

ಸಚಿವಸ್ಥಾನ ಸಿಗದಿದ್ದಕ್ಕೆ ಸಮಾಧಾನಗೊಂಡಿರುವ ಶಾಸಕ ಎಮ್.ಬಿ. ಪಾಟೀಲ್ ಇಂದು ಹೊಸ ವರಸೆ ತೆಗೆದಿದ್ದಾರೆ. ಸಂಪುಟ ವಿಸ್ತರಣೆಯಲ್ಲೆ ತಮಗೆ ಸಚಿವಸ್ಥಾನ ಬೇಡವೇ ಬೇಡ ಕೊಟ್ಟರೆ ಡಿಸಿಎಂ ನೀಡಿ ಎಂದು ಪಟ್ಟು ಹಿಡಿದಿದ್ದಾರೆ. ಅತೃಪ್ತ ನಾಯಕರ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿರುವ ಪಾಟೀಲ್ ಡಿಸಿಎಂ ಸ್ಥಾನ ತಮಗೆ ನೀಡಿದರೆ ಉತ್ತರ ಹಾಗೂ ದಕ್ಷಿಣ ಕರ್ನಾಟಕಕ್ಕೆ ನೀಡಿದಂತಾಗುತ್ತದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ.

Comments 0
Add Comment