Asianet Suvarna News Asianet Suvarna News

ಸಾಲದ ಹಣದ ಬದಲಿಗೆ ಹೆಂಡತಿ ಮೇಲೇ ಅತ್ಯಾಚಾರ ಮಾಡಲು ಸ್ನೇಹಿತನಿಗೆ ಸಹಕರಿಸಿದ ಪಾಪಿ ಪತಿ

man allows friend to rape wife in Ghaziabad

ಗಾಜಿಯಾಬಾದ್(ಅ.07): ಪಾಪಿ ಪತಿಯೊಬ್ಬ ಸಾಲದ ಹಣದ ಮರು ಪಾವತಿ ಬದಲಿಗೆ ಹೆಂಡತಿ ಮೇಲೇ ಅತ್ಯಾಚಾರ ಮಾಡಲುಸ್ನೇಹಿತನಿಗೆ ಸಹಕರಿಸಿದ ಘಟನೆ ಉತ್ತರಪ್ರದೇಶದ ಗಾಜಿಯಾಬಾದ್`ನಲ್ಲಿ ವರದಿಯಾಗಿದೆ.

ಗಾಜಿಯಾಬಾದ್`ನ ಲೋನಿ ಕಾಲೋನಿಯ ನಿವಾಸಿಯಾದ ಕೂಲಿ ಕಾರ್ಮಿಕ ನರೇಶ್, ತನ್ನ ಸ್ನೇಹಿತ ಪಿಂಟೂ ಬಳಿ 5000 ರೂ. ಸಾಲ ಪಡೆದಿದ್ದ. ಹಣದ ಮರುಪಾವತಿ ಬದಲಿಗೆ ಹೆಂಡತಿಯನ್ನೇ ಆತನ ಜೊತೆ ಮಲಗಿಸುವ ಬಗ್ಗೆ ಡೀಲ್ ಮಾಡಿಕೊಂಡು ಈ ಕೃತ್ಯ ಎಸಗಿದ್ದಾನೆ.

ಸೆಪ್ಟೆಂಬರ್ 20ರಂದು ಪಿಂಟೂನನ್ನು ಮನೆಗೆ ಕರೆ ತಂದ ನರೇಶ್, ಸಾಲದ ಹಣಕ್ಕೆ ಬದಲಾಗಿ ಆತನ ಜೊತೆ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸಿದ್ದಾನೆ. ಪತ್ನಿ ವಿರೋಧಿಸಿದಾಗ ಥಳಿಸಿ ಅತ್ಯಾಚಾರ ನಡೆಸಲಾಗಿದೆ.

ಅಕ್ಟೋಬರ್ 1ರಂದು ಸಂತ್ರಸ್ತೆ ಲೋನಿ ಬಾರ್ಡರ್ ಪೊಳಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಬಳಿಕ ಪೊಲೀಸರು ನರೇಶ್ ಮತ್ತು ಪಿಂಟೂನನ್ನ ಬಂಧಿಸಿದ್ಧಾರೆ.