ಇಂಧೋರ್(ಜ.26): 'ನಾನು ರಾಜ್ಯ ಸರ್ಕಾರದಲ್ಲಿರುವ ಎಲ್ಲಾ ಸಚಿವರುಗಳ ತಂದೆ ನಾನೇ..' ದಿ ಮಧ್ಯಪ್ರದೇಶ ಬಿಎಸ್ ಪಿ ಶಾಸಕಿ ರಮಾಬಾಯಿ ಅವರ ನುಡಿಮುತ್ತುಗಳು.

ಮಧ್ಯಪ್ರದೇಶ ಸರ್ಕಾರಕ್ಕೆ ಬೆಂಬಲ ನೀಡಿರುವ ಬಿಎಸ್ ಪಿ ಪಕ್ಷದ ಶಾಸಕಿಯಾಗಿರುವ ರಮಾಬಾಯಿ, ಮಂತ್ರಿಮಂಡಲದಲ್ಲಿ ಸ್ಥಾನ ಸಿಗದ ಕಾರಣಕ್ಕೆ ಅಸಮಾಧಾನಗೊಂಡಿದ್ದಾರೆ.

ನನಗೆ ಮಂತ್ರಿ ಸ್ಥಾನ ಸಿಗದಿದ್ದರೂ ನಾನು ಕೆಲಸ ಮಾಡುತ್ತೇನೆ. ಆಡಳಿತದ ವಿಚಾರಕ್ಕೆ ಬಂದರೇ ನಾನು ಎಲ್ಲ ಸಚಿವರಿಗೂ ಅಪ್ಪ, ನಾನೇ ಕಿಂಗ್ ಮೇಕರ್ ಎಂದು ಹೇಳುವ ಮೂಲಕ ರಮಾಬಾಯಿ ತಮ್ಮ ಅಸಮಾಧಾನವನ್ನು ಪರೋಕ್ಷವಾಗಿ ಹೊರ ಹಾಕಿದ್ದಾರೆ.

ಪಥರಿಯಾ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಶಾಸಕಿ ರಮಾಬಾಯಿ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದು, ಸಚಿವೆಯಾದರೇ ಜನರಿಗಾಗಿ ಮತ್ತಷ್ಟು ಉತ್ತಮ ಕೆಲಸ ಮಾಡಬಹುದು ಎಂದು ಹೇಳಿದ್ದಾರೆ. ಆದರೆ ಅಸಲಿಗೆ ತಾವೇ ಈ ಸರ್ಕಾರದ ಸೂತ್ರಧಾರಳಾಗಿದ್ದು, ಎಲ್ಲಾ ಸಚಿವರಿಗೆ ತಂದೆಯಾಗಿದ್ದಾನೆ ಎಂದು ಹೇಳಿದ್ದಾರೆ.