Asianet Suvarna News Asianet Suvarna News

ಮಾಲಿನ್ಯ ನಿಯಂತ್ರಣದ ಮೂಲಕ ನಗರದ ಸುಸ್ಥಿರತೆಗೆ ಕಟಿಬದ್ಧರಾಗೋಣ: ಅಮೆರಿಕದ ಪರಿಸರ ತಜ್ಞೆ ಲೇ ಬ್ಯಾಂಬರ್ಗರ್ ಸಲಹೆ

* ಮೋಡ ಬಿತ್ತನೆ, ನದಿ ಜೋಡಣೆಯಂತ ಯೋಜನೆಗಳು ಬೇಡ; ಲಭ್ಯ ಸಂಪನ್ಮೂಲಗಳ ಸರಿಯಾದ ಬಳಕೆಯಾಗಬೇಕು.
* ಕೊಳಚೆ ನೀರು, ಚರಂಡಿ ನೀರು, ಕಸ ಇತ್ಯಾದಿಗಳನ್ನು ಸರಿಯಾಗಿ ಸಂಸ್ಕರಿಸುವ ಸಮರ್ಪಕ ವ್ಯವಸ್ಥೆಯಾಗಬೇಕು.
* ಅಮೆರಿಕದ ನಾಗರಿಕರಲ್ಲಿ ಪರಿಸರ ಕಾಳಜಿ ಮತ್ತು ಜಾಗೃತಿ ಸಾಕಷ್ಟಿದೆ. ಈ ವಿಚಾರದಲ್ಲಿ ಅಲ್ಲಿನ ಸರಕಾರದ ಮೇಲೆ ಜನಸಾಮಾನ್ಯರೇ ಒತ್ತಡ ಹೇರುತ್ತಾರೆ. ಹಾಗೆಯೇ ಭಾರತದಲ್ಲಿಯೂ ಜನರು ಪರಿಸರ ಕಾಳಜಿ ಹೊಂದಿರಬೇಕು.
* ವಾಸ ಹಾಗೂ ವಾಣಿಜ್ಯ ಕಟ್ಟಡಗಳು ಪರಿಸರ ನಿಯಮಗಳನ್ನು ಪಾಲಿಸಬೇಕು. ನಾಗರಿಕರು ಸ್ವಯಂಪ್ರೇರಿತವಾಗಿ ಇದರ ಜವಾಬ್ದಾರಿ ಹೊತ್ತುಕೊಳ್ಳಬೇಕು.

leah bamberger in bengaluru for 2 days meet

ಬೆಂಗಳೂರು(ಸೆ. 16): ಹವಾಮಾನ ಬದಲಾವಣೆಯನ್ನು ತಡೆಯುವಲ್ಲಿ ಉದ್ಯಮಗಳ ಪಾತ್ರದ ಕುರಿತು ಪರಿಸರ ಸ್ನೇಹಿ ಉದ್ಯಮಗಳ ಸಿಇಒ ಮತ್ತು ಸಿಒಒಗಳೊಂದಿಗೆ ಅಮೆರಿಕದ ರೋಡ್‌ ಐಲ್ಯಾಂಡ್‌ನ ಪ್ರಾವಿಡೆನ್ಸ್‌ ನಗರದ ಸುಸ್ಥಿರತೆ ವಿಭಾಗದ ನಿರ್ದೇಶಕರಾಗಿರುವ  ಲೆ ಬ್ಯಾಂಬರ್ಗರ್‌   ಮಾತುಕತೆ ನಡೆಸಿದರು. ವಿಜ್ಞಾನಿಗಳು, ಸಂಶೋಧಕರು ಮತ್ತು ಚಿಂತಕರೊಂದಿಗೆ ಸುಸ್ಥಿರ ನಗರಗಳ ಬಗ್ಗೆ ಚರ್ಚೆ ನಡೆಸಿದರು. ಅಲ್ಲದೇ ಜಿಯೋ ಎಂಜಿನಯರಿಂಗ್(ಹವಾಮಾನ ಯಂತ್ರಶಾಸ್ತ್ರ)ನಂತಹ ತಂತ್ರಜ್ಞಾನಗಳು ಪರಿಸರಕ್ಕೆ ಮಾರಕವಾಗುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

"ನದಿಗಳ ಹರಿವಿನ ಪಥ ಬದಲಿಸುವುದು; ಮತ್ತು ನದಿ ಜೋಡಿಸುವುದು ಜಿಯೋ ಎಂಜಿನಿಯರಿಂಗ್ ಕ್ರಮಗಳಾಗಿವೆ. ಇವುಗಳಿಂದ ಯಾವುದೇ ದೂರಗಾಮಿ ಫಲ ಸಿಕ್ಕೋದಿಲ್ಲ," ಎಂದು ರೋಡ್ ಲೇ ಬ್ಯಾಂಬರ್ಗರ್ ಹೇಳಿದ್ದಾರೆ.

ಧಾರಾಕಾರ ಮಳೆಗೆ ಬೆಂಗಳೂರಿನಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದನ್ನು ಉಲ್ಲೇಖಿಸಿದ ಲೇ ಬ್ಯಾಂಬರ್ಗರ್, ಈ ವಿಚಾರದಲ್ಲಿ ಬೆಂಗಳೂರನ್ನು ಅಮೆರಿಕದ ಹೂಸ್ಟನ್ ನಗರಕ್ಕೆ ಹೋಲಿಕೆ ಮಾಡಿದ್ದಾರೆ. ಎರಡೂ ನಗರಗಳು ಅಸಮರ್ಪಕವಾಗಿ ರೂಪುಗೊಂಡಿದ್ದು, ಅಡ್ಡಾದಿಡ್ಡಿಯಾಗಿ ಬೆಳೆದಿರುವುದು ಇಂತಹ ಪ್ರವಾಹ ಪರಿಸ್ಥಿತಿ ಎದುರಿಸಬೇಕಾದ ಸ್ಥಿತಿ ತಲುಪಿವೆ ಎಂದವರು ತಿಳಿಸಿದ್ದಾರೆ.

ಪರಿಹಾರಗಳೇನು?
ಅಮೆರಿಕದ ಪರಿಸರ ತಜ್ಞೆಯಾಗಿರುವ ಅವರು ನಮ್ಮ ಪರಿಸರ ಸಮಸ್ಯೆಗಳಿಗೆ ಕೆಲ ಸಲಹೆಗಳನ್ನೂ ನೀಡಿದ್ದಾರೆ.
* ಮೋಡ ಬಿತ್ತನೆ, ನದಿ ಜೋಡಣೆಯಂತ ಯೋಜನೆಗಳು ಬೇಡ; ಲಭ್ಯ ಸಂಪನ್ಮೂಲಗಳ ಸರಿಯಾದ ಬಳಕೆಯಾಗಬೇಕು.
* ಕೊಳಚೆ ನೀರು, ಚರಂಡಿ ನೀರು, ಕಸ ಇತ್ಯಾದಿಗಳನ್ನು ಸರಿಯಾಗಿ ಸಂಸ್ಕರಿಸುವ ಸಮರ್ಪಕ ವ್ಯವಸ್ಥೆಯಾಗಬೇಕು.
* ಅಮೆರಿಕದ ನಾಗರಿಕರಲ್ಲಿ ಪರಿಸರ ಕಾಳಜಿ ಮತ್ತು ಜಾಗೃತಿ ಸಾಕಷ್ಟಿದೆ. ಈ ವಿಚಾರದಲ್ಲಿ ಅಲ್ಲಿನ ಸರಕಾರದ ಮೇಲೆ ಜನಸಾಮಾನ್ಯರೇ ಒತ್ತಡ ಹೇರುತ್ತಾರೆ. ಹಾಗೆಯೇ ಭಾರತದಲ್ಲಿಯೂ ಜನರು ಪರಿಸರ ಕಾಳಜಿ ಹೊಂದಿರಬೇಕು.
* ವಾಸ ಹಾಗೂ ವಾಣಿಜ್ಯ ಕಟ್ಟಡಗಳು ಪರಿಸರ ನಿಯಮಗಳನ್ನು ಪಾಲಿಸಬೇಕು. ನಾಗರಿಕರು ಸ್ವಯಂಪ್ರೇರಿತವಾಗಿ ಇದರ ಜವಾಬ್ದಾರಿ ಹೊತ್ತುಕೊಳ್ಳಬೇಕು.

ಇದೇ ವೇಳೆ, ಲೇ ಬ್ಯಾಂಬರ್ಗರ್‌ ಅವರು ನಗರದ ವಿದ್ಯಾರ್ಥಿಗಳು, ವಿಜ್ಞಾನಿಗಳು ಮತ್ತು ಸಮಾಜದ ಪ್ರಮುಖರೊಂದಿಗೆ ಹವಾಮಾನ ಪಟುತ್ವದ ಬಗ್ಗೆ ಸಂವಾದ ನಡೆಸಿದರು. ಸುಸ್ಥಿರ ನಗರ ಯೋಜಿಸುವಲ್ಲಿ ಸಂರಕ್ಷಣಾ ವಿಜ್ಞಾನ ಮತ್ತು ನಿರ್ವಹಣೆಯ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಜ್ಞಾನ ವಿನಿಮಯ ಸಂವಾದ ಕಾರ್ಯಕ್ರಮದಲ್ಲಿ ಸ್ಥಳೀಯ ಎನ್‌'ಜಿಒ ಮುಖಂಡರೊಂದಿಗೆ ಚರ್ಚೆ ನಡೆಸಿದರು. ಇದೇ ಸಂದರ್ಭದಲ್ಲಿ ’ಗ್ರೀನೊವೇಟ್‌(Greenovate)’ ರಾಯಭಾರಿಗಳನ್ನ ಭೇಟಿಯಾದರು. ಹವಾಮಾನ ಬದಲಾವಣೆಯನ್ನು ತಡೆಯುವಲ್ಲಿ ಉದ್ಯಮಗಳ ಪಾತ್ರದ ಕುರಿತು ಪರಿಸರ ಸ್ನೇಹಿ ಉದ್ಯಮಗಳ ಸಿಇಒ ಮತ್ತು ಸಿಒಒಗಳೊಂದಿಗೂ ಮಾತುಕತೆ ನಡೆಸಿದರು. ವಿಜ್ಞಾನಿಗಳು, ಸಂಶೋಧಕರು ಮತ್ತು ಚಿಂತಕರೊಂದಿಗೆ ಸುಸ್ಥಿರ ನಗರಗಳ ಬಗ್ಗೆ ಚರ್ಚೆ ನಡೆಸಿದರು. ಬೆಂಗಳೂರಿನ ಹೆಮ್ಮೆಯ ಕಂಪನಿಯಾಗಿ ಬೆಳೆಯುತ್ತಿರುವ 'ಜಾಗ ಸ್ಟಾರ್ಟಪ್' ಕಂಪನಿಯ ಬಗ್ಗೆಯೂ ಅವರು ಮೆಚ್ಚುಗೆಯ ಮಾತುಗಳನ್ನಾಡಿದರು.

ಯಾರಿವರು ಲೇ ಬ್ಯಾಂಬರ್ಗರ್(Leah Bamberger)?
ಲೆ ಬ್ಯಾಂಬರ್ಗರ್‌ ಅವರು ಅಮೆರಿಕದ ರೋಡ್‌ ಐಲ್ಯಾಂಡ್‌'ನ ಪ್ರಾವಿಡೆನ್ಸ್‌ ನಗರದ ಸಸ್ಟೈನಬಲಿಟಿ ವಿಭಾಗದ ನಿರ್ದೇಶಕರಾಗಿ ದುಡಿಯುತ್ತಿದ್ದಾರೆ. ತ್ಯಾಜ್ಯವನ್ನು ಮಿತಿಗೊಳಿಸುವುದು, ಮಾಲಿನ್ಯದ ತಡೆ, ಕಾರ್ಯಕ್ಷಮತೆ ಹೆಚ್ಚಳಕ್ಕೆ ಪ್ರೋತ್ಸಾಹ ಮತ್ತು ಸ್ಥಳೀಯ ಸಂಪನ್ಮೂಲಗಳ ಅಭಿವೃದ್ಧಿಗೆ ಒತ್ತುನೀಡಿದ್ದಾರೆ. ಇದಕ್ಕೂ ಮೊದಲು ಮೆಸಚುಸೆಟ್ಸ್‌ನ ಬಾಸ್ಟನ್‌ ನಗರದ ಮೇಯರ್‌ ಅವರೊಂದಿಗೆ ಕೆಲಸ ಮಾಡಿದ್ದು, ಅಲ್ಲಿ ನಗರವನ್ನು ಸುಸ್ಥಿರಗೊಳಿಸಲು ಗ್ರೀನೊವೆಟ್‌ ಬಾಸ್ಟನ್‌ ಉಪಕ್ರಮ ಜಾರಿ ಮಾಡಿದರು. ಈ ಉಪಕ್ರಮವು ಬಾಸ್ಟನ್‌ ಜನತೆಗೆ ಸುಸ್ಥಿರ ಜೀವನಕ್ಕೆ ಅಗತ್ಯವಾದ ಸುದ್ದಿ, ಮಾಹಿತಿ ಮತ್ತು ಕಾರ್ಯತಂತ್ರಗಳನ್ನು ಒದಗಿಸುತ್ತದೆ. ಬಾಸ್ಟನ್‌ ಜನತೆಯನ್ನು ಬೆಸೆಯುವ ಈ ಉಪಕ್ರಮವು ಅವರ ಸುತ್ತಮುತ್ತಲ ಸ್ಥಳಗಳಲ್ಲಿಯ ಅವಕಾಶಗಳನ್ನು ಅವರ ಗಮನಕ್ಕೆ ತರುತ್ತದೆ.

Follow Us:
Download App:
  • android
  • ios