ಬೆಂಗಳೂರು :  ಸಂಪುಟ ವಿಸ್ತ​ರ​ಣೆಗೆ ಡಿ.22ರ ಮಹೂರ್ತ ನಿಗ​ದಿ​ಯಾಗಿದೆ ಎಂದು ಖುದ್ದು ಸಮ​ನ್ವಯ ಸಮಿತಿ ಅಧ್ಯಕ್ಷ ಸಿದ್ದ​ರಾ​ಮಯ್ಯ ಹೇಳಿ​ದ್ದರೂ, ಅದನ್ನು ನಂಬುವ ಸ್ಥಿತಿ​ಯಲ್ಲಿ ಸಂಪುಟ ಸ್ಥಾನಾಕಾಂಕ್ಷಿ ಕಾಂಗ್ರೆಸ್‌ ಶಾಸ​ಕರು ಇಲ್ಲ. 

ಇದು ಅಧಿ​ವೇ​ಶನ ಸುಗ​ಮ​ವಾಗಿ ನಡೆ​ಸಲು ಹೂಡಿ​ರುವ ತಂತ್ರ ಎಂಬ ಅನುಮಾನವನ್ನು ಅವರು ವ್ಯಕ್ತಪಡಿಸುತ್ತಿದ್ದಾರೆ.

ಅಲ್ಲದೆ, ಡಿ.16ರಿಂದ ಧನುರ್ಮಾಸ ಶುರುವಾಗಲಿದೆ. 2019ರ ಜನವರಿ 14ರವರೆಗೆ ಧನುರ್ಮಾಸ ಮುಂದುವರೆಯಲಿದ್ದು, ಧನುರ್ಮಾಸದಲ್ಲಿ ಶುಭ ಕಾರ್ಯ ಮಾಡಬಾರದು ಎಂಬ ನಂಬಿ​ಕೆ​ಯಿದೆ. 

ಹೀಗಾಗಿ ಡಿ.22ರ ವೇಳೆಗೆ ಧನುರ್ಮಾಸದ ನೆಪವೊಡ್ಡಿ ಸಂಪುಟ ವಿಸ್ತರಣೆ ಮತ್ತೆ ಮುಂದಕ್ಕೆ ಹಾಕುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತಿದೆ. ಇದಾದ ನಂತರ ಸ್ಥಳೀಯ ಸಂಸ್ಥೆ​ಗಳ ಚುನಾ​ವಣೆ ಹಾಗೂ ಅನಂತ​ರದ ಬಜೆಟ್‌ ಅಧಿ​ವೇ​ಶ​ನದ ಕಾರ​ಣ​ಗ​ಳನ್ನು ನೀಡಿ ಸಂಪುಟ ವಿಸ್ತ​ರಣೆ ಎಂಬುದನ್ನು ಮರೀ​ಚಿ​ಕೆ​ಯ​ನ್ನಾ​ಗಿ​ಸುವ ಸಾಧ್ಯ​ತೆಯೂ ಇದೆ ಎಂದು ಹೇಳಲಾಗುತ್ತಿದೆ.