ಉಡುಪಿ[ಡಿ.24] ಪೇಜಾವರ ಶ್ರೀಗಳಿಗೆ ಅರಳುಮರಳು ಎಂದು ಅಮೀನ್‌ ಮಟ್ಟು ಹೇಳಿರುವುದ್ನು ಕೋಟಾ ಶ್ರೀನಿವಾಸ ಪೂಜಾರಿ ಖಂಡಿಸಿದ್ದಾರೆ. ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಪೂಜಾರಿ,  ಅಖಂಡ ಹಿಂದೂ ಧರ್ಮದ ಶ್ರೇಷ್ಠ ಸನ್ಯಾಸಿ, ಅವರು ದೀಕ್ಷೆ ಸ್ವೀಕರಿಸಿ 80 ವರ್ಷಗಳು ಪೂರೈಸುತ್ತಿರುವ ಈ ಸಂದರ್ಭದಲ್ಲಿ ಸ್ವತಃ ರಾಷ್ಟ್ರಪತಿಗಳೇ ಉಡುಪಿಗೆ ಬಂದು ಗೌರವಿಸುತ್ತಿದ್ದಾರೆ. ಮಹಾನ್ ವ್ಯಕ್ತಿಗಳ ಬಗ್ಗೆ ಈ ರೀತಿ ಮಾತನಾಡುವುದು ಸರಿ ಅಲ್ಲ ಎಂದು ಹೇಳಿದ್ದಾರೆ.

ಇದು ದೇಶದ ಕಾರ್ಯಕ್ರಮವಾಗಿದೆ. ಇಂತಹ ಸಂದರ್ಭದಲ್ಲಿ ದಿನೇಶ್ ಅಮೀನ್ ಮಟ್ಟು ಅವರು ನೀಡಿರುವ ಹೇಳಿಕೆಯಿಂದ ಇಡೀ ಹಿಂದೂ ಧರ್ಮಕ್ಕೆ ನೋವಾಗಿದೆ ಎಂದು ಕೋಟಾ ಹೇಳಿದರು.

ಮೋದಿ ಬಗ್ಗೆ ಮಾತಾಡಿದ್ದ ಇಮ್ರಾನ್ ಖಾನ್‌ಗೆ ಕುಟುಕಿದ ಓವೈಸಿ

ಬಹುಶಃ ಇಡೀ ದೇಶದ ಪೊಲೀಸ್ ವ್ಯವಸ್ಥೆಯನ್ನು 15 ನಿಮಿಷಗಳ ಕಾಲ ಸ್ಥಗಿತಗೊಳಿಸಿ, ಇಡೀ ಹಿಂದೂ ಧರ್ಮವನ್ನೇ ಮುಗಿಸುತ್ತೇನೆ ಎಂದ ಅಸಾದುದ್ದೀನ್ ಓವೈಸಿಯಂತಹವರು ದಿನೇಶ್ ಅಮೀನ್ ಮಟ್ಟು ಅವರಿಗೆ ಬಹಳ ದೊಡ್ಡ ವ್ಯಕ್ತಿಯಾಗಿರಬೇಕು. ಆದ್ದರಿಂದ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಪೂಜಾರಿ ಟೀಕಿಸಿದರು.