Asianet Suvarna News Asianet Suvarna News

ಓ ದೇವರೇ...! 16 ಮಹಿಳೆಯರ ಮೇಲೆ ಪೊಲೀಸರಿಂದಲೇ ಅತ್ಯಾಚಾರ...!

ಚತ್ತೀಸ್‌'ಗಡ ಪೊಲೀಸರಿಂದಲೇ ಇಂಥ ವ್ಯಾಪಕ ಕಾನೂನು ಉಲ್ಲಂಘನೆಯಾದ ಬಗ್ಗೆ ಆಯೋಗ ಆಘಾತ ವ್ಯಕ್ತಪಡಿಸಿದೆ.

Chhattisgarh Police raped assaulted 16 women finds NHRC report

ರಾಯ್ಪುರ(ಜ.08): ಚತ್ತೀಸ್‌'ಗಡದಲ್ಲಿ ಪೊಲೀಸರೇ ಕನಿಷ್ಠ 16 ಮಹಿಳೆಯರ ಮೇಲೆ ಅತ್ಯಾಚಾರ, ಲೈಂಗಿಕ ಕಿರುಕುಳ, ಹಲ್ಲೆ ನಡೆಸಿದ್ದಾರೆ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌'ಎಚ್‌'ಆರ್‌'ಸಿ) ವರದಿ ತಿಳಿಸಿದೆ.

ಈ ವಿಷಯ ಆಯೋಗದ ತನಿಖೆಯ ವೇಳೆ ಪತ್ತೆಯಾಗಿದೆ. ಅಲ್ಲದೆ ಇಂಥಹುದೇ ದೌರ್ಜನ್ಯಗಳಿಗೊಳಗಾದ ಇನ್ನೂ 20 ಮಂದಿ ಸಂತ್ರಸ್ತೆಯರ ಹೇಳಿಕೆಗಳ ದಾಖಲೆಗಾಗಿ ಆಯೋಗ ನಿರೀಕ್ಷಿಸುತ್ತಿದೆ.

ವಿಷಯಕ್ಕೆ ಸಂಬಂಧಿಸಿ ಸಂತ್ರಸ್ತೆಯರಿಗೆ ₹ 37 ಲಕ್ಷ ಮಧ್ಯಂತರ ಹಣಕಾಸು ನೆರವು ಬಿಡುಗಡೆಗೊಳಿಸುವಂತೆ ಆಯೋಗ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.

ಅತ್ಯಾಚಾರಕ್ಕೊಳಗಾದ 8 ಸಂತ್ರಸ್ತೆಯರಿಗೆ ತಲಾ ₹ 3 ಲಕ್ಷ, ಲೈಂಗಿಕ ಕಿರುಕುಳಕ್ಕೊಳಗಾದ 6 ಮಂದಿಗೆ ತಲಾ ₹ 2 ಲಕ್ಷ ಮತ್ತು ಹಲ್ಲೆಗೊಳಗಾದ ಇಬ್ಬರಿಗೆ ತಲಾ ₹ 50,000 ಮಧ್ಯಂತರ ಪರಿಹಾರ ನೀಡಲು ಆಯೋಗ ಶಿಫಾರಸ್ಸು ಮಾಡಿದೆ.

ಚತ್ತೀಸ್‌'ಗಡ ಪೊಲೀಸರಿಂದಲೇ ಇಂಥ ವ್ಯಾಪಕ ಕಾನೂನು ಉಲ್ಲಂಘನೆಯಾದ ಬಗ್ಗೆ ಆಯೋಗ ಆಘಾತ ವ್ಯಕ್ತಪಡಿಸಿದೆ. ದಾಖಲೆಗಳ ಪರಿಶೀಲನೆಯ ಬಳಿಕ ಇಂಥ 34 ಸಂತ್ರಸ್ತೆಯರಿರುವುದನ್ನು ಆಯೋಗ ಪತ್ತೆ ಹಚ್ಚಿದೆ ಎಂದು ಮೂಲಗಳು ತಿಳಿಸಿವೆ.

Follow Us:
Download App:
  • android
  • ios