Asianet Suvarna News Asianet Suvarna News

ದಿಗಂತದಲ್ಲೊಂದು ಏಕಾಂಗಿ ನ್ಯೂಟ್ರಾನ್ ಸ್ಟಾರ್..!

ನಮ್ಮ ಕ್ಷೀರಪಥ ಗ್ಯಾಲಕ್ಸಿಯ ಹೊರಗೆ ಇದೇ ಮೊದಲ ಬಾರಿಗೆ ವಿಶೇಷ ರೀತಿಯ ನ್ಯೂಟ್ರಾನ್ ನಕ್ಷತ್ರವನ್ನು ನಾಸಾದ ಖಗೋಳಶಾಸ್ತ್ರಜ್ಞರು ಪತ್ತೆ ಹಚ್ಚಿದ್ದಾರೆ. ಎಕ್ಸ್-ರೇ ಅಬ್ಸರ್ವೇಟರಿ ಮತ್ತು ಚಿಲಿಯಲ್ಲಿರುವ ಯುರೋಪಿಯನ್ ಸದರ್ನ್ ಅಬ್ಸರ್ವೇಟರಿಯ ವೆರಿ ಲಾರ್ಜ್ ಟೆಲಿಸ್ಕೋಪ್ ಸಹಾಯದಿಂದ ಈ ನ್ಯೂಟ್ರಾನ್ ನಕ್ಷತ್ರವನ್ನು ಕಂಡುಹಿಡಿಯಲಾಗಿದೆ ಎಂದು ನಾಸಾ ತಿಳಿಸಿದೆ.

Astronomers Spot a Distant and Lonely Neutron Star

ವಾಷಿಂಗ್ಟನ್(ಮೇ 31): ನಮ್ಮ ಕ್ಷೀರಪಥ ಗ್ಯಾಲಕ್ಸಿಯ ಹೊರಗೆ ಇದೇ ಮೊದಲ ಬಾರಿಗೆ ವಿಶೇಷ ರೀತಿಯ ನ್ಯೂಟ್ರಾನ್ ನಕ್ಷತ್ರವನ್ನು ನಾಸಾದ ಖಗೋಳಶಾಸ್ತ್ರಜ್ಞರು ಪತ್ತೆ ಹಚ್ಚಿದ್ದಾರೆ. ಎಕ್ಸ್-ರೇ ಅಬ್ಸರ್ವೇಟರಿ ಮತ್ತು ಚಿಲಿಯಲ್ಲಿರುವ ಯುರೋಪಿಯನ್ ಸದರ್ನ್ ಅಬ್ಸರ್ವೇಟರಿಯ ವೆರಿ ಲಾರ್ಜ್ ಟೆಲಿಸ್ಕೋಪ್ ಸಹಾಯದಿಂದ ಈ ನ್ಯೂಟ್ರಾನ್ ನಕ್ಷತ್ರವನ್ನು ಕಂಡುಹಿಡಿಯಲಾಗಿದೆ ಎಂದು ನಾಸಾ ತಿಳಿಸಿದೆ.

ಈ ನ್ಯೂಟ್ರಾನ್ ನಕ್ಷತ್ರವು ಸೂಪರ್ ನೋವಾದ ಅವಶೇಷಗಳೊಳಗಿದ್ದು, ಇದಕ್ಕೆ 1E 0102.2-7219 ಎಂದು ಹೆಸರಿಸಲಾಗಿದೆ. ಇದು ಸಣ್ಣ ಮೆಗೆಲ್ಲಾನಿಕ್ ಮೇಘದಲ್ಲಿ, ಭೂಮಿಯಿಂದ 200,000 ಬೆಳಕಿನ ವರ್ಷಗಳ ದೂರದಲ್ಲಿ ನೆಲೆಸಿದೆ ಎಂದು ನಾಸಾ ಮಾಹಿತಿ ನೀಡಿದೆ.

ನ್ಯೂಟ್ರಾನ್ ತಾರೆಗಳು ಭಾರಿ ನಕ್ಷತ್ರಗಳ ತೀವ್ರ ದಟ್ಟವಾದ ಕೋರೆಗಳಾಗಿದ್ದು, ಸೂಪರ್ ನೋವಾ ಸ್ಫೋಟಕ್ಕೆ ಒಳಗಾಗುತ್ತವೆ. ಈ ಹೊಸದಾಗಿ ಗುರುತಿಸಲ್ಪಟ್ಟ ನ್ಯೂಟ್ರಾನ್ ತಾರೆ ಅಪರೂಪದ ವಿಧವಾಗಿದ್ದು, ಅದು ಕಡಿಮೆ ಕಾಂತೀಯ ಕ್ಷೇತ್ರ ಹೊಂದಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

Follow Us:
Download App:
  • android
  • ios