Asianet Suvarna News Asianet Suvarna News

ಮಥುರಾ ಗೋವರ್ಧನ ಪರ್ವತ ಬಳಿ ನಿರ್ಮಿಸಿದ್ದ 7 ಮಸೀದಿ ಧ್ವಂಸ

ಇಲ್ಲಿನ ಗೋವರ್ಧನ ಪರ್ವತ ವ್ಯಾಪ್ತಿಯಲ್ಲಿ ನಿರ್ಮಿಸಲಾಗಿದ್ದ 7 ಮಸೀದಿಗಳನ್ನು ಉತ್ತರಪ್ರದೇಶ ಸರ್ಕಾರ ನೆಲಸಮಗೊಳಿಸಿದೆ. 

7 Masjid Demolished In Mathura
Author
Bengaluru, First Published Nov 22, 2018, 11:17 AM IST

ಮಥುರಾ: ಇಲ್ಲಿನ ಗೋವರ್ಧನ ಪರ್ವತ ವ್ಯಾಪ್ತಿಯಲ್ಲಿ ನಿರ್ಮಿಸಲಾಗಿದ್ದ 7 ಮಸೀದಿಗಳನ್ನು ಉತ್ತರಪ್ರದೇಶ ಸರ್ಕಾರ ನೆಲಸಮಗೊಳಿಸಿದೆ. ಈ ಅಕ್ರಮ ಮಸೀದಿಗಳನ್ನು ನೆಲಸಮಗೊಳಿಸುವಂತೆ ಹಸಿರು ನ್ಯಾಯಾಧೀಕರಣ ಆದೇಶಿಸಿತ್ತು. 

ಆದಾಗ್ಯೂ, ಈ ಆದೇಶ ಪಾಲನೆಯಾಗಿರಲಿಲ್ಲ. ಆದರೆ, ಇದೀಗ ಯೋಗಿ ಆದಿತ್ಯನಾಥ್‌ ಸರ್ಕಾರ ಇಲ್ಲಿ ನಿರ್ಮಿಸಲಾಗಿದ್ದ 7 ಮಸೀದಿಗಳನ್ನು ನ. 12ರಂದು ನೆಲಸಮಗೊಳಿಸಿದೆ.

 ಹಿಂದೂ ಪುರಾಣದ ಪ್ರಕಾರ ಈ ಪ್ರದೇಶವು ಹಿಂದೂ ಸಮುದಾಯಕ್ಕೆ ವಿಶೇಷವಾದ ಸ್ಥಳವಾಗಿದ್ದು, ಮಳೆಯ ಅಧಿಪತಿಯಾಗಿರುವ ಇಂದ್ರನ ಕೋಪದಿಂದ ಈ ಪ್ರದೇಶವನ್ನು ರಕ್ಷಿಸಲು ಶ್ರೀಕೃಷ್ಣನು ಈ ಪ್ರದೇಶವನ್ನು ತನ್ನ ಒಂದು ಬೆರಳಿನಿಂದ ಈ ಗುಡ್ಡವನ್ನೇ ಮೇಲೆತ್ತಿದ್ದ ಎಂಬ ಪ್ರತೀತಿಯಿದೆ. ಈ ಹಿನ್ನೆಲೆಯಲ್ಲಿ ದೇಶದ ವಿವಿಧ ಭಾಗಗಳಿಂದ ಇಲ್ಲಿಗೆ ಬರುವ ಭಕ್ತಾದಿಗಳು ಪ್ರದಕ್ಷಿಣೆ ಹಾಕುತ್ತಾರೆ.

Follow Us:
Download App:
  • android
  • ios