ಹಲವಾರು ಬಾರಿ ಗಡುವು, ಎಚ್ಚರಿಕೆ ನೀಡಿದ್ದಾಗ್ಯೂ ಗ್ರಾಮ ಪಂಚಾಯತಿಗಳು ವಿವಿಧ ವಸತಿ ಯೋಜ ನೆಗಳ ಫಲಾನುಭವಿಗಳ ಪಟ್ಟಿಯನ್ನು ಸಲ್ಲಿಸದೇ ಇರುವುದನ್ನು ಗಂಭೀರವಾಗಿ ಪರಿಗಣಿಸಿರುವ ವಸತಿ ಇಲಾಖೆ ಆಯ್ಕೆ ಪಟ್ಟಿಯನ್ನು ಸ್ವೀಕರಿಸುವ ತಂತ್ರಾಂಶವನ್ನೇ ಬಂದ್‌ ಮಾಡಲಿದೆ.

ಬೆಂಗಳೂರು(ಜೂ.27): ಹಲವಾರು ಬಾರಿ ಗಡುವು, ಎಚ್ಚರಿಕೆ ನೀಡಿದ್ದಾಗ್ಯೂ ಗ್ರಾಮ ಪಂಚಾಯತಿಗಳು ವಿವಿಧ ವಸತಿ ಯೋಜ ನೆಗಳ ಫಲಾನುಭವಿಗಳ ಪಟ್ಟಿಯನ್ನು ಸಲ್ಲಿಸದೇ ಇರುವುದನ್ನು ಗಂಭೀರವಾಗಿ ಪರಿಗಣಿಸಿರುವ ವಸತಿ ಇಲಾಖೆ ಆಯ್ಕೆ ಪಟ್ಟಿಯನ್ನು ಸ್ವೀಕರಿಸುವ ತಂತ್ರಾಂಶವನ್ನೇ ಬಂದ್‌ ಮಾಡಲಿದೆ.

ವಸತಿ ಇಲಾಖೆ ಗ್ರಾಮ ಪಂಚಾಯತಿಗಳಿಗೆ ನೀಡಿದ್ದ ಅನೇಕ ರೀತಿಯ ಎಚ್ಚರಿಕೆ, ಗಡುವುಗಳು ಮುಕ್ತಾಯವಾಗಿರುವ ಕಾರಣ ಆಯ್ಕೆ ಪಟ್ಟಿಸ್ವೀಕರಿ ಸುವ ತಂತ್ರಾಂಶವನ್ನೇ ವಸತಿ ಇಲಾಖೆ ಬಂದ್‌ ಮಾಡಿ ಪರ್ಯಾಯ ವ್ಯವಸ್ಥೆ ಮಾಡಲು ಮುಂದಾಗಿದೆ. ಇದರೊಂದಿಗೆ 6 ತಿಂಗಳ ಹಿಂದೆಯೇ ಆಯ್ಕೆ ಮಾಡಿದ್ದರೂ ಇಲಾಖೆಗೆ ಸಲ್ಲಿಸದೆ ಬಿದ್ದಿದ್ದ ಗ್ರಾಮ ಪಂಚಾಯತಿಗಳ ಕೈಯಲ್ಲಿರುವ ಫಲಾನು ಭವಿಗಳ ಪಟ್ಟಿಕಸದ ಬುಟ್ಟಿಗೆ ಸೇರುವ ಸಾಧ್ಯತೆ ಇದೆ. ಆದರೆ ಫಲಾನುಭವಿಗಳಿಗೆ ತೊಂದರೆಯಾಗಬಾರದು ಎಂದು ವಸತಿ ಇಲಾಖೆ ಮೊಬೈಲ್‌ ಮೂಲ ಕ ಗ್ರಾಮಸಭೆ ನಡೆಸಿ ಅಲ್ಲೇ ಫಲಾನುಭವಿಗಳನ್ನು ಆರಿಸುವ ತಂತ್ರಾಂಶ ಅಳವಡಿಸುತ್ತಿದೆ.

ಆಶ್ರಯ ಮನೆ ಸೇರಿದಂತೆ ವಸತಿ ಯೋಜನೆಗಳ ಫಲಾನುಭವಿಗಳ ಆಯ್ಕೆಯನ್ನು ಗ್ರಾಮಸಭೆ ನಡೆಸಬೇಕೇ ಅಥವಾ ಶಾಸಕರು ನಡೆಸಬೇಕೇ ಎಂಬ ಸಮಸ್ಯೆಗೆ ಹೈಕೋರ್ಟ್‌ ಮಧ್ಯಂತರ ಆದೇಶದ ಮೂಲಕ ಪರಿಹಾರ ನೀಡಿದೆ. ಈ ಮೂಲಕ ಸ್ಥಗಿತವಾಗಿದ್ದ ಎರಡು ಲಕ್ಷ ವಸತಿ ಯೋಜನೆಗಳ ಫಲಾನುಭವಿಗಳಿಗೆ ಮನೆ ನಿರ್ಮಿಸಲು ಅವಕಾಶ ಕಲ್ಪಿಸಿದೆ. ಸ್ಥಗಿತವಾಗಿದ್ದ ಎರಡು ಲಕ್ಷ ಫಲಾನು ಭವಿಗಳಲ್ಲಿ ಒಂದು ಲಕ್ಷದಷ್ಟುಫಲಾನುಭವಿಗಳನ್ನು ತಾಲೂಕು ಪಂಚಾಯತಿಗಳ ಇಒಗಳೇ ಅಂತಿಮಗೊಳಿಸಿ ಸರ್ಕಾರಕ್ಕೆ ಕಳುಹಿಸಿ ದ್ದಾರೆ. ಇನ್ನು ಗ್ರಾಮ ಪಂಚಾಯಿತಿಯಿಂದಲೇ ಅನುಮೋದನೆ ಯಾಗಿ ಬಾರದಿರುವ ಫಲಾನುಭವಿಗಳ ಸಂಖ್ಯೆ ಒಂದು ಲಕ್ಷಕ್ಕೂ ಹೆಚ್ಚು.

9600ಕ್ಕೂ ಹೆಚ್ಚಿನ ಗ್ರಾಮ ಪಂಚಾಯತಿಗಳು ಗ್ರಾಮಸಭೆ ನಡೆಸಿ ಬಸವ ವಸತಿ, ಅಂಬೇಡ್ಕರ್‌ ವಸತಿ, ವಾಜಪೇಯಿ, ಇಂದಿರಾ ಅವಾಸ್‌ ಯೋಜನೆ ಫಲಾನುಭವಿಗಳನ್ನು ಆಯ್ಕೆ ಮಾಡಿ 6 ತಿಂಗಳೇ ಕಳೆದಿವೆ. ಆದರೆ ಪಂಚಾಯತಿ ಅಧಿಕಾರಿಗಳು ನೆಪ ಹೇಳುತ್ತಾ ಪಟ್ಟಿಯನ್ನು ತಮ್ಮಲ್ಲೇ ಇರಿಸಿಕೊಂಡಿದ್ದಾರೆ. ಅನೇಕ ಕಡೆ ಫಲಾನುಭವಿಗಳಿಂದ ಹಣ ಕೇಳಲಾಗುತ್ತಿದೆ ಎಂಬ ಆಕ್ಷೇಪಗಳಿವೆ. ಈ ಬಗ್ಗೆ ಐದು ಬಾರಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಎಚ್ಚರಿಕೆಗಳನ್ನು ನೀಡಲಾಗಿತ್ತು. ಜೂ.25ರ ವರೆಗೂ ಗಡುವು ನೀಡಲಾಗಿತ್ತು. ಇದೀಗ ಗಡುವು ಮುಗಿದಿದ್ದು, ಈತನಕ ಯಾವೊಂದು ಗ್ರಾಮ ಪಂಚಾಯತಿಗಳೂ ಪಟ್ಟಿಸಲ್ಲಿಸಿಲ್ಲ. ಇನ್ನು ಮುಂದೆ ಸಲ್ಲಿಸುವುದಕ್ಕೂ ಆಗದಂತೆ ವಸತಿ ಇಲಾಖೆ ತನ್ನ ತಂತ್ರಾಂಶವನ್ನು ಲಾಕ್‌ ಮಾಡುತ್ತಿದೆ. 
ಪರಿಹಾರವಾಗಿ ‘ಇಂದಿರಾ' ಎಂದು ಹೊಸ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದೆ. ಇದನ್ನು ಪಿಡಿಒಗಳು ತಮ್ಮ ಮೊಬೈಲ್‌ನಲ್ಲಿ ಅಳವಡಿಸಿಕೊಂಡು ಗ್ರಾಮಗಳಿಗೆ ಹೋಗಿ ತಂತ್ರಾಂಶ ಆನ್‌ ಮಾಡಿ ಗ್ರಾಮಸಭೆ ನಡೆಸಬೇಕು. ಅಲ್ಲೇ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು. ಅದು ಜಿಪಿಎಸ್‌ ತಂತ್ರಜ್ಞಾನದ ಮೂಲಕ ಅಲ್ಲಿಂದಲೇ ಇಲಾಖೆಗೆ ರವಾನೆಯಾ ಗುತ್ತದೆ. ಈ ವ್ಯವಸ್ಥೆ ಸದ್ಯದಲ್ಲೇ ಜಾರಿಯಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕ್ರಮ ಜರುಗಿಸದ ಆರ್‌ಡಿಪಿಆರ್‌: ಕಳೆದ ವರ್ಷಗಳಿಂದ ಕುಂಟುತ್ತಿದ್ದ ವಸತಿ ಇಲಾಖೆಯನ್ನು ಸಚಿವ ಎಂ.ಕೃಷ್ಣಪ್ಪ ಚುರುಕುಗೊಳಿಸಲು ಯತ್ನಿಸಿದ್ದಾರೆ. ಆದರೆ ಚುರುಕಿನ ವೇಗಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಸಹಕಾರ ಸಿಗದೆ ಬ್ರೇಕ್‌ ಬೀಳುತ್ತಿದೆ. ಏಕೆಂದರೆ ವಸತಿ ಇಲಾಖೆ ಎಷ್ಟೇ ತ್ವರಿತವಾಗಿ ಯೋಜನೆ ರೂಪಿಸಿದರೂ ಅನುಷ್ಠಾನಕ್ಕೆ ಆರ್‌ಡಿಪಿಆರ್‌ ಇಲಾಖೆಯನ್ನೇ ನೆಚ್ಚಿಕೊಳ್ಳಬೇಕು. ಗ್ರಾಮ ಪಂಚಾಯತಿಗಳ ಪಿಡಿಒಗಳು ಇನ್ನೂ 2016-17ನೇ ಸಾಲಿನ ಫಲಾನುಭವಿಗಳ ಪಟ್ಟಿಯನ್ನು ಆಯ್ಕೆ ಮಾಡಿ ಕಳುಹಿಸುತ್ತಿಲ್ಲ. ಹಾಗೆಂದು ಅವರ ವಿರುದ್ಧ ವಸತಿ ಇಲಾಖೆ ಕ್ರಮ ಕೈಗೊಳ್ಳಲಾಗುತ್ತಿಲ್ಲ. ಹೋಗಲಿ ಪಂಚಾಯತಿ ಅಧಿಕಾರಿಗಳಾದರೂ ಕ್ರಮ ಕೈಗೊಳ್ಳುವರೇ ಎಂದರೆ ಅದೂ ಇಲ್ಲ. ಹೀಗಾಗಿ 2015-16ನೆ ಸಾಲಿನಲ್ಲಿ 5 ಲಕ್ಷ ಮನೆ ನಿರ್ಮಾಣ ಗುರಿ ಮಾತ್ರ ಸಾಧನೆಯಾಗಿದೆ. 

2016-17ನೆ ಸಾಲಿಗೆ 6 ಲಕ್ಷ ಮನೆ ನಿರ್ಮಾಣದ ಗುರಿಯಲ್ಲಿ ನಾಲ್ಕು ಲಕ್ಷ ಮನೆಗಳ ನಿರ್ಮಾಣ ಪ್ರಗತಿಯಲ್ಲಿದೆ. ಉಳಿದ ಎರಡು ಲಕ್ಷ ಫಲಾನುಭ ವಿಗಳ ಪಟ್ಟಿಗೆ ಸಂಬಂಧಿಸಿದಂತೆ ಕೆಲವು ಸಂಘಟನೆಗಳು ಸಾರ್ವಜನಿಕರ ಹಿತಾಸಕ್ತಿ ಅರ್ಜಿ ಸಲ್ಲಿಸಿ ಕೋರ್ಟ್‌ ಮೆಟ್ಟಿಲೇರಿದವು. ‘ಫಲಾನುಭವಿಗಳನ್ನು ಶಾಸಕರು ಆಯ್ಕೆ ಮಾಡುವುದು ಬೇಡ. ಮೇಲ್ವಿಚಾರಣೆ ಮಾಡುವ ಅಗತ್ಯವೂ ಇರಬಾರದು ಎಂದು ಹೇಳಿದ ನ್ಯಾಯಾಲಯ, ಕಾಯ್ದೆ ಪ್ರಕಾರ ಗ್ರಾಮಸಭೆಗೆ ಪರಮಾಧಿಕಾರವಿರುವಾಗ ಶಾಸಕರ ಹಸ್ತಕ್ಷೇಪ ಏಕೆ' ಎಂದು ಪ್ರಶ್ನಿಸಿದೆ. 

ನಂತರ ಈ ಬಗ್ಗೆ ಕೋರ್ಟ್‌ ಮಧ್ಯಂತರ ಆದೇಶ ನೀಡಿ, ವಸತಿ ಯೋಜನೆಯ ಫಲಾನುಭವಿಗಳಿಗೆ ತೊಂದರೆಯಾಗದಂತೆ ಆಯ್ಕೆ ಪ್ರಕ್ರಿಯೆ ಮುಗಿಸಿ ಎಂದು ಸರ್ಕಾರಕ್ಕೆ ಆದೇಶಿಸಿದೆ. ಅದರಂತೆ ಸರ್ಕಾರ ತ್ವರಿತ ಕ್ರಮಕ್ಕೆ ಮುಂದಾಗಿದೆ. ಆದರೆ ಗ್ರಾಮ ಪಂಚಾಯತಿಗಳು ಸ್ಪಂದಿಸುತ್ತಿಲ್ಲ. ಇದರಿಂದಾಗಿ ವಸತಿ ಯೋಜನೆ ಫಲಾನುಭವಿಗಳ ಪಟ್ಟಿವರ್ಷ ಕಳೆದರೂ ಸರ್ಕಾರವನ್ನು ತಲುಪಲು ಆಗಿಲ್ಲ. ಪರಿ ಣಾಮ ಸರ್ಕಾರ 2016-17ನೇ ಸಾಲಿಗೆ .3.50 ಸಾವಿರ ಕೋಟಿ ಸೇರಿದಂತೆ .1,000 ಕೋಟಿ ಅನುದಾನ ಲಭ್ಯವಿದ್ದರೂ ಬಳಸಿಕೊಳ್ಳಲಾಗುತ್ತಿಲ್ಲ.