ಬೆಳಗಾವಿ(ಡಿ.16): ಅಕ್ರಮ ಸಾರಾಯಿ ಮಾರಾಟದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದ ಯುವಕನೊಬ್ಬನ್ನು ವ್ಯಕ್ತಿಯೊಬ್ಬ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಜಿಲ್ಲೆಯ ಕಿತ್ತೂರು ತಾಲೂಕಿನ ದೇಮಟ್ಟಿ ಗ್ರಾಮದಲ್ಲಿ ಭಾನುವಾರ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ನಾಗನಗೌಡ ಪಾಟೀಲ್(21) ಎಂದು ಗುರುತಿಸಲಾಗಿದೆ. 

19 ವರ್ಷದ ಶಿವನಗೌಡ ಪಾಟೀಲ್ ಎಂಬಾತನೇ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಶಿವನಗೌಡ ದೇಮಟ್ಟಿ ಗ್ರಾಮದಲ್ಲಿ ಅಕ್ರಮವಾಗಿ ಸಾರಾಯಿ ಮಾರುತ್ತಿದ್ದನು. ಅಕ್ರಮ ಸಾರಾಯಿ ಮಾರಾಟದ ಬಗ್ಗೆ  ಮೃತ ನಾಗನಗೌಡ ಪೊಲೀಸರಿಗೆ ಮಾಹಿತಿ ನೀಡಿದ್ದನು ಎನ್ನಲಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಹೀಗಾಗಿ ಸಾರಾಯಿ ಮಾರಾಟಗಾರ ಶಿವನಗೌಡ ಪಾಟೀಲ್ ಕಿತ್ತೂರು ಪೊಲೀಸರಿಗೆ ಐದು ಸಾವಿರ ರು. ದಂಡ ಕಟ್ಟಿದ್ದನು. ಹೀಗಾಗಿ ಇದೇ ದ್ವೇಷ ಇಟ್ಟುಕೊಂಡಿದ್ದ ಶಿವನಗೌಡ ಪಾಟೀಲ್ ಭಾನುವಾರವಷ್ಟೇ ಪೊಲೀಸರಿಗೆ ದಂಡ ಕಟ್ಟಿ ಊರಿಗೆ ಮರಳಿ ಬಂದ ಕೂಡಲೇ ನಾಗನಗೌಡನನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.