ಬೆಳಗಾವಿ[ಅ. 04]  ಕಬ್ಬಿಣ ರಾಡ್ ನಿಂದ ಹೊಡೆದು ಗಂಡನನ್ನೇ  ಹೆಂಡತಿ ಮತ್ತು‌‌ ಕುಟುಂಬಸ್ಥರು ಸೇರಿ ಹತ್ಯೆ ಮಾಡಿದ್ದಾರೆ. ಬೆಳಗಾವಿಯ ಲಕ್ಷ್ಮೀ ನಗರದಲ್ಲಿ ದಾರುಣ ಘಟನೆ ನಡೆದಿದೆ. ಕಿರಣ ಲೊಕರೆ (28) ಎಂಬುವರನ್ನು ಮಾವನ ಮನೆಯವರೇ ಹತ್ಯೆ ಮಾಡಿದ್ದಾರೆ.

ಕಿರಣ ಮತ್ತು ಸವಿತಾ 5 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಒಂದು ವರ್ಷಗಳ ಹಿಂದೆ ಗಂಡ ಹೆಂಡತಿ ನಡುವೆ ಜಗಳ ಬಂದು ಪತಿ-ಪತ್ನಿ ದೂರವಾಗಿದ್ದರು.ದಂಪತಿಗಳಿಗೆ ಎರಡು‌ ವರ್ಷದ ಗಂಡು‌ ಮಗುವಿದೆ. ಬೆಂಗಳೂರಿಗೆ ಹೋಗಿದ್ದ ಸವಿತಾ ಶುಕ್ರವಾರ ಮನೆಗೆ ಹಿಂದಿರುಗಿದ್ದರು.

ಮಗನನ್ನು ನೋಡಲು ಕಿರಣ ಹೆಂಡಿ ಮನೆಗೆ ಹೋಗಿದ್ದರು. ಒಂದೇ ಓಣಿಯಲ್ಲಿ ವಾಸವಿದ್ದ ಕಿರಣ ಅವರು ಬಂದಿರುವುದನ್ನು ನೋಡಿ ಕಿರಣ ಬಂದಿರುವುದನ್ನ ಕಂಡು ಆಕ್ರೋಶಗೊಂಡ ಹೆಂಡತಿ ಮತ್ತು ತವರು ಮನೆಯವರು  ಸೇರಿ ಕಿರಣ ಮೇಲೆ ಹಲ್ಲೆ ಮಾಡಿದ್ದಾರೆ.

ಹೆಂಡತಿ ಸವಿತಾ, ಮಾವ ವಿಠ್ಠಲ, ಅತ್ತೆ ಸುರೇಖಾ, ಭಾಮೈದ ಜ್ಯೋತಿಬಾರಿಂದ ಓಣಿಯಲ್ಲಿ ಅಟ್ಟಾಡಿಸಿ ರಾಡ್ ‌ನಿಂದ ತಲೆಗೆ ಹೊಡೆದು ಮನೆಯ ಮುಂಭಾಗದಲ್ಲೇ ಹತ್ಯೆ ಮಾಡಿದ್ದಾರೆ. ಹುಡುಗನ ಮನೆಯ ಮುಂದೆಯೇ ಹುಡುಗ ಹತ್ಯೆಯಾಗಿ ಹೋಗಿದ್ದಾನೆ. ಶಹಾಪುರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ಪೊಲೀಸರು ಮಾಹಿತಿ ಕಲೆಹಾಕಿದ್ದಾರೆ.