Asianet Suvarna News Asianet Suvarna News

ಹಾಸ್ಟೆಲ್‌ಗಳಿಗೆ ಆರ್ಥಿಕ ಸಹಾಯ ಮಾಡುವವರ ಸಂಖ್ಯೆ ಕ್ಷೀಣ

  ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಸ್ಥಾಪಿತವಾಗಿರುವ ವಿದ್ಯಾರ್ಥಿನಿಲಯಗಳಿಗೆ ಆರ್ಥಿಕ ಸಹಾಯ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಹೀಗಾಗಿ, ವಿದ್ಯಾರ್ಥಿನಿಲಯಗಳನ್ನು ನಡೆಸುವುದು ಕಷ್ಟಕರವಾಗಿದೆ ಎಂದು ಯೋಗಿ ನಾರಾಯಣ ಬಣಜಿಗ (ಬಲಿಜ) ಸಂಘದ ಅಧ್ಯಕ್ಷ ಎಂ. ನಾರಾಯಣ ತಿಳಿಸಿದರು.

The number of financial contributors to hostels is decreasing snr
Author
First Published Oct 2, 2023, 6:44 AM IST

  ಮೈಸೂರು :  ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಸ್ಥಾಪಿತವಾಗಿರುವ ವಿದ್ಯಾರ್ಥಿನಿಲಯಗಳಿಗೆ ಆರ್ಥಿಕ ಸಹಾಯ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಹೀಗಾಗಿ, ವಿದ್ಯಾರ್ಥಿನಿಲಯಗಳನ್ನು ನಡೆಸುವುದು ಕಷ್ಟಕರವಾಗಿದೆ ಎಂದು ಯೋಗಿ ನಾರಾಯಣ ಬಣಜಿಗ (ಬಲಿಜ) ಸಂಘದ ಅಧ್ಯಕ್ಷ ಎಂ. ನಾರಾಯಣ ತಿಳಿಸಿದರು.

ನಗರದ ಯೋಗಿ ನಾರಾಯಣ ಬಣಜಿಗ (ಬಲಿಜ) ಸಂಘದ ಸರ್ವ ಸದಸ್ಯರ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮಾಜದ ಬಡ ವಿದ್ಯಾರ್ಥಿಗಳಿಗಾಗಿ ಸುಪ್ರೇರಣೆಯಿಂದ ಉಚಿತವಾಗಿ ದವಸ ಧಾನ್ಯಗಳನ್ನು ನೀಡುತ್ತಿದ್ದರು. ಸಮಾಜದ ಒಳಿತಿಗಾಗಿ ಹಲವಾರು ಜಾತಿ ಜನಾಂಗಗಳು ವಿದ್ಯಾರ್ಥಿನಿಲಯವನ್ನು ಸ್ಥಾಪಿಸಿ ವಿದ್ಯಾ ಕ್ಷೇತ್ರಕ್ಕೆ ಹೆಚ್ಚು ಉತ್ತೇಜಿನ ನೀಡುತ್ತಿವೆ. ಇತ್ತೀಚಿನ ದಿನಗಳಲ್ಲಿ ಜನರು ಸ್ಥಿತಿವಂತರಿದ್ದರು ಸಹಾಯಕ್ಕೆ ಮುಂದಾಗದಿರುವುದು ವಿಷಾದನಿಯ ಎಂದರು.

ಮಹಿಳಾ ವಿದ್ಯಾರ್ಥಿನಿಲಯಕ್ಕೆ ಅವಶ್ಯಕ ಉಪಕರಣಗಳಿಗೆ ಒಂದು ಲಕ್ಷ ರೂ. ಆರ್ಥಿಕ ಸಹಾಯ ನೀಡಿದ ನಿವೃತ್ತ ಉಪನ್ಯಾಸಕಿ ಕೆ.ಕೆ. ಶಾಂತ, ಪತಿ ಕೆ. ಚಂದ್ರಶೇಖರ್ ಹಾಗೂ 50 ಸಾವಿರ ರೂ. ಸಹಾಯ ನೀಡಿದ ಎಂ.ಎನ್. ವೇದಮೂರ್ತಿ ಅವರನ್ನು ಮೈಲ್ಯಾಕ್ ಮಾಜಿ ಅಧ್ಯಕ್ಷ ಎಚ್.ಎ. ವೆಂಕಟೇಶ್ ಸನ್ಮಾನಿಸಿದರು.

ಇದೇ ವೇಳೆ ಮೈಸೂರಿನ ಜಯನಗರದ ಬಲಿಜ ಸಂಘದ ಅಧ್ಯಕ್ಷರಾಗಿ ನೇಮಕಗೊಂಡಿರುವ ಎನ್. ಹೇಮಂತ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.

ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಆರ್. ಗೋಪಾಲಕೃಷ್ಣ, ನಿರ್ದೇಶಕರಾದ ಬಿ.ಕೆ. ಸುರೇಶ್, ಕೆ.ಸಿ. ಪ್ರಕಾಶ್, ಡಾ.ಟಿ. ರಮೇಶ್, ಕೆ.ಎನ್. ವಿಜಯಕೊಪ್ಪ, ಕೂಡ್ಲೆ ನಂಜಪ್ಪ, ಎನ್. ವಿಜಯ್ ಕುಮಾರ್, ಗೋಪಾಲಕೃಷ್ಣ ಕುರಟ್ಟಿ, ಜಿ. ರಮೇಶ್, ಡಾ.ಎಸ್. ಕೃಷ್ಣಪ್ಪ, ಎಚ್.ವಿ. ನಾಗರಾಜು, ಗೋವಿಂದರಾಜು, ಚೆಲುವರಾಜ್, ಕೆ. ಚಂದ್ರಶೇಖರ್, ಡಿ. ನಾಗರಾಜ್, ಕೆ. ಜನಾರ್ದನ್, ಬಿ.ಎಸ್. ಗುರುಮೂರ್ತಿ, ಎಂ.ಆರ್. ಗಿರೀಶ್, ಪಾರ್ಥಸಾರಥಿ, ಆರ್. ಪಾಂಡುರಂಗ, ಟಿ.ಎಸ್. ರಮೇಶ್, ಎಂ. ನಾಗರಾಜು, ಎಚ್.ಆರ್. ವೆಂಕಟೇಶ್, ಎಂ.ಸಿ. ರಘುಶೆಟ್ಟಿ ಇದ್ದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲಿ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರವೇಶ

ಉಡುಪಿ (ಸೆ.15): ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲಿ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರವೇಶ ಒದಗಿಸುವ ಉದ್ದೇಶದಿಂದ  ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ ಶೇ.25ರಷ್ಟು ಪ್ರವೇಶಾವಕಾಶವನ್ನು ಹೆಚ್ಚಿಸಲಾಗುತ್ತಿದೆ ಎಂದು ರಾಜ್ಯ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದರಿಂದ ಈವರೆಗೆ ವಿದ್ಯಾರ್ಥಿ ನಿಲಯಗಳಲ್ಲಿ ಪ್ರವೇಶ ಸಿಗದೆ ಸಂಕಷ್ಟ ಎದುರಿಸುತ್ತಿದ್ದ ರಾಜ್ಯದ ಸುಮಾರು 25 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಇತಿಹಾಸದಲ್ಲೇ ಇದೊಂದು ಮಹತ್ವದ ಹೆಜ್ಜೆಯಾಗಿದ್ದು, ಸುಮಾರು 250 ಹೊಸ ವಿದ್ಯಾರ್ಥಿ ನಿಲಯಗಳನ್ನು ತೆರೆಯುವ ಆರ್ಥಿಕ ಹೊರೆಯನ್ನು ಇದರಿಂದ ತಪ್ಪಿಸಲಾಗಿದೆ ಎಂದು ಹೇಳಿದ್ದಾರೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳಿಗೆ ಶೇ.25ರಷ್ಟು ಪ್ರವೇಶಾವಕಾಶ ಹೆಚ್ಚಿಸುವ ಹಾಗೂ ಇದರಿಂದ ಉಂಟಾಗುವ ಹೆಚ್ಚುವರಿ ವೆಚ್ಚವನ್ನು ವಿದ್ಯಾಸಿರಿ ಯೋಜನೆಗೆ ಒದಗಿಸುವ ಅನುದಾನದಿಂದ ಬಳಸಿಕೊಳ್ಳುವ ಇಲಾಖೆಯ ಪ್ರಸ್ತಾವನೆಗೆ ಆರ್ಥಿಕ ಇಲಾಖೆ ಅನುಮೋದನೆ ನೀಡಿದ್ದು, ಈ ಯೋಜನೆಯನ್ನು ಪ್ರಸಕ್ತ ಸಾಲಿನಲ್ಲಿಯೇ ಅನುಷ್ಠಾನಗೊಳಿಸಲಾಗುವುದು ಎಂದು ವಿವರಿಸಿದ್ದಾರೆ. 

ಉಡುಪಿಯಲ್ಲಿ ಹೆಚ್ಚುತ್ತಿರುವ ರಸ್ತೆ ಅವಘಡ: ಸೂಕ್ತ ಕ್ರಮಕ್ಕೆ ಡಿಸಿ ಕೂರ್ಮಾರಾವ್ ಸೂಚನೆ

ಈ ಪ್ರಸ್ತಾವನೆಯ ಅನುಷ್ಠಾನಕ್ಕೆ 54.20 ಕೋಟಿ ರೂ. ಅನುದಾನ ಬೇಕಾಗಿದ್ದು, ತುರ್ತಾಗಿ 7.50 ಕೋಟಿ ರೂ ಅನುದಾನ ಒದಗಿಸುವಂತೆ ಹಾಗೂ ಸಂಖ್ಯಾಬಲ ಹೆಚ್ಚಳದ ಜೊತೆಯಲ್ಲಿಯೇ ಅಗತ್ಯವಿರುವ 190 ಅಡುಗೆಯವರು, 328 ಅಡುಗೆ ಸಹಾಯಕರು ಸೇರಿ ಒಟ್ಟು 518 ಹುದ್ದೆಗಳನ್ನು ಸೃಜಿಸಲು ಕೋರಲಾಗಿತ್ತು ಎಂದರು. ಇದೀಗ ಆರ್ಥಿಕ ಇಲಾಖೆ ಪ್ರಸ್ತಾವನೆಗೆ ಸಹಮತಿ ನೀಡಿರುವುದರಿಂದ ಅನುಷ್ಠಾನ ಕಾರ್ಯ ಶೀಘ್ರವೇ ಅಗಲಿದೆ ಎಂದು ತಿಳಿಸಿದ ಅವರು, ಈ ಪ್ರಸ್ತಾವನೆಯನ್ನು ಅನುಮೋದಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೃತಜ್ಞತೆ ಸಲ್ಲಿಸಿದರು.

ಅಲ್ಪ ಪರಿಹಾರ ವಿತರಣೆಗೆ ಆಕ್ಷೇಪ: ಮಳೆಯಿಂದಾಗಿ ಮನೆ ಹಾನಿಯಾದ ಸಂತ್ರಸ್ತರಿಗೆ ಅಲ್ಪ ಪ್ರಮಾಣದಲ್ಲಿ ಹಾನಿ ಹಾಗೂ ಮಳೆನೀರು ನುಗ್ಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಕೇವಲ 5200 ವಿತರಣೆ ಮಾಡಿದ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇಲ್ಲಿನ ಸಹಾಯಕ ಆಯುಕ್ತರ ಕಚೇರಿಯಲ್ಲಿ ಶನಿವಾರ ಸಚಿವ ಕೋಟ ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಳೆಹಾನಿ, ಪರಿಹಾರ ವಿತರಣೆ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಮಳೆನೀರು ಯಾವುದೇ ಮನೆಗಳಿಗೆ ನುಗ್ಗಿದರೆ 10 ಸಾವಿರ ಹಾಗೂ ಭಾಗಶಃ ಮನೆ ಹಾನಿಯಾದವರ ಖಾತೆಗೆ 50 ಸಾವಿರ ಹಾಕಬೇಕು. ಅತಿಕ್ರಮಣ ಜಾಗದಲ್ಲಿದ್ದ ಮನೆ ಹಾನಿಯಾದರೂ ಪರಿಹಾರ ವಿತರಿಸಬೇಕು. 

Follow Us:
Download App:
  • android
  • ios