ಸುತ್ತೂರು : ಅವರೆ ಬೆಳೆಯಲ್ಲಿ ಕಾಯಿ ಕೊರಕ ನಿಯಂತ್ರಣ ತರಬೇತಿ

  ಸುತ್ತೂರಿನ ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಹುಳಿಯಾಲು ಗ್ರಾಮದಲ್ಲಿ ಅವರೆ ಬೆಳೆಯಲ್ಲಿ ಕಾಯಿ ಕೊರಕ ನಿಯಂತ್ರಣ ಕುರಿತು ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

Suttur Nut borer control training in pea crop snr

 ಸುತ್ತೂರು :  ಸುತ್ತೂರಿನ ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಹುಳಿಯಾಲು ಗ್ರಾಮದಲ್ಲಿ ಅವರೆ ಬೆಳೆಯಲ್ಲಿ ಕಾಯಿ ಕೊರಕ ನಿಯಂತ್ರಣ ಕುರಿತು ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಬೇಸಾಯ ಶಾಸ್ತ್ರ ವಿಜ್ಞಾನಿ ಶಾಮರಾಜ್ ಮಾತನಾಡಿ, ಅವರೆ ಬೆಳೆಯಲ್ಲಿ ಅಳವಡಿಸಿಕೊಳ್ಳಬಹುದಾದ ವೈಜ್ಞಾನಿಕ ಬೇಸಾಯ ಕ್ರಮ ಕುರಿತು ರೈತರಿಗೆ ಮಾಹಿತಿ ನೀಡಿದರು.

ನಂತರ ಸಸ್ಯ ಸಂರಕ್ಷಣೆ ವಿಭಾಗದ ವಿಜ್ಞಾನಿ ಡಾ.ವೈ.ಪಿ. ಪ್ರಸಾದ್ ಮಾತನಾಡಿ, ಅವರೆ ಬೆಳೆಯಲ್ಲಿ ಬರುವ ಪ್ರಮುಖ ಕೀಟವಾದ ಕಾಯಿಕೊರಕದ ಸಮಗ್ರ ನಿರ್ವಹಣಾ ಕ್ರಮ ನೆರೆದಿರುವ ರೈತರಿಗೆ ವಿವರಿಸಿದರು. ಈ ಕೀಟದ ನಿರ್ವಹಣೆಯಲ್ಲಿ ಪರಿಸರ ಸ್ನೇಹಿ ವಿಧಾನಗಳಾದ ಫೆರಮೋನ್ ಟ್ರ್ಯಾಪ್/ ಲಿಂಗಾಕರ್ಷಕ ಬಲೆಗಳ ಅಳವಡಿಕೆ ಮತ್ತು ಅಜಾದಿ ರಕ್ಟಿನ್ 10000 ಪಿಪಿಎಂ 1 ಮಿ.ಲೀ ಪ್ರತೀ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಿದರೆ ಈ ಕೀಟವನ್ನು ಸಮರ್ಪಕವಾಗಿ ನಿಯಂತ್ರಿಸಬಹುದು ಎಂದು ಅವರು ತಿಳಿಸಿಕೊಟ್ಟರು.

ಕೀಟದ ತೀರ್ವತೆ ಹೆಚ್ಚಾದಾಗ ಇಮಾಮೆಕ್ಟಿನ್ ಬೆಂಜೊ ಏಟ್ ಕೀಟನಾಶಕವನ್ನು 0.5 ಗ್ರಾಂ ಪ್ರತೀ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು ಎಂದು ಸೂಚಿಸಿದರು.

ಮುಂಚೂಣಿ ಪ್ರಾತ್ಯಕ್ಷತೆಯಡಿ ಆಯ್ದ 10 ರೈತರಿಗೆ ಲಿಂಗಾಕರ್ಷಕ ಬಲೆಗಳು, ಅಜಾದಿರಕ್ಟಿನ್ 10000 ಪಿಪಿಎಮ್ ಹಾಗೂ ಇಮಾಮೆಕ್ಟಿನ್ ಬೆಂಜೊಏಟ್ ಕೀಟನಾಶಕವನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಸುಮಾರು 20ಕ್ಕೂ ಹೆಚ್ಚು ರೈತರು ಪಾಲ್ಗೊಂಡು ಕಾರ್ಯಕ್ರಮದ ಪ್ರಯೋಜನ ಪಡೆದರು.

ಅನ್ನದಾತರಿಗೆ ಲೋಡ್ ಶೆಡ್ಡಿಂಗ್ ಶಾಕ್

ವರದಿ - ಪುಟ್ಟರಾಜು. ಆರ್. ಸಿ. ಏಷಿಯಾನೆಟ್  ಸುವರ್ಣ  ನ್ಯೂಸ್,  ಚಾಮರಾಜನಗರ.

ಚಾಮರಾಜನಗರ (ಅ.9): ಚಾಮರಾಜನಗರ ಜಿಲ್ಲೆಯ ಅನ್ನದಾತರಿಗೆ ಲೋಡ್ ಶೆಡ್ಡಿಂಗ್ ಶಾಕ್ ಎದುರಾಗಿದೆ. ಕಳೆದೊಂದು  ವಾರದಿಂದ  ರೈತರ  ಪಂಪ್  ಸೆಟ್ ಗಳಿಗೆ  ವಿದ್ಯುತ್  ಪೂರೈಕೆಯಲ್ಲಿ  ಭಾರೀ ವ್ಯತ್ಯಯವುಂಟಾಗಿದೆ. ಸರ್ಕಾರಕ್ಕೆ ರೈತರು ಹಿಡಿ ಶಾಪ ಹಾಕುತ್ತಿದ್ದಾರೆ.ಮೊದ್ಲೇ ವರುಣನ ಕೃಪೆಯಿಲ್ಲದೆ ಕಂಗೆಟ್ಟ ಅನ್ನದಾತನಿಗೆ ವಿದ್ಯುತ್ ಶಾಕ್ ನಿಂದ ಕೈಗೆ ಬಂದ ತುತ್ತು ಬಾಯಿಗಿಲ್ಲ ಅನ್ನೋವಂತಾಗ್ತಿದೆ. 

ಅತ್ತ ಮಳೆ ಇಲ್ಲ, ಇತ್ತ ಕರೆಂಟೂ ಇಲ್ಲ.ಬೆಳೆಗೆ ನೀರುಣಿಸಲು ಅನ್ನದಾತನ ಪರದಾಟ ನಡೆಸುವಂತಾಗಿದೆ. ಪಂಪ್ ಸೆಟ್ಗಳಿಗೆ 7 ಗಂಟೆ ತ್ರೀ ಫೇಸ್ ವಿದ್ಯುತ್ ಕೊಡುವುದಾಗಿ ಸರ್ಕಾರ ಬೊಬ್ಬೆ ಹೊಡೆಯುತ್ತಿದೆ. ಅದರೆ ಚಾಮರಾಜನಗರ ಜಿಲ್ಲೆಯಲ್ಲಿ 7 ಗಂಟೆ ಇರಲಿ, 2 ಗಂಟೆಯು ತ್ರೀಫೇಸ್  ಕರೆಂಟ್ ನೀಡದ ಚೆಸ್ಕಾಂ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಯಾವುದೇ ಮುನ್ಸೂಚನೆ ನೀಡದೆ ಕಳೆದೊಂದು ವಾರದಿಂದ ಅನಿಯಮಿತ ಲೋಡ್ ಶೆಡ್ಡಿಂಗ್ ಜಾರಿಯಲ್ಲಿದೆ. ಈಗಾಗ್ಲೇ ಜಿಲ್ಲೆಯಲ್ಲಿರುವ ಮೂರು ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲಾಗಿದೆ. ಸಿಎಂ ಸಿದ್ದರಾಮಯ್ಯ ಚಾಮರಾಜನಗರಕ್ಕೆ ಭೇಟಿ ಕೊಟ್ಟಿದ್ದ ವೇಳೆಯೂ ರೈತರ ಪಂಪ್ ಸೆಟ್ ಗಳಿಗೆ ವಿದ್ಯುತ್ ಪೂರೈಕೆ ಮಾಡುವಂತೆ ಸೂಚನೆ ಕೊಟ್ಟಿದ್ದರು. ಆದ್ರೆ ವಿದ್ಯುತ್ ಅಭಾವದಿಂದಾಗಿ ಚೆಸ್ಕಾಂ ವಿದ್ಯುತ್ ಪೂರೈಕೆ ಮಾಡಲಾಗ್ತಿಲ್ಲ.ಇದರಿಂದ ಬೆಳೆಗಳು ಒಣಗುವ ಪರಿಸ್ಥಿತಿ ಬಂದಿದೆ ಅಂತಾ ರೈತರು ಆಕ್ರೋಶ ಹೊರಹಾಕುತ್ತಾರೆ.

ಕರ್ನಾಟಕದಲ್ಲಿ ಅನಿಯಮಿತ ಲೋಡ್ ಶೆಡ್ಡಿಂಗ್, ಸಚಿವ ದರ್ಶನಾಪುರ ಹೇಳಿದ್ದಿಷ್ಟು

ಇನ್ನೂ ಜಿಲ್ಲೆಯಲ್ಲಿ ರೈತರ 74 ಸಾವಿರಕ್ಕೂ ಹೆಚ್ಚು ಪಂಪ್ ಸೆಟ್ಗಳಿದೆ. ಪಂಪ್ಸೆಟ್ ಅವಂಬಿಸಿ  ಬಾಳೆ, ಕಬ್ಬು, ಅರಿಶಿನ, ತರಕಾರಿ ಮೊದಲಾದ ಬೆಳೆಗಳನ್ನು ಅನ್ನದಾತರು ಬೆಳೆದಿದ್ದಾರೆ. ಈಗ ಬೆಳೆದು ನಿಂತ ಬೆಳೆಗೆ ಮಳೆಯು ಇಲ್ಲ, ಅತ್ತ ಪಂಪ್ಸೆಟ್ ಮೂಲಕ ನೀರುಣಿಸಲು ಕರೆಂಟು ಇಲ್ಲ ಅಂತಿದ್ದಾರೆ. ಇನ್ನೂ ಅಧಿಕಾರಿಗಳ ಬಗ್ಗೆ ಲೋಡ್ ಶೆಡ್ಡಿಂಗ್ ಬಗ್ಗೆ ಕೇಳಿದ್ರೆ ಎರಡು ದಿನಗಳಿಂದಷ್ಟೇ ಸಮಸ್ಯೆಯಾಗಿದೆ. ಮಳೆ ಕಡಿಮೆ ಹಾಗೂ ವಿದ್ಯುತ್ ಕೊರತೆ ಹಿನ್ನಲೆಯಲ್ಲಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಕೊಡಲಾಗ್ತಿಲ್ಲ ಅಂತಾ ಮಾಹಿತಿ ಕೊಡ್ತಿದ್ದಾರೆ. ಆದ್ರೆ ರೈತರು ಮಾತ್ರ ಕರೆಂಟ್ ಕೊಡದೆ ಕೈ ಕೊಟ್ಟ ಸರ್ಕಾರಕ್ಕೆ ರೈತರು ಹಿಡಿ ಶಾಪ ಹಾಕುತ್ತಿದ್ದಾರೆ. ಇದೇ ರೀತಿಯ ಪರಿಸ್ಥಿತಿ ಮುಂದುವರೆದರೆ ವಿಷ ಕುಡಿಯುವ ಪರಿಸ್ಥಿತಿ ಉದ್ಬವಾಗುತ್ತೆ ಅಂತಾರೆ ಅನ್ನದಾತರು.

ಒಟ್ನಲ್ಲಿ  ಜಿಲ್ಲೆಯ  ಅನ್ನದಾತರು  ಮಳೆ ಇಲ್ಲದೇ ಮೊದ್ಲೇ ಕಂಗೆಟ್ಟಿದ್ದಾರೆ. ಇದೀಗಾ ಗಾಯದ ಮೇಲೆ ಬರೆ ಅನ್ನುವಂತೆ ಪಂಪ್ ಸೆಟ್ ಗಳಿಗೆ 7 ಗಂಟೆ ಬದಲು 2 ಗಂಟೆಯಷ್ಟೇ ವಿದ್ಯುತ್ ಪೂರೈಕೆಯಾಗ್ತಿದೆ.ಇನ್ನೂ ಮುಂದಿನ ದಿನಗಳಲ್ಲೂ ವಿದ್ಯುತ್ ಪೂರೈಕೆ ಇಲ್ಲದಿದ್ರೆ ಅನ್ನದಾತನಿಗೆ ಸಂಕಷ್ಟ ಎದುರಾಗಲಿದೆ.. 

Latest Videos
Follow Us:
Download App:
  • android
  • ios