Asianet Suvarna News Asianet Suvarna News

ನಿರ್ಭಯಾ ಅನುದಾನದಡಿ ವಿಡಿಯೋ ಕಣ್ಗಾವಲು ವ್ಯವಸ್ಥೆ

ರೈಲ್ವೆ ವಲಯಗಳಲ್ಲಿ ಮೊದಲ ಹಂತವನ್ನು ಪೂರೈಸಿದ ನೈಋುತ್ಯ ವಲಯ| ಪ್ರಸ್ತುತ 20 ನಿಲ್ದಾಣದಲ್ಲಿ ವಿಎಸ್‌ಎಸ್‌ ವ್ಯವಸ್ಥೆ| ಮೊದಲ ಹಂತದಲ್ಲಿ ಒಂಬತ್ತು ರೈಲ್ವೆ ನಿಲ್ದಾಣಲ್ಲಿ ವಿಎಸ್‌ಎಸ್‌ ಅಳವಡಿಕೆ ಗುರಿ ಇಟ್ಟುಕೊಳ್ಳಲಾಗಿತ್ತು|

Southwest Zone Inplement CC Camera in Railway Stations for Security
Author
Bengaluru, First Published Jan 17, 2020, 7:42 AM IST

ಹುಬ್ಬಳ್ಳಿ(ಜ.17): ರೈಲ್ವೆ ನಿಲ್ದಾಣದಲ್ಲಿ ಸುರಕ್ಷತೆಗಾಗಿ ನಿರ್ಭಯಾ ಯೋಜನೆಯ ಅನುದಾನದಡಿ ಮೊದಲ ಹಂತದ ಸಿಸಿ ಕ್ಯಾಮೆರಾ (ವಿಡಿಯೋ ಕಣ್ಗಾವಲು ವ್ಯವಸ್ಥೆ) ಅಳವಡಿಕೆಯಲ್ಲಿ ನೈಋುತ್ಯ ರೈಲ್ವೆ ವಲಯ ನಿಗದಿತ ಅವಧಿಯೊಳಗೆ ಮುಕ್ತಾಯಗೊಳಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮೊದಲ ಹಂತದಲ್ಲಿ ಒಂಬತ್ತು ರೈಲ್ವೆ ನಿಲ್ದಾಣಲ್ಲಿ ವಿಎಸ್‌ಎಸ್‌ ಅಳವಡಿಕೆ ಗುರಿ ಇಟ್ಟುಕೊಳ್ಳಲಾಗಿತ್ತು. ಅದರಂತೆ ಬಳ್ಳಾರಿ (33 ಕ್ಯಾಮೆರಾ), ಬೆಳಗಾವಿ, ಹಾಸನ, ಬಂಗಾರಪೇಟ ಮತ್ತು ವಾಸ್ಕೋಡ ಗಾಮಾ ತಲಾ (36ಕ್ಯಾಮೆರಾ), ಬೆಂಗಳೂರು (21 ಕ್ಯಾಮೆರಾ), ಕೃಷ್ಣರಾಜಪುರಂ (25 ಕ್ಯಾಮೆರಾ), ಶಿವಮೊಗ್ಗ (24 ಕ್ಯಾಮೆರಾ) ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ ( 20 ಕ್ಯಾಮೆರಾ) ಅಳವಡಿಕೆ ಕಾರ್ಯ ಪೂರ್ಣಗೊಂಡಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

2 ನೇ ಹಂತದಲ್ಲಿ 21 ನಿಲ್ದಾಣಗಳಲ್ಲಿ ವಿಎಸ್‌ಎಸ್‌ ಅಳವಡಿಕೆಗೆ ಯೋಜಿಸಲಾಗಿದೆ. ಅರಸಿಕೆರೆ, ಬಾಗಲಕೋಟೆ, ಬಾಣಸವಾಡಿ, ಭದ್ರಾವತಿ, ವಿಜಯಪುರ, ಬಿರೂರ್‌, ಗದಗ, ಹರಿಹರ, ಹಾವೇರಿ, ಹಿಂದಪುರ, ಹೊಸಪೇಟೆ, ಹೊಸೂರು, ಕೊಪ್ಪಳ, ಲೋಂಡಾ, ಮಂಡ್ಯ, ತೋರಣಗಲ್ಲು, ತುಮಕೂರು, ಯಲಹಂಕ, ದಾವಣಗೆರೆ ಹಾಗೂ ಧಾರವಾಡ ಮತ್ತು ಕೆಂಗೇರಿಯಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಆಗಲಿದೆ.

ಇನ್ನು, ಪ್ರಸ್ತುತ ಒಟ್ಟಾರೆ ಮೊದಲ ಹಂತದಲ್ಲಿ ಹುಬ್ಬಳ್ಳಿ, ಹೊಸಪೇಟೆ, ಕೊಪ್ಪಳ, ಲೋಂಡಾ, ಕ್ಯಾಸಲರಾಕ್‌, ವಿಜಯಪುರ, ಧಾರವಾಡ, ಗದಗ, ಬೆಂಗಳೂರು, ಧಾರವಾಡ, ಯಶವಂತಪುರ ಹಾಗೂ ಮೈಸೂರು ಸೇರಿದಂತೆ ಒಟ್ಟಾರೆ 20 ನಿಲ್ದಾಣದಲ್ಲಿ ವಿಎಸ್‌ಎಸ್‌ ಕಾರ್ಯಾರಂಭ ಮಾಡಿದಂತಾಗಿದೆ. ನಿರ್ಭಯಾ ಯೋಜನೆಯ 250 ಕೋಟಿ ನಿಧಿಯಡಿ ಭಾರತೀಯ ರೈಲ್ವೆ ಮಂಡಳಿಯು ನೈಋುತ್ಯ ರೈಲ್ವೆ ನಿಲ್ದಾಣದ 31 ನಿಲ್ದಾಣ ಸೇರಿದಂತೆ ಒಟ್ಟಾರೆ 983 ನಿಲ್ದಾಣಗಳಲ್ಲಿ ವಿಡಿಯೋ ಕಣ್ಗಾವಲು ವ್ಯವಸ್ಥೆ ಒದಗಿಸಲು ಅನುಮೋದನೆ ನೀಡಿದೆ.

ಭದ್ರತಾ ಸಿಬ್ಬಂದಿ, 24/7 ಮಾದರಿಯಲ್ಲಿ ನಿಲ್ದಾಣ ನಿಯಂತ್ರಣ ಕೊಠಡಿಗಳಿಂದ ಮಾತ್ರವಲ್ಲದೆ ಅಂದರೆ ಹುಬ್ಬಳ್ಳಿ, ಮೈಸೂರು ಮತ್ತು ಬೆಂಗಳೂರಿನಲ್ಲಿರುವ ವಿಭಾಗೀಯ ಕೇಂದ್ರೀಯ ಭದ್ರತಾ ನಿಯಂತ್ರಣ ಕೊಠಡಿಗಳಿಂದಲೂ ಮೇಲ್ವಿಚಾರಣೆ ಮಾಡಬಹುದು. ಈ ವ್ಯವಸ್ಥೆಯು ವೀಡಿಯೊ ಕಣ್ಗಾವಲು, ಮುಖ ಪತ್ತೆ, ಸಾಮಗ್ರಿಗಳ ಪತ್ತೆ ಮುಂತಾದ ವೈಶಿಷ್ಟ್ಯ ಹೊಂದಿದೆ. ಟಿಕೆಟ್‌ ಕೌಂಟರ್‌, ವಾಹನ ನಿಲುಗಡೆ ಪ್ರದೇಶಗಳು, ಮುಖ್ಯ ಪ್ರವೇಶ / ನಿರ್ಗಮನ ದ್ವಾರಗಳು, ಸೇತುವೆಗಳಲ್ಲಿ ಕ್ಯಾಮೆರಾ ಅಳವಡಿಸಲಾಗಿದೆ.
 

Follow Us:
Download App:
  • android
  • ios