ಕೊಲ್ಲೂರಿನಲ್ಲಿ 79ನೇ ಜನ್ಮದಿನ ಆಚರಿಸಿಕೊಂಡ ಗಾಯಕ ಏಸುದಾಸ್

ದೇಶ ಕಂಡ ಅಪ್ರತಿಮ ಗಾಯಕ ಕೆ.ಜೆ.ಏಸುದಾಸ್ ಕೊಲ್ಲೂರು ಮುಕಾಂಬಿಕಾ ದೇವಸ್ಥಾನದಲ್ಲಿ ತನ್ನ 79 ನೇ ಜನ್ಮದಿನ ಆಚರಿಸಿಕೊಂಡಿದ್ದಾರೆ. ಕಳೆದ ಹಲವು ದಶಕಗಳಿಂದ ಮುಕಾಂಬಿಕೆಯ ಸನ್ನಿಧಿಯಲ್ಲೇ ಹುಟ್ಟಿದ ದಿನ ಆಚರಿಸುವುದು ಈ ಹಿರಿಯ ಗಾಯಕ ಪಾಲಿಸಿಕೊಂಡು ಬಂದ ಸಂಪ್ರದಾಯ. 
 
First Published Jan 10, 2019, 5:19 PM IST | Last Updated Jan 10, 2019, 5:29 PM IST

ದೇಶ ಕಂಡ ಅಪ್ರತಿಮ ಗಾಯಕ ಕೆ.ಜೆ.ಏಸುದಾಸ್ ಕೊಲ್ಲೂರು ಮುಕಾಂಬಿಕಾ ದೇವಸ್ಥಾನದಲ್ಲಿ ತನ್ನ 79 ನೇ ಜನ್ಮದಿನ ಆಚರಿಸಿಕೊಂಡಿದ್ದಾರೆ. ಕಳೆದ ಹಲವು ದಶಕಗಳಿಂದ ಮುಕಾಂಬಿಕೆಯ ಸನ್ನಿಧಿಯಲ್ಲೇ ಹುಟ್ಟಿದ ದಿನ ಆಚರಿಸುವುದು ಈ ಹಿರಿಯ ಗಾಯಕ ಪಾಲಿಸಿಕೊಂಡು ಬಂದ ಸಂಪ್ರದಾಯ. 

ಈ ಬಾರಿಯೂ ಸನ್ನಿಧಾನದಲ್ಲಿ ವಿಶೇಷ ಪೂಜೆ‌, ಚಂಡಿಕಾ ಹೋಮ ನಡೆಸಿದರು. ಕುಟುಂಬ ಸಹಿತರಾಗಿ ಬಂದಿದ್ದ ಏಸುದಾಸ್ ತಾಯಿಯ ಸನ್ನಿಧಿಯಲ್ಲಿ ಗಾಯನಸೇವೆ ನಡೆಸಿಕೊಟ್ಟರು. ಏಸುದಾಸ್ ಮುಕಾಂಬಿಕೆಯ ಸನ್ನಿಧಿಯಲ್ಲೇ ಸ್ವರ ಸಿದ್ದಿ ಪಡೆದೆ ಎಂಬ ಭಾವನೆ ಹೊಂದಿದ್ದಾರೆ. ಹಾಗಾಗಿ ತನ್ನ ಪ್ರತಿಯೊಂದು ಸುಖದುಖಗಳನ್ನು ಇಲ್ಲೇ ಕಳೆದಿದ್ದಾರೆ. 

ಈ ವೇಳೆ ಏಸುದಾಸ್ ಹುಟ್ಟು ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಲು ಕೇರಳದಿಂದ ಅಪಾರ ಸಂಖ್ಯೆಯ ಅಭಿಮಾನಿಗಳು ಬಂದಿದ್ದರು. ಏಸುದಾಸ್ ಅವರ ಜನಪ್ರಿಯ ಭಕ್ತಿಗೀತೆಗಳನ್ನು ಹಾಡಿದರು. ಸರಸ್ವತಿ ಮಂಟಪದ ಆವರಣದಲ್ಲಿ ನಡೆದ ಏಸುದಾಸ್ ಅವರ ಗಾಯನ ಸೇವೆ ಭಕ್ತಸಂದೋಹವನ್ನು ಖುಷಿಪಡಿಸಿತು. ಧರ್ಮ ಬೇಧವಿಲ್ಲದೆ ನಡೆಯುವ ಈ ಹುಟ್ಟುಹಬ್ಬ ಆಚರಣೆ ಸೌಹಾರ್ಧ ಸಂಸ್ಕೃತಿಯ ಸಂಕೇತವೂ ಆಗಿದೆ.