Asianet Suvarna News Asianet Suvarna News

ಯುವತಿ ಅತ್ಯಾಚಾರ ಎಸಗಿ ಪರಾರಿ : ಗ್ರಾಮ ಲೆಕ್ಕಾಧಿಕಾರಿ ವಿರುದ್ಧ ಕೇಸ್

  • ಯುವತಿಯೊಂದಿಗೆ ಸ್ನೇಹ ಬೆಳೆಸಿ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ 
  • ತಲೆ ಮರೆಸಿಕೊಂಡಿರುವ  ತಾಲೂಕಿನ ಹುನ್ಕುಂದ ಗ್ರಾಮ ಲೆಕ್ಕಾಧಿಕಾರಿಯ ವಿರುದ್ಧ ಪ್ರಕರಣ
rape case against village accountant in Kolar snr
Author
Bengaluru, First Published Sep 10, 2021, 1:19 PM IST
  • Facebook
  • Twitter
  • Whatsapp

ಬಂಗಾರಪೇಟೆ (ಸೆ.10): ಯುವತಿಯೊಂದಿಗೆ ಸ್ನೇಹ ಬೆಳೆಸಿ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಮಾಡಿ ಈಗ ತಲೆ ಮರೆಸಿಕೊಂಡಿರುವ  ತಾಲೂಕಿನ ಹುನ್ಕುಂದ ಗ್ರಾಮ ಲೆಕ್ಕಾಧಿಕಾರಿಯ ವಿರುದ್ಧ ಪ್ರಕರಣ ದಾಖಲಾಗಿದೆ. 

ಗ್ರಾಮ ಲೆಕ್ಕಾಧಿಕಾರಿ ಅವಿನಾಶ ಕಾಂಬ್ಳೆ  ಎಂಬುವವನು ಈ ಹಿಂದೆ ಕೆಜಿಎಫ್ ರಾಬರ್ಟ್‌ಸನ್‌ ಪೇಟೆ ನಾಡ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾಗ ಯುವತಿಯೊಬ್ಬಳ ಜತೆ ಸ್ನೇಹ ಬೆಳಸಿ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಹೊಂದಿದ್ದನು ಎನ್ನಲಾಗಿದೆ. 

ಶಿವಮೊಗ್ಗ; ಹುಚ್ಚು ಪ್ರೇಮ.. ದಟ್ಟ ಕಾಡಿನ ಮಧ್ಯೆ ಯುವತಿ ಶವ, ಕೊಂದವ ಆಸ್ಪತ್ರೆಯಲ್ಲಿದ್ದ!

ವಿಷಯ ತಿಳಿದ  ಯುವತಿ ಪೋಷಕರು  ಗಲಾಟೆ ಮಾಡಿದಾಗ ಆಕೆಯನ್ನು ವಿವಾಹವಾಗುವುದಾಗಿ ನಂಬಿಸಿದ್ದಾನೆ. ಅದರಂತೆ ಆಗಸ್ಟ್ 27 ರಂದು ಪಟ್ಟಣದ ಸಬ್‌ ರಿಜಿಸ್ಟ್ರಾರ್ ಕಚೇರಿಲ್ಲಿ ಮದುವೆಗೆ ವ್ಯವಸ್ಥೆ ಮಾಡಲಾಗಿತ್ತು. 

ಆದರೆ ಅವಿನಾಶ ಕಾಂಬ್ಳೆ ಬಾರದೆ ಕೈಕೊಟ್ಟು ಪರಾರಿಯಾಗಿದ್ದಾನೆ. ಈ ಕುರಿತು ಯುವತಿ ಪೊಲೀಸರಿಗೆ ದುರು ನೀಡಿದ್ದಾಳೆ.

Follow Us:
Download App:
  • android
  • ios