Asianet Suvarna News Asianet Suvarna News

ಶಿವಮೊಗ್ಗ; ಹುಚ್ಚು ಪ್ರೇಮ.. ದಟ್ಟ ಕಾಡಿನ ಮಧ್ಯೆ ಯುವತಿ ಶವ, ಕೊಂದವ ಆಸ್ಪತ್ರೆಯಲ್ಲಿದ್ದ!

Sep 9, 2021, 3:38 PM IST

ಶಿವಮೊಗ್ಗ(ಸೆ. 09)  ಹಾಸ್ಟೇಲ್ ನಲ್ಲಿ ಓದುತ್ತಿದ್ದ ಹುಡುಗಿ ಸ್ನೇಹಿತೆಯ ಜತೆ ಕಣ್ಮರೆಯಾಗುತ್ತಾಳೆ. ಆಕೆಯ ಹೆಣ ದೂರದ  ಕಾಡಿನಲ್ಲಿ ಇದೆ ಎಂದವ ಆಸ್ಪತ್ರೆಯ ಹಾಸಿಗೆ ಮೇಲೆ ಮಲಗಿದ್ದ. ಇದೊಂದು ವಿಚಿತ್ರ ಪ್ರೇಮ ಕತೆ.. ಪ್ರೀತಿ ಕೊಂದ ಕೊಲೆಗಾತಿಯೋ... ಕೊಲೆಗಾರನೋ!

ಒಂದೇ ಸೀರೆ .. ಭದ್ರಾವತಿ ತಾಯಿ ಮಗಳಿಗೆ ನೇಣಿನ ಕುಣಿಕೆಯಾಯಿತು! 

ಯುವತಿ ಹೆಣ, ಡೆತ್ ನೋಟ್..ವಿಷದ ಬಾಟಲಿ.. ಕುತ್ತಿಗೆಯಲ್ಲಿದ್ದ ಗಾಯದ ಗುರುತು ಬೇರೆಯದ್ದೇ ಕತೆ ಹೇಳಿತ್ತು. ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದ ಅಪರಾಧ ಸ್ಟೋರಿ.  ದಟ್ಟ ಕಾಡಿನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಯುವತಿಯ ಶವ ಪತ್ತೆಯಾಗಿದ್ದು. ತನಿಖೆಯ ಬೆನ್ನು ಬಿದ್ದ ಪೊಲೀಸರಿಗೆ ಒಂದೊಂದೆ ಮಾಹಿತಿ ತೆರೆದುಕೊಂಡಿತು.