ಮೈಸೂರು (ಆ.19):   ಮೈಸೂರಿನ ಸಂತ ಫಿಲೋಮಿನಾ ಚರ್ಚ್ ಬಿಷಪ್ ವಿರುದ್ಧದ ಅತ್ಯಾಚಾರ ಆರೋಪಕ್ಕೆ‌ ಹೊಸ ಟ್ವಿಸ್ಟ್ ಸಿಕ್ಕಿದೆ.

2019ರ ನವೆಂಬರ್ ತಿಂಗಳಿನಲ್ಲಿ ಬಿಷಪ್‌ ವಿರುದ್ಧ ಅತ್ಯಾಚಾರ ಆರೋಪ ಕೇಳಿ ಬಂದಿತ್ತು. ಬಿಷಪ್ ಕೆ.ಎಂ. ವಿಲಿಯಂ ವಿರುದ್ಧ ಹೊರಿಸಲಾಗಿದ್ದ ಅತ್ಯಾಚಾರ ಆರೋಪ ಮಾಡಲಾಗಿತ್ತು. ಆದರೆ ಇದೀಗ ಆರೋಪಿ ಹೊರಿಸಿದ್ದಾಕೆ ಉಲ್ಟಾ ಹೊಡೆದಿದ್ದಾಳೆ.

 ಷಪ್ ನನ್ನ ಮೇಲೆ ಅತ್ಯಾಚಾರ ಎಸಗಿ ಕೊಲೆ ಬೆದರಿಕೆ ಹಾಕಿದ್ದರು ಎಂದು ಆರೋಪಿಸಿದ್ದಾಕೆ ಇದೀಗ ಯಾರದ್ದೋ ಒತ್ತಡಕ್ಕೆ ಮಣಿದು ನಾನು ಅತ್ಯಾಚಾರ ಆರೋಪ ಮಾಡಿದ್ದೆ ಎಂದು ನರಸಿಂಹರಾಜಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. 

ಕೇರಳ ಸನ್ಯಾಸಿನಿ ರೇಪ್‌: ಆರೋಪಿ ಪಾದ್ರಿ ಮುಲಕ್ಕಲ್‌ಗೆ ಕೊರೋನಾ!

ಬಿಷಪ್ ಯಾವುದೇ ತಪ್ಪು ಮಾಡಿಲ್ಲ.  ನನ್ನಿಂದ ಬಲವಂತವಾಗಿ ಹೇಳಿಕೆ ಕೊಡಿಸಲಾಗಿತ್ತು. ನಾನು ಪ್ರಾಣ ಬೆದಕರಿಕೆ, ಒತ್ತಡಕ್ಕೆ ಮಣಿದು ಸುಳ್ಳು ಆರೋಪ ಮಾಡಿದ್ದೆ ಎಂದು  ಫಾದರ್ ಗಿಲ್ಬರ್ಟ್ ಅರಾನಾ, ಫಾದರ್ ಬೆಕಿಟ್ ಡಿಸೋಜಾ, ಡಾ.ಜೆರಿ ಫಯಸ್ ಸೇರಿ 16 ಮಂದಿ ವಿರುದ್ಧ ದೂರು ದಾಖಲಿಸಿದ್ದಾಳೆ. 

ಫಾದರ್ ಗಿಲ್ಬರ್ಟ್ ಅರಾನಾ ಸೇರಿ ಇವರೆಲ್ಲಾ ಬಿಷಪ್ ವಿರುದ್ಧ ಸುಳ್ಳು ಆರೋಪಹೊರಿಸುವಂತೆ ಒತ್ತಡ ಹೇರಿದ್ದರು. ನನ್ನ ಮಗು ಹಾಗೂ ನನ್ನನ್ನು ಕೊಲೆ ಮಾಡುವುದಾಗಿ ಹೇಳಿದ್ದರು. ಪ್ರಾಣಭಯದಿಂದ ನಾನು ಸುಳ್ಳು ಹೇಳಬೇಕಾಯಿತು ಎಂದು ತಿರುಗಿ ಬಿದ್ದಿದ್ದಾಳೆ. ನನಗೆ ಒಡ್ಡಿದ ಬೆದರಿಕೆಗಳ ಬಗ್ಗೆ ನನ್ನ ಬಳಿ ದಾಖಲೆಗಳು ಇವೆ. ಮುಂದಿನ ದಿನಗಳಲ್ಲಿ ಅವುಗಳನ್ನು ಸಲ್ಲಿಕೆ ಮಾಡುವುದಾಗಿ ಆಕೆ ಹೇಳಿದ್ದಾಳೆ.

ಸುವರ್ಣ ನ್ಯೂಸ್ ಅಭಿಯಾನ ಸಾರ್ಥಕ: ಶುಲ್ಕ ಕಡಿಮೆ ಮಾಡಲು ಬಿಷಪ್ ಕಾಟನ್ ಶಾಲೆ ಒಪ್ಪಿಗೆ.
 
ಬಿಷಪ್ ಪ್ರತಿಕ್ರಿಯೆ
ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಬಿಷಪ್ ವಿನಿಯಂ ಸತ್ಯಕ್ಕೆ ಎಂದಿಗೂ ಜಯ ಸಿಕ್ಕೇ ಸಿಗುತ್ತದೆ. ನಾನು ಯಾವುದೇ ತಪ್ಪುಮಾಡಿಲ್ಲ. ನನ್ನ ಮೇಲೆ ಆರೋಪ ಹೊರಿಸಿದ್ದ ಮಹಿಳೆ ಯಾರೆಂದೇ ನನಗೆ ತಿಳಿದಿರಲಿಲ್ಲ. ನನ್ನ ವಿರುದ್ಧ ಪಿತೂರಿ ಮಾಡಿ ಇಂತಹ ಆರೋಪ ಹೊರಿಸಲಾಗಿತ್ತು ಎಂದು ಹೇಳಿದ್ದಾರೆ.