ಕೋಟ(ಆ.08): ಇಲ್ಲಿನ ಮಣೂರಿನ ಸಮುದ್ರ ತೀರದಲ್ಲಿ ಗುರುವಾರ ಪತ್ತೆಯಾಗಿದ ಶವವು ಕಾಸರಗೋಡಿನ ಅತ್ಯಾಚಾರಿ ಆರೋಪಿಯದ್ದು ಎಂದು ಗುರುತಿಸಲಾಗಿದೆ. ಮೃತ ಆರೋಪಿಯು ಕಾಸರಗೋಡಿನ ಕೂಡ್ಲು ಕಾಳ್ಯಾಂಗಾಡ್‌ ಮೂಲದ ಮಹೇಶ್‌( 28) ಎಂದು ಗುರುತಿಸಲಾಗಿದೆ.

ಈತನನ್ನು ಅತ್ಯಾಚಾರ ಪ್ರಕರಣವೊಂದರಲ್ಲಿ ಕಾಸರಗೋಡು ಪೊಲೀಸರು ಬಂಧಿಸಿದ್ದರು. ಕಳೆದ ವಾರ ಅತ್ಯಾಚಾರ ಸ್ಥಳ ಮಹಜರಿಗೆ ಆತನನ್ನು ಕಾಸರಗೋಡು ಬಂದರು ಬಳಿಗೆ ಕರೆತಂದಾಗ ಆತ ತಪ್ಪಿಸಿ ಸಮುದ್ರಕ್ಕೆ ಹಾರಿದ್ದನು. ಪೊಲೀಸರು, ಮುಳುಗು ತಜ್ಞರು, ಕರಾವಳಿ ರಕ್ಷಣಾ ಪಡೆ ಸಿಬ್ಬಂದಿ ಶೋಧಿಸಿದ್ದರೂ ಆತನ ಪತ್ತೆಯಾಗಿರಲಿಲ್ಲ.

ಸಮವಸ್ತ್ರದಲ್ಲಿಯೇ ಬಾವಿಗಿಳಿದು ವೃದ್ಧೆಯ ರಕ್ಷಿಸಿದ ಎಸ್‌ಐ

ಗುರುವಾರ ಮಣೂರು ಪಡುಕೆರೆ ಕಡಲ ಕಿನಾರೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಕೋಟ ಪೊಲೀಸರು ಆತನ ಗುರುತ ಪತ್ತೆಗೆ ಪ್ರಕಟಣೆ ಹೊರಡಿಸಿದ್ದರು. ಆತ ಧರಿಸಿದ್ದ ಟಿ ಶರ್ಟ್‌ ಆಧರಿಸಿ, ಕಾಸರಗೋಡು ಪೊಲೀಸರು ಆತ ಸಮುದ್ರಕ್ಕೆ ಹಾರಿದ್ದ ಮಹೇಶ್‌ ಎಂದು ಗುರುತಿಸಿದ್ದಾರೆ.