Asianet Suvarna News Asianet Suvarna News

Mandya : ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಚಾರ ಹೆಚ್ಚಳ, ಮಧ್ಯವರ್ತಿಗಳ ಹಾವಳಿ

ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಚಾರ ಹೆಚ್ಚಳವಾಗಿದೆ. ಮಧ್ಯವರ್ತಿಗಳ ಹಾವಳಿಯಿಂದ ರೈತರು, ಸಾರ್ವಜನಿಕರ ಕೆಲಸಗಳು ವಿಳಂಬವಾಗುತ್ತಿದೆ ಎಂದು ರೈತರು, ಸಾರ್ವಜನಿಕರು ಜಿಲ್ಲಾಧಿಕಾರಿ ಡಾ.ಎಚ್‌.ಎನ್‌.ಗೋಪಾಲಕೃಷ್ಣರಿಗೆ ದೂರುಗಳ ಸುರಿಮಳೆಗೈದರು.

Increase in corruption in government offices, menace of middlemen snr
Author
First Published Dec 8, 2022, 5:32 AM IST

 ಪಾಂಡವಪುರ: (ಡಿ. 08):  ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಚಾರ ಹೆಚ್ಚಳವಾಗಿದೆ. ಮಧ್ಯವರ್ತಿಗಳ ಹಾವಳಿಯಿಂದ ರೈತರು, ಸಾರ್ವಜನಿಕರ ಕೆಲಸಗಳು ವಿಳಂಬವಾಗುತ್ತಿದೆ ಎಂದು ರೈತರು, ಸಾರ್ವಜನಿಕರು ಜಿಲ್ಲಾಧಿಕಾರಿ ಡಾ.ಎಚ್‌.ಎನ್‌.ಗೋಪಾಲಕೃಷ್ಣರಿಗೆ ದೂರುಗಳ ಸುರಿಮಳೆಗೈದರು.

ತಾಲೂಕು ಕಚೇರಿಯಲ್ಲಿ ನಡೆದ ಜಿಲ್ಲಾಧಿಕಾರಿಗಳ ಕುಂದು ಕೊರತೆ ಸಭೆಯಲ್ಲಿ ಜಿಲ್ಲಾಧಿಕಾರಿಗಳು ತಾಲೂಕು ಕಚೇರಿಗೆ ಆಗಮಿಸಿ ಸಮಸ್ಯೆಗಳ ಅಹವಾಲು ಸ್ವೀಕರಿಸುವ ಬಗ್ಗೆ ಇಲ್ಲಿನ ಅಧಿಕಾರಿಗಳು ರೈತರು (Farmers) , ಸಾರ್ವಜನಿಕರಿಗೆ ಸರಿಯಾಗಿ ಮಾಹಿತಿಯನ್ನೇ ನೀಡಿಲ್ಲ. ಅದರಿಂದ ಸಭೆಗೆ ರೈತರು, ಸಾರ್ವಜನಿಕರು ಕಡಿಮೆ ಸಂಖ್ಯೆಯಲ್ಲಿ ಬಂದಿದ್ದಾರೆ ಎಂದು ಕಿಡಿಕಾರಿದರು.

ತಾಲೂಕು ಕಚೇರಿಯಲ್ಲಿ ಭ್ರಷ್ಟಾಚಾರ (Corruption)  ತಾಂಡವಾಡುತ್ತಿದೆ, ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಮಧ್ಯವರ್ತಿಗಳ ಮುಖಾಂತರ ಹೋದರೆ ಮಾತ್ರ ಇಲ್ಲಿ ರೈತರು, ಸಾರ್ವಜನಿಕರ ಕೆಲಸ ಕಾರ್ಯಗಳು ಆಗುತ್ತವೆ. ಇಲ್ಲವಾದರೆ ರೈತರು ತಮ್ಮ ಕೆಲಸ ಕಾರ್ಯಗಳಿಗಾಗಿ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.

ಸಕಾಲದಲ್ಲಿ ಸರಿಯಾಗಿ ಅರ್ಜಿಗಳ ವಿಲೇವಾರಿಯಾಗುತ್ತಿಲ್ಲ. ಪಾರ್ಕಿಂಗ್‌ ವ್ಯವಸ್ಥೆ ಸರಿಯಲ್ಲ. ಸಾರ್ವಜನಿಕ ಶೌಚಾಲಯ ನಿರ್ಮಾಣವಾಗಿದ್ದರೂ ಉದ್ಘಾಟನೆಯಾಗದೆ ಬಳಕೆಯಾಗುತ್ತಿಲ್ಲ. ಸರ್ವೇ ಇಲಾಖೆ, ರೆಕಾಡ್‌ ರೂಂನಲ್ಲಿ ಸಾಕಷ್ಟುಸಮಸ್ಯೆ ಎದುರಾಗಿದೆ. ಸಬ… ರಿಜಿಸ್ಟರ್‌ ಕಚೇರಿಯಲ್ಲಿ ಭ್ರಷ್ಟಾಚಾರ ತಾಂಡವಾಗುತ್ತಿದೆ ಎಂದು ಆರೋಪಿಸಿದರು.

ಹಣಕೊಟ್ಟರೆ ಮಾತ್ರ ಕೆಲಸ ನಡೆಯುತ್ತಿದೆ. ಭತ್ತಕಟಾವು ಆರಂಭವಾಗಿದ್ದರೂ ಈವರೆಗೂ ಖರೀದಿ ಕೇಂದ್ರ ಆರಂಭವಾಗಿಲ್ಲ, ರಸಗೊಬ್ಬರ ದರ ಹೆಚ್ಚಾಗಿದೆ, ಜತೆಗೆ ಯೂರಿಯವನ್ನು ಸಮರ್ಪಕವಾಗಿ ಪೂರೈಕೆ ಮಾಡಬೇಕು ಎಂದು ರೈತಮುಖಂಡ ಕೆನ್ನಾಳು ವಿಜಯಕುಮಾರ್‌ ದೂರಿದರು.

ಕನಗನಮರಡಿ ಗ್ರಾಮದಲ್ಲಿ ಅಕ್ರಮವಾಗಿ ಕಲ್ಲು ಬ್ಲಾಸ್ಟಿಂಗ… ಮಾಡಲಾಗುತ್ತಿದೆ. ಅಲ್ಲಿನ ಗಣಿಗಾರಿಕೆ ಅರಣ್ಯದ ಪಕ್ಕದಲ್ಲಿಯೇ ಇದೆ. ಗಣಿಗಾರಿಕೆಯಿಂದ ಜನ ವಸತಿ ಪ್ರದೇಶಕ್ಕೆ, ವಿಸಿ ನಾಲೆ ಹುಲಿಕೆರೆ ಸುರಂಗ, ಅಕ್ವಡೆಚ್‌ ನಾಲೆಗೆ ಸಮಸ್ಯೆಯಾಗಿ ಅಪಾಯದ ಹಂಚಿಗೆ ಸಿಲುಕಿವೆ, ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ. ಕಲ್ಲು ಬ್ಲಾಸ್ಟಿಂಗ್‌ ಮಾಡಲು ಯಾವುದೇ ಅನುಮತಿ ಇಲ್ಲದಿದ್ದರೂ ನಿತ್ಯ ಅಕ್ರಮವಾಗಿ ಕಲ್ಲು ಸಿಡಿಸಿ ಗಣಿಗಾರಿಕೆ ನಡೆಸಲಾಗುತ್ತಿದೆ. ಕನಗನಮರಡಿ ಗ್ರಾಮಸ್ಥರು, ರೈತರು ಹಲವಾರು ಬಾರಿ ಪ್ರತಿಭಟನೆ ಮಾಡಿದರೂ ಸಹ ಅಧಿಕಾರಿಗಳು ಗಣಿಮಾಲೀಕರ ಪರವಾಗಿಯೇ ಕೆಲಸ ಮಾಡುತ್ತಿದ್ದಾರೆ ಎಂದು ಕನಗನಮರಡಿಯ ಮುಖಂಡ ಜಯರಾಮು, ರೈತಮುಖಂಡ ವಿಜಯಕುಮಾರ್‌ ಕಿಡಿಕಾರಿದರು.

ಪಿಎಸ್‌ಎಸ್‌ಎನ್‌ ಕಾರ್ಖಾನೆ ಆರಂಭವಾಗಿ ಮೂರುವರ್ಷಗಳು ಕಳೆದಿವೆ. ಗುತ್ತಿಗೆಪಡೆದಿರುವ ಮಾಲೀಕರಾದ ಮುರುಗೇಶ್‌ ನಿರಾಣಿ ಈವರೆಗೂ ಕಾರ್ಖಾನೆಯನ್ನು ರಿಜಿಸ್ಟರ್‌ ಮಾಡಿಸಿಕೊಂಡಿಲ್ಲ. ಹಣವನ್ನು ಸಹ ಸರಕಾರಕ್ಕೆ ಪಾವತಿಸಿಲ್ಲ. ಮೂರು ವರ್ಷದಿಂದ ಈವರೆಗೂ ಜನರಲ… ಮೀಟಿಂಗ್‌ ಕರೆದಿಲ್ಲ ಎಂದರು.

ಕಾರ್ಖಾನೆಯ ಆಸ್ತಿ ಸಂರಕ್ಷಣೆ ಮಾಡುವಂತೆ ಸಮಿತಿ ರಚನೆ ಮಾಡುವಂತೆ ಮನವಿ ಮಾಡಿದರೂ ಸಹ ಈವರೆಗೂ ಸಮಿತಿ ರಚಿಸಿಲ್ಲ. ಕಾರ್ಖಾನೆಯಲ್ಲಿ ಬೆಲೆಬಾಳುವ ಯಂತ್ರಗಳು ಕಳ್ಳತನವಾಗುತ್ತಿವೆ ಈ ಬಗ್ಗೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.

ಕ್ಯಾತನಹಳ್ಳಿ ಗ್ರಾಮದ ಯಶೋಧಮ್ಮ ಎಂಬುವರು ಮೂರು ಎಕೆರೆ ಜಮೀನಲ್ಲಿ 2.16 ಗುಂಟೆ ವ್ಯವಸಾಯ ಮಾಡುತ್ತಿದ್ದೇವೆ. ಪಕ್ಕದ ಜಮೀನ ಮಾಲೀಕ ನೀರು ಬಿಡಲು ತೊಂದರೆ ನೀಡುತ್ತಿದ್ದಾರೆ ದೂರು ನೀಡಿದರು. ಹಲವಾರು ಸಾರ್ವಜನಿಕರು ಜಿಲ್ಲಾಧಿಕಾರಿಗಳಿಗೆ ಸಮಸ್ಯೆಗಳಿಗೆ ಸಂಬಂಧಿಸಿದಂತೆ ದೂರು ಸಲ್ಲಿಸಿದರು.

ಜಿಲ್ಲಾಧಿಕಾರಿ ಡಾ.ಗೋಪಾಲಕೃಷ್ಣ ಮಾತನಾಡಿ, ಪಾಂಡವಪುರದಲ್ಲಿ ಸಾರ್ವಜನಿಕರ ಕುಂದುಕೊರತೆ ಸಭೆ ಕರೆದು ಚರ್ಚಿಸಲಾಗಿದೆ. ಸಭೆಯಲ್ಲಿ ಕಂದಾಯ

ಇಲಾಖೆಯ ಬಗ್ಗೆ ಹಲವಾರು ದೂರುಗಳು ಕೇಳಿಬಂದಿವೆ. ಇವುಗಳ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಮಧ್ಯವರ್ತಿಗಳ ಹಾವಳಿ ತಪ್ಪಿಸುವುದಕ್ಕೆ

ಕ್ರಮ ವಹಿಸಲಾಗುವುದು ಎಂದರು.

ಅಧಿಕಾರಿಗಳು ಕಚೇರಿಗೆ ಬಂದ ರೈತರು, ಸಾರ್ವಜನಿಕರ ಸಮಸ್ಯೆಗೆ ಸ್ಪಂಧಿಸಿ ಕೆಲಸ ಮಾಡಬೇಕು. ಸಕಾಲದ ಅರ್ಜಿ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿದೆ ಸಕಾಲ ಅರ್ಜಿ ವಿಲೇವಾರಿಯಲ್ಲಿ ಮಂಡ್ಯ ಜಿಲ್ಲೆ 5 ನೇ ಸ್ಥಾನದಲ್ಲಿದೆ. ಸರ್ವೇ ಹಾಗೂ ರೆಕಾಡ್‌ ರೂಂನಲ್ಲಿರುವ ಸಮಸ್ಯೆಗಳ ಬಗ್ಗೆ ಕ್ರಮವಹಿಸಲಾಗುವುದು. ಕನಗನಮರಡಿ ಸೇರಿದಂತೆ ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲುಗಣಿಗಾರಿಕೆ ಬಗ್ಗೆ ಪರಿಶೀಲಿಸಿ ಕ್ರಮವಹಿಸಲು ಎಸಿ ಹಾಗೂ ತಹಸೀಲ್ದಾರ್‌ಗೆ ಸೂಚಿಸಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಅಕ್ರಂ ಶಾ, ತಹಸೀಲ್ದಾರ್‌ ಎಸ್‌.ಎಲ…. ನಯನ, ಉಪತಹಸೀಲ್ದಾರ್‌ ವರುಣ್‌ ಸೇರಿದಂತೆ ಹಲವರು ಭಾಗವಹಿಸಿದ್ದರು.

Follow Us:
Download App:
  • android
  • ios