Vijayapura: ಕೊರೋನಾ 4ನೇ ಅಲೆ ಎದುರಿಸಲು ಸಿದ್ಧಗೊಂಡ ಗುಮ್ಮಟನಗರಿ ಜಿಲ್ಲಾಸ್ಪತ್ರೆ

• ಕೊರೊನಾ ನಾಲ್ಕನೇ ಅಲೆ ಎದುರಿಸಲು ಗುಮ್ಮಟನಗರಿ ಸಿದ್ಧ..!
• ಮುನ್ನೆಚ್ಚರಿಕಾ ಕ್ರಮವಾಗಿ ಹತ್ತಾರು ಟೆಸ್ಟಿಂಗ್ ಆರಂಭ..!
• ಕೊರೊನಾ ರೋಗಿಗಳಿಗೆ ಪ್ರತ್ಯೇಕ ಅಂಬುಲೇನ್ಸ್..!

Gummatanagari District Hospital is prepared to face the 4th wave of Corona sat

ವರದಿ - ಷಡಕ್ಷರಿ‌ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ವಿಜಯಪುರ (ಡಿ.24) : ಕೊರೋನಾ ನಾಲ್ಕನೇ ಹೊಸ್ತಿನಲ್ಲಿರುವ ವಿಜಯಪುರ ಜಿಲ್ಲೆಯಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ. ಕಳೆದ ಮೂರು ಅಲೆಯಲ್ಲಿ ಆಮ್ಲಜನಕ ಹಾಗೂ ಐಸಿಯು ಹಾಸಿಗೆಗಳ ಕೊರತೆ ಹೆಚ್ಚಿನ ಸಂಖ್ಯೆಯಲ್ಲಿ ಸಾವು ನೋವು ಕಾಣಿಸಿಕೊಂಡ ಕಹಿ ಅನುಭವ ಈ ಬಾರಿ ಆಗಬಾರದು ಎಂದು ಎರಡು ಆಮ್ಲಜನಕ ಘಟಕಗಳನ್ನು ಆಸ್ಪತ್ರೆಯ ಆವರಣ ದಲ್ಲಿ ಸ್ಥಾಪನೆ ಮಾಡಿದೆ.

ಕೊರೋನಾದಿಂದ ತೀವ್ರ ತೊಂದರೆ ಅನುಭವಿ ಸುತ್ತಿರುವ ರೋಗಿ ಗಳಿಗಾಗಿ 30 ವೆಂಟಿಲೇಟರ್ ವ್ಯವಸ್ಥೆ ಮಾಡಲಾಗಿದೆ.  ಚಿಕ್ಕಮಕ್ಕಳಿಗಾಗಿಯೇ ಪ್ರತ್ಯೇಕವಾಗಿ 20 ಹಾಸಿಗೆಗಳನ್ಮು‌ ಕಾಯ್ದಿರಿಸಲಾಗಿದೆ. ಅದರಲ್ಲಿ 10 ಹಾಸಿಗೆಗಳು ತೀವ್ರ ನಿಗಾ ಘಟಕವನ್ನು ಹೊಂದಿದೆ. 

ಕೊರೋನಾ ಟೆಸ್ಟ್ ಆರಂಭ: ಕಳೆದ ಒಂದು ವರ್ಷದಿಂದ ಕರೋನಾ ಹಾವಳಿ ತಗ್ಗಿದ ಕಾರಣ ಕರೋನಾ ಟೆಸ್ಟ್ ನಿಧಾನಗತಿಯಲ್ಲಿ ನಡೆಯುತ್ತಿತ್ತು. ಈಗ ಮತ್ತೆ ಕರೋನಾ ಗುಣಲಕ್ಷಣ ಹೊಂದಿ ದವರನ್ನು ಟೆಸ್ಟ್ ಗೆ ಹೆಚ್ಚೆಚ್ಚು ಒಳಪಡಿಸಲಾಗುತ್ತಿದೆ. ಪಾಸಿಟಿವ್ ಬಂದ್ ರೋಗಿಗಳ ಸಂಪರ್ಕದಲ್ಲಿ ಇರುವವರನ್ನು ತಕ್ಷಣ ಆಸೋಲೇಸನ್ ಮಾಡಿ ಪರೀಕ್ಷೆಗೆ ಒಳಪಡಿ ಸಲಾಗುತ್ತಿದೆ. ಕೊರೋನಾ ತಡೆಯಲು ಸಿಬ್ಬಂದಿ ಕೊರತೆ ಕಾಡದಂತೆ ಮುನ್ನಚ್ಚರಿಕೆ ಕ್ರಮಗಳನ್ನು ಸಹ ಕೈಗೊಳ್ಳಲಾಗಿದೆ. ಈಗಾಗಲೇ ಆಸ್ಪತ್ರೆ ವೈದ್ಯರಿಗೆ, ನರ್ಸ್ ಹಾಗೂ ಇತರೆ ಸಿಬ್ಬಂದಿಗಳಿಗೆ ತರಬೇತಿ ಸಹ ನೀಡಿದ್ದಾರೆ. 

ಕೇಂದ್ರದ ಕೊರೋನಾ ಎಲ್ಲಿ? ಹುಡುಕಿದರೂ ಕಾಣಿಸುತ್ತಿಲ್ಲ, ಸಚಿವರ ಪತ್ರಕ್ಕೆ ಕಾಂಗ್ರೆಸ್ ನಾಯಕನ ವ್ಯಂಗ್ಯ!

ಬೆಡ್ ಕೊರತೆಯಾಗದಂತೆ ನಿಗಾ: ಕೊರೋನಾ ಪಾಸಿಟಿವ್ ರೋಗಿಗಳಿಗೆ ಹಾಸಿಗೆಗಳ ಕೊರತೆಯಾಗದಂತೆ, ಒಟ್ಟು 250 ಹಾಸಿಗೆ ಬೆಡ್ ಸಿದ್ದಪಡಿಸಲಾಗಿದೆ. ಇವುಗಳಿಗೆ ಆಕ್ಸಿಜನ್ ಸೌಲಭ್ಯ ಸಹ ಕಲ್ಪಿಸಲಾಗಿದೆ. ಇದರ ಜತೆ ಸಾರಿ, ಐಎಲ್ ಐ ಪ್ರಕರಣಗಳಿಗೆ ಪ್ರತ್ಯೇಕ ವಾಗಿ, 15 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ. ಚಿಕ್ಕಮಕ್ಕಳಿಗೆ ಐಸಿಯು ಸೇರಿ 20 ಹಾಸಿಗೆ ಸಿದ್ದಪಡಿಸಲಾಗಿದೆ.  ಇದರ ಜತೆ 30 ವೆಂಟಿಲೇಟರ್, 10ಎಚ್ ಎಸ್ ಎನ್ ಸಿ, 10 ಸಿಪ್ಯಾಪ್ ಹಾಗೂ 60 ಆಕ್ಸಿಜನ್ ‌ಕನೆಕ್ಟರ್ ಸಹ ಮಾಡಲಾಗಿದೆ.

ಫಾಸ್ಟ್ ರಜಿಸ್ಟರ್ ಕೌಂಟರ್ ಓಪನ್: ಕರೋನಾ ಹೊರತು ಪಡಿಸಿ ಸಾಮಾನ್ಯ ರೋಗಿಗಳಿಗೆ ಸರದಿ ಸಾಲಿನಲ್ಲಿ ನಿಂತು ಚೀಟಿ ಮಾಡಿಸುವ ಬದಲು ಫಾಸ್ಟ್ ಟ್ಯ್ರಾಕಿಂಗ್ ರಜಿಸ್ಟರ್ ಕೌಂಟರ್ ಸಹ ಸ್ಥಾಪನೆಯಾಗಿದೆ. ಕರೋನಾ ಅವಶ್ಯಕ ಔಷಧಿ ಲಭ್ಯತೆಯನ್ನು ಹೆಚ್ಚುವರಿ ಕಾಯ್ದಿರಿಸಲು  ಸೂಚನೆ ನೀಡಲಾಗಿದೆ. ಕೊರೋನಾ ರೋಗಿಗಳಿಗೆ ಪ್ರತ್ಯೇಕ ಅಂಬುಲೈನ್ಸ್, ಆರ್ ಟಿಪಿಎಸ್ಆರ್ ಪ್ರಯೋಗಾಲಯ, ಎಲ್ಲ ರೀತಿಯ ತಪಾಸಣೆ, ಲಸಿಕಾ ಬೂತ್ ಸ್ಥಾಪಿಸಲಾಗಿದೆ ಎಂದು ಜಿಲ್ಲಾಸ್ಪತ್ರೆಯಲ್ಲಿರುವ ಸೌಲಭ್ಯಗಳ ಮಾಹಿತಿಯನ್ನು ಜಿಲ್ಲಾ ಸರ್ಜನ್ ಡಾ.ಸಂಗಣ್ಣ ಲಕ್ಕಣ್ಣನವರ ಮಾಹಿತಿ ನೀಡಿದರು.

Omicron BF.7: ನಾಮಕಾವಸ್ತೆಗೆ ಮಾಸ್ಕ್‌ ಹಾಕ್ಕೊಂಡ್ರೆ ಆಗಲ್ಲ, ಖರೀದಿಸುವಾಗ ಈ ವಿಚಾರ ನೆನಪಲ್ಲಿಡಿ

ಆಸ್ಪತ್ರೆಯಲ್ಲಿ ಕೈಗೊಂಡ ಕ್ರಮಗಳೇನು? 

  • ಆಕ್ಸಿಜನ್ (ಆಮ್ಲಜನಕ) ಲಭ್ಯತೆಗಾಗಿ ಈ ಬಾರಿ ಆರೋಗ್ಯ ಇಲಾಖೆ ಹೆಚ್ಚಿನ ಕಾಳಜಿ ವಹಿಸಿದೆ. 
  • ಆಸ್ಪತ್ರೆ ಆವರಣದಲ್ಲಿ1000ಎಲ್ ಪಿಎಂ ಹಾಗೂ 850 ಎಲ್ ಪಿಎಂ ಸಾಮರ್ಥ್ಯ ದ ಎರಡು ಆಮ್ಲಜನಕ ಘಟಕ (ಪ್ಲ್ಯಾಂಟ್) ಸ್ಥಾಪನೆ ಮಾಡಲಾಗಿದೆ. 
  • ದಿನದ 24ಗಂಟೆ ನಿರಂತರ ಆಮ್ಲಜನಕ ಉತ್ಪಾದನೆ ಹಾಗೂ ಸರಬರಾಜು ಮಾಡುವ ವ್ಯವಸ್ಥೆ ಮಾಡಲಾಗಿದೆ. 
  • 6 ಕಿಲೋ ಲಿಕ್ವಿಡ್ ಆಕ್ಸಿಜನ್ ಟ್ಯಾಂಕ್ ಸ್ಥಾಪನೆ ಮಾಡಿದೆ. 
  • ತುರ್ತು ಪರಿಸ್ಥಿತಿಗಾಗಿ 180ಡಿ ಮಾದರಿಯ ಆಕ್ಸಿಜನ್ ಜಂಬೋ ಸಿಲಿಂಡರ್ ಸಹ ಲಭ್ಯವಿದೆ. 
Latest Videos
Follow Us:
Download App:
  • android
  • ios