ಮಗನಿಗೆ ತಪ್ಪಿದ ಟಿಕೆಟ್ - ಬಿಎಸ್‌ವೈ ಪ್ರಚಾರದಿಂದ ದೂರ

ವರುಣಾ ಕ್ಷೇತ್ರದಿಂದ ಬಿಎಸ್‌ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರು ಕಣಕ್ಕೆ ಇಳಿಯುತ್ತಾರೆ  ಎನ್ನುವ ವಿಚಾರಕ್ಕೆ ಕೊನೆಯ ಕ್ಷಣದಲ್ಲಿ ಟ್ವಿಸ್ಟ್ ದೊರಕಿ ಅವರಿಗೆ ಬಿಜೆಪಿ ಟಿಕೆಟ್ ಕೈ ತಪ್ಪಿತ್ತು.  ಮಾಜಿ - ಹಾಲಿ ಸಿಎಂಗಳ ಪುತ್ರರ ನಡುವೆ ಫೈಟ್ ನಡೆಯಲಿದೆ ಎಂದು ಭಾವಿಸಿದ್ದ ವಿಚಾರ ಸಂಪೂರ್ಣ ತಲೆಕೆಳಗಾಗಿತ್ತು.  ವರುಣಾದಲ್ಲಿ ಮಗನಿಗೆ ಟಿಕೆಟ್ ಕೈ ತಪ್ಪಿದ್ದರಿಂದ ಇದೀಗ ಬಿಎಸ್’ವೈ ಬೇಸರಗೊಂಡಿದ್ದಾರಾ ಎನ್ನುವ ಪ್ರಶ್ನೆ ಮೂಡಿದೆ.

ಇದಕ್ಕೆ ಕೆಲವು ಕಾರಣಗಳು ಇದ್ದು, ಬಿಎಸ್‌ವೈ ಪ್ರಚಾರದ ವೇಳಾಪಟ್ಟಿಯಲ್ಲಿಯೂ ಕೂಡ ಅನೇಕ ರೀತಿಯ ಬದಲಾವಣೆಗಳು ಕಂಡು ಬಂದಿದೆ. 

Comments 0
Add Comment