ನಿಮಗೆ ಸ್ಟೇನೋ ಆಗುವ ಬಯಕೆ ಇದೆಯಾ? ಹಾಗಾದರೆ, ಅವಕಾಶ ಒದಗಿ ಬಂದಿದೆ. ಸ್ಟಾಫ್ ಸೆಲೆಕ್ಷನ್ ಕಮಿಷನ್(ಎಸ್‌ಎಸ್‌ಸಿ) ಭಾರತಾದ್ಯಂತ ಖಾಲಿ ಇರುವ ಸ್ಟೇನೋಗ್ರಾಫರ್ ಹುದ್ದೆಗಳನ್ನು  ಭರ್ತಿ ಮಾಡಲು ಮುಂದಾಗುತ್ತಿದೆ. ಈ ಹುದ್ದೆಗೆ ಆಯ್ಕೆಯಾಗಲು ಇಚ್ಛಿಸುವವರು ಕನಿಷ್ಠ 12ನೇ ತರಗತಿಯನ್ನು ಪಾಸು ಮಾಡಿಕೊಂಡಿರಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 4ನೇ  ತಾರೀಕು. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ನಲ್ಲೇ ಅರ್ಜಿಯನ್ನು ಭರ್ತಿ ಮಾಡಿ, ಸಬ್‌ಮಿಟ್ ಮಾಡಬೇಕು ಜೊತೆಗೆ ರೆಸೂಮ್ ಹಾಗೂ ಕವರಿಂಗ್ ಲೆಟರ್‌ ಕೂಡ ಲಗತ್ತಿಸಿರಬೇಕು.

work from home ಮಾಡುತ್ತಿದ್ದೀರಾ? ಹ್ಯಾಕರ್ಸ್ ಬಗ್ಗೆ ಇರಲಿ ಎಚ್ಚರ

ಏನು ಹುದ್ದೆ, ಎಲ್ಲಿ ನೇಮಕ?
ನೀವು ಅರ್ಜಿ ಹಾಕುತ್ತಿರುವುದು ಸ್ಟೇನೋಗ್ರಾಫರ್ ಹುದ್ದೆಗಳಿಗಾಗಿ. ಈ ನೇಮಕಾತಿಯನ್ನು ಸ್ಟಾಫ್‌ ಸೆಲೆಕ್ಷನ್ ಕಮಿಷನ್(ಎಸ್‌ಎಸ್‌ಸಿ) ನಡೆಸುತ್ತಿದೆ. ಆಯ್ಕೆಯಾದವರಿಗೆ ನಿಯಮಗಳ ಪ್ರಕಾರ ಸಂಬಳ ದೊರೆಯಲಿದೆ. ಇದು ಪೂರ್ಣಕಾಲಿಕ ಉದ್ಯೋಗವಾಗಿದ್ದು, ಆಯ್ಕೆಯಾದವರನ್ನು ಭಾರತದ ವಿವಿಧೆಡೆ ನೇಮಕ ಮಾಡಲಾಗುತ್ತದೆ.

ಅರ್ಜಿ ಶುಲ್ಕ 
ಸಾಮಾನ್ಯ ಹಾಗೂ ಹಿಂದುಳಿದ ವರ್ಗ(ಒಬಿಸಿ)ದ ಅಭ್ಯರ್ಥಿಗಳು 100 ರೂಪಾಯಿ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಮಾಜಿ ಸೈನಿಕ(ಎಸ್‌ಸಿ, ಎಸ್‌ಟಿ ಮತ್ತು ಮಾಜಿ ಸೈನಿಕ) ಅಭ್ಯರ್ಥಿಗಳ ಯಾವುದೇ ಅರ್ಜಿ ಶುಲ್ಕವನ್ನು ಭರಿಸುವ ಅಗತ್ಯವಿಲ್ಲ. ಅಭ್ಯರ್ಥಿಗಳು ಪರೀಕ್ಷಾ ಶುಲ್ಕವನ್ನು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಅಥವಾ ಇ ಚಲನ್ ಮೂಲಕ ಪಾವತಿ ಮಾಡಬಹುದು.

IPL ಗ್ರೌಂಡಲ್ಲಿ Unacademy board: ಇದರ ಹಿಂದಿದೆ ಯಶಸ್ಸಿನ ಕಥೆ

ವಿದ್ಯಾರ್ಹತೆ ಏನೇನಿರಬೇಕು?
ಸ್ಟೇನೋಗ್ರಾಫರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕಡ್ಡಾಯವಾಗಿ 12 ನೇ  ತರಗತಿಯನ್ನು ಪಾಸು ಮಾಡಿಕೊಂಡಿರಬೇಕು. ಅಥವಾ 12ನೇ ತರಗತಿಗೆ ಸಮಾನವಾದ ಕೋರ್ಸನ್ನು ಅಧಿಕೃತ ಮಂಡಳಿ ಅಥವಾ ವಿಶ್ವ ವಿದ್ಯಾಲಯಗಳಿಂದ ಪಡೆದಿರಬೇಕು.

ಅರ್ಜಿ ಸಲ್ಲಿಕೆ ಆರಂಭ: 10 ಅಕ್ಟೋಬರ್ 2020.  ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 4 ನವೆಂಬರ್ 2020, 11.30 PMವರೆಗೆ

ವಯೋಮಿತಿ
1-8-2020ಕ್ಕೆ ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷ ಪೂರೈಸಿರಬೇಕು ಮತ್ತು 30 ವರ್ಷ ಮೀರಿರಬಾರದು. ವಯೋಮಿತಿ ರಿಯಾಯ್ತಿಗೆ ಅಧಿಕೃತ ವೆಬ್‌ಸೈಟ್‌ ನೋಡಿ.

ಆನ್‌ಲೈನ್ ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹ ಅಭ್ಯರ್ಥಿಗಳು 10.10.2020 ರಿಂದ 04.11.2020 , 11:30 PM ನಡುವೆ ಸ್ಟಾಫ್ ಸೆಲೆಕ್ಷನ್ ಕಮಿಷನ್(ಎಸ್‌ಎಸ್‌ಸಿ) ಜಾಲತಾಣ www.ssc.nic.in ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ಅರ್ಜಿ ಸಲ್ಲಿಸುವಾಗ ನಿಮ್ಮ ರೆಸೂಮ್ ಮತ್ತು ಕವರಿಂಗ್ ಲೆಟರ್ ಕೂಡ ಅಟ್ಯಾಚ್ ಮಾಡಬೇಕು, ಮರೆಯಬೇಡಿ. ಹೆಚ್ಚಿನ ಮಾಹಿತಿಗೆ ಎಸ್‌ಎಸ್‌ಸಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. ಅಭ್ಯರ್ಥಿಗಳು ನೋಂದಣಿಗಾಗಿ ಇಲ್ಲಿ ಕ್ಲಿಕ್ ಮಾಡಿ ಮತ್ತು ಅಪ್ಲಿಕೇಷನ್ ಫಾರ್ಮ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

ಫ್ಲಿಪ್‌ಕಾರ್ಟ್‌ನಲ್ಲಿ ಇಂಟರ್ನಿಯಾಗಿ, ದಿನಕ್ಕೆ 500 ರೂ. ಪಡೆಯಿರಿ