ನವದೆಹಲಿ (ಅ.23): ದಸರಾ, ದೀಪಾವಳಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರ 3737 ಕೋಟಿ ರು. ಬೋನಸ್‌ ಪ್ರಕಟಿಸಿದ ಬೆನ್ನಲ್ಲೇ, ರೈಲ್ವೆ ಇಲಾಖೆ ತನ್ನ ನೌಕರರಿಗೆ 78 ದಿನಗಳ ಬೋನಸ್‌ ನೀಡುವುದಾಗಿ ಗುರುವಾರ ಘೋಷಿಸಿದೆ. 

ಇದರಿಂದಾಗಿ ರೈಲ್ವೆಯ 11.58 ಲಕ್ಷ ಗೆಜೆಟೆಡ್‌ ಅಲ್ಲದ ಉದ್ಯೋಗಿಗಳಿಗೆ 2019-2020ನೇ ಸಾಲಿನಲ್ಲಿ 78 ದಿನಗಳಿಗೆ ಸಮನಾದ ಉತ್ಪಾದನೆ ಆಧಾರಿತ ಬೋನಸ್‌ ಲಭ್ಯಆಗಲಿದೆ. ರೈಲ್ವೆ ಇಲಾಖೆಗೆ 2081.68 ಕೋಟಿ ರು. ಹೆಚ್ಚುವರಿ ಹೊರೆ ಆಗಲಿದೆ ಎಂದು ಅಂದಾಜಿಸಲಾಗಿದೆ.

ಕೆಲಸದ ಇಂಟರ್‌ವ್ಯೂಗೆ ಹೋಗ್ತಾ ಇದೀರಾ? ಈ ವಿಷಯವನ್ನು ಮರೀಬೇಡಿ ...

ರೈಲ್ವೆ ಉದ್ಯೋಗಿಗಳಿಗೆ ಉತ್ಪಾದನೆ ಆಧಾರಿತ ಬೋನಸ್‌ ನೀಡುವಂತೆ ರೈಲ್ವೆ ಸಚಿವಾಲಯ ಕಳುಹಿಸಿದ್ದ ಪ್ರಸ್ತಾವನೆಗೆ ಬುಧವಾರ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಬೋನಸ್‌ಗೆ ಅರ್ಹರಾದ ಉದ್ಯೋಗಿಗಳು ತಿಂಗಳಿಗೆ 7000 ರು.ನಂತೆ 78 ದಿನಗಳಿಗೆ 17,951 ರು. ಬೋನಸ್‌ ಪಡೆಯಲಿದ್ದಾರೆ ಎಂದು ರೈಲ್ವೆ ಇಲಾಖೆಯ ಹೇಳಿಕೆಯಲ್ಲಿ ತಿಳಿಸಲಾಗಿದೆ.