Cine World
ಭಾಟಿಯಾ ಮತ್ತು ವಿಜಯ್ ವರ್ಮಾ ಎಲ್ಲಿಯೇ ಹೋದ್ರೂ ಒಟ್ಟಿಗೆ ಹೋಗುತ್ತಾರೆ. ಸಮಾರಂಭಗಳಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಇದೀಗ ಇವರಿಬ್ಬರ ಮದುವೆಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.
ಆದರೆ, ಈ ಜೋಡಿ ತಮ್ಮ ಮದುವೆಯ ಬಗ್ಗೆ ಇನ್ನೂ ಏನನ್ನೂ ಬಹಿರಂಗಪಡಿಸಿಲ್ಲ. ಈ ಜೋಡಿ ಡಿಸೆಂಬರ್ನಲ್ಲಿ ಮದುವೆಯಾಗಲಿದ್ದಾರೆ ಎಂಬ ರೂಮರ್ ಎದ್ದಿರುವ ಬೆನ್ನಲ್ಲೇ ತಮನ್ನಾ ಸಂದರ್ಶನವೊಂದರಲ್ಲಿ ಮೌನ ಮುರಿದಿದ್ದಾರೆ.
ನಾನು ವಿಜಯ್ ವರ್ಮಾ ಜೊತೆ ಮದುವೆಯೂ ಆಗಬಹುದು, ಏಕೆ?" ನನಗೆ ಮದುವೆಗೂ ವೃತ್ತಿಗೂ ಯಾವುದೇ ಸಂಬಂಧವಿಲ್ಲ. ನಾನು ಮಹತ್ವಾಕಾಂಕ್ಷೆ ಹೊಂದಿದ್ದೇನೆ ಮತ್ತು ಮದುವೆಯ ನಂತರವೂ ನಟನೆಯನ್ನು ಮುಂದುವರಿಸುತ್ತೇನೆ ಎಂದಿದ್ದಾರೆ.
ವಿಜಯ್ ಅವರೊಂದಿಗಿನ ತನ್ನ ಮದುವೆಯ ಬಗ್ಗೆ ವಿವರಗಳನ್ನು ನೀಡದಿದ್ರೂ ಶ ತೆಲುಗು ಮೀಡಿಯಾದಲ್ಲಿ ವರದಿ ಪ್ರಕಟವಾಗಿರುವ ಹಿನ್ನೆಲೆ ಗರಂ ಆಗಿದ್ದಾರೆ.
ವರದಿಯ ಪ್ರಕಾರ, ತಮ್ಮನ್ನಾ ವಿಜಯ ವರ್ಮಾ ಜೊತೆಗೆ ,ಮದುವೆಯಾಗುವ ಯೋಜಿಸುತ್ತಿದ್ದಾರೆ ಅದು ಮುಂದಿನ ವರ್ಷ ನಡೆಯಲಿದೆ ವಿಜಯ್ ಮತ್ತು ತಮನ್ನಾ ಮುಂಬೈನಲ್ಲಿ ಅಪಾರ್ಟ್ಮೆಂಟ್ಗಾಗಿ ಹುಡುಕುತ್ತಿದ್ದಾರೆ ಎನ್ನಲಾಗಿದೆ.
ಈ ವಿಷಯದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲವಾದರೂ, ವರದಿಗಳ ಪ್ರಕಾರ ದಂಪತಿಗಳು ಮದುವೆಯತ್ತ ಹೆಜ್ಜೆ ಹಾಕುತ್ತಿದ್ದಾರೆ.
ಲಸ್ಟ್ ಸ್ಟೋರೀಸ್ 2 ರ ಸೆಟ್ನಲ್ಲಿ ವಿಜಯ್ ಮತ್ತು ತಮನ್ನಾ ಪ್ರೀತಿಯಲ್ಲಿ ಬಿದ್ದರು ಮತ್ತು ಈ ಜೋಡಿ ಅಂದಿನಿಂದಲೂ ಇಬ್ಬರು ಒಟ್ಟಾಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ.
ತಮನ್ನಾ ಕೊನೆಯ ಬಾರಿಗೆ ಸ್ತ್ರೀ 2 ರ 'ಆಜ್ ಕಿ ರಾತ್' ನೃತ್ಯದಲ್ಲಿ ಕಾಣಿಸಿಕೊಂಡರು. ಈಗ ನಟಿಯ ನೆಟ್ಫ್ಲಿಕ್ಸ್ ಅಪರಾಧ ಡ್ರಾಮಾ ಸಿಕಂದರ್ ಕಾ ಮುಖದ್ದರ್ ನವೆಂಬರ್ 29 ರಂದು ಬಿಡುಗಡೆಯಾಗಲಿದೆ