- Home
- News
- India News
- India Latest News Live: ಶೀಘ್ರದಲ್ಲೇ ಸೀನಿಯರ್ ಸಿಟಿಜನ್ಸ್‌ಗೆ ರೈಲಿನ ಸ್ಲೀಪರ್, ಥರ್ಡ್ ಎಸಿ ಪ್ರಯಾಣ ದರ ರಿಯಾಯಿತಿ ಮರು ಜಾರಿ - ಸರ್ಕಾರದ ಭರವಸೆ
India Latest News Live: ಶೀಘ್ರದಲ್ಲೇ ಸೀನಿಯರ್ ಸಿಟಿಜನ್ಸ್‌ಗೆ ರೈಲಿನ ಸ್ಲೀಪರ್, ಥರ್ಡ್ ಎಸಿ ಪ್ರಯಾಣ ದರ ರಿಯಾಯಿತಿ ಮರು ಜಾರಿ - ಸರ್ಕಾರದ ಭರವಸೆ

ಭಾರತದ ಆರ್ಥಿಕತೆ ನಿರ್ಜೀವವಾಗಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಯನ್ನು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಬಲವಾಗಿ ಸಮರ್ಥಿಸಿಕೊಂಡಿದ್ದರೆ, ಕಾಂಗ್ರೆಸ್ ಸಂಸದರಾದ ಶಶಿ ತರೂರ್, ರಾಜೀವ್ ಶುಕ್ಲಾ ಅವರೇ ಬಹಿರಂಗವಾಗಿ ವಿರೋಧಿಸಿದ್ದಾರೆ. ಮತ್ತೊಂದೆಡೆ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಜೊತೆ ಮಹಾ ಅಘಾಡಿ ಒಕ್ಕೂಟದ ಭಾಗವಾಗಿರುವ ಉದ್ಧವ್ ಠಾಕ್ರೆ ಬಣದ ಶಿವಸೇನೆ ಕೂಡಾ ಟ್ರಂಪ್ ಹೇಳಿಕೆಯನ್ನು ಟೀಕಿಸಿದ್ದಾರೆ. ಆದರೆ ಕಾಂಗ್ರೆಸ್ನ ರಾಹುಲ್ ಗಾಂಧಿ ಮಾತ್ರ ಈ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು, ಅವರ ಹೇಳಿಕೆಗೆ ಭಾರಿ ವಿರೋಧ ವ್ಯಕ್ತವಾಗಿದೆ. 'ಟ್ರಂಪ್ ಹೇಳಿದ್ದು ಸತ್ಯ. ಪ್ರಧಾನಿ ಮೋದಿ ಮತ್ತು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಹೊರತುಪಡಿಸಿ ಉಳಿದೆಲ್ಲರಿಗೂ ಭಾರತದ ಆರ್ಥಿಕತೆ ಸತ್ತುಹೋಗಿದೆ ಎಂಬ ಅರಿವಿದೆ. ಟ್ರಂಪ್ ಅವರು ಈ ಸತ್ಯ ಹೇಳಿದ್ದಕ್ಕೆ ನನಗೆ ಖುಷಿ ಇದೆ. ಬಿಜೆಪಿಯು ಉದ್ಯಮಿ ಗೌತಮ್ ಅದಾನಿಗೆ ಅನುಕೂಲ ಮಾಡಿಕೊಡಲು ದೇಶದ ಆರ್ಥಿಕತೆಯನ್ನು ಹಾಳುಗೆಡವಿದೆ' ಎಂದು ರಾಹುಲ್ ಹೇಳಿದ್ದಾರೆ. ರಾಹುಲ್ ಹೇಳಿಕೆ ವಿರುದ್ಧ ಬಿಜೆಪಿ ತೀವ್ರ ಆಕ್ರೋಶ ಹೊರಹಾಕಿದೆ. ಟ್ರಂಪ್ ಹೇಳಿಕೆ ಬೆಂಬಲಿಸುವ ಮೂಲಕ ರಾಹುಲ್ ಗಾಂಧಿ ಅವರು ತೀರಾ ಕೆಳಮಟ್ಟಕ್ಕಿಳಿದಿದ್ದಾರೆ ಎಂದು ಬಿಜೆಪಿ ಹಿರಿಯ ನಾಯಕ ಅಮಿತ್ ಮಾಳವಿಯಾ ಕಿಡಿಕಾರಿದ್ದಾರೆ
India Latest News Liveಶೀಘ್ರದಲ್ಲೇ ಸೀನಿಯರ್ ಸಿಟಿಜನ್ಸ್‌ಗೆ ರೈಲಿನ ಸ್ಲೀಪರ್, ಥರ್ಡ್ ಎಸಿ ಪ್ರಯಾಣ ದರ ರಿಯಾಯಿತಿ ಮರು ಜಾರಿ - ಸರ್ಕಾರದ ಭರವಸೆ
India Latest News Liveರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಬಗ್ಗೆ ನಟಿ ಊರ್ವಶಿ ಅಸಮಾಧಾನ! ನಮ್ಮ ಪರವೂ ಲಾಭಿ ಮಾಡುವವರಿರಬೇಕು!
ರಾಷ್ಟ್ರೀಯ ಪ್ರಶಸ್ತಿಯಲ್ಲಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಪಡೆದ ಊರ್ವಶಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಉಲ್ಲೊಳುಕ್ಕು ಚಿತ್ರದಲ್ಲಿನ ಪಾತ್ರ ಪೋಷಕ ಪಾತ್ರವಲ್ಲ, ಪೂರ್ಣ ಪ್ರಮಾಣದ ಪಾತ್ರ ಎಂದು ಹೇಳಿದ್ದಾರೆ. ಅಚ್ಚುವಿನಮ್ಮ ಚಿತ್ರದ ಅಭಿನಯಕ್ಕೆ ಅತ್ಯುತ್ತಮ ನಟಿ ಪ್ರಶಸ್ತಿ ಸಿಗಬೇಕಿತ್ತು ಎಂದರು.
India Latest News Live'ನಾನು ಒಂದೇ ಬಾರಿ ದನಿ ಏರಿಸಿ ಮಾತನಾಡಿದ್ದಷ್ಟೇ..' ಧನಶ್ರೀ ವರ್ಮ ಜೊತೆಗಿನ ವಿಚ್ಛೇದನದ ಬಗ್ಗೆ ಚಾಹಲ್ ಮುಕ್ತ ಮಾತು!
ಕ್ರಿಕೆಟಿಗ ಯಜುವೇಂದ್ರ ಚಾಹಲ್ ಅವರು ಧನಶ್ರೀ ವರ್ಮ ಅವರೊಂದಿಗಿನ ತಮ್ಮ ವಿಚ್ಛೇದನದ ಬಗ್ಗೆ ಮೌನ ಮುರಿದಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ಆದ ಆತುರದ ನಿರ್ಧಾರ ಮತ್ತು ಜೀವನಶೈಲಿಯ ವ್ಯತ್ಯಾಸಗಳು ಬೇರ್ಪಡುವಿಕೆಗೆ ಕಾರಣ ಎಂದು ಚಾಹಲ್ ಹೇಳಿದ್ದಾರೆ.
India Latest News Liveಮಲ್ಯ, ಚೋಕ್ಸಿ ಪ್ರಕರಣದಿಂದ ಎಚ್ಚೆತ್ತ ಇಡಿ, ಅನಿಲ್ ಅಂಬಾನಿಗೆ ಲುಕ್‌ಔಟ್ ನೋಟಿಸ್!
India Latest News Live16 ತಿಂಗಳ ಕಾಯುವಿಕೆ ಅಂತ್ಯ; ಭಾರತಕ್ಕೆ ಸಿಕ್ತು ಸಿಹಿ ಸುದ್ದಿ, ಚೀನಾ-ಪಾಕ್‌ಗೆ ಆತಂಕ ಶುರು
India manufacturing PMI July 2025: ಕಳೆದ 16 ತಿಂಗಳಲ್ಲಿಯೇ ಅತಿ ಹೆಚ್ಚಿನ PMI ಇಂಡೆಕ್ಸ್ 59.1ಕ್ಕೆ ಏರಿಕೆಯಾಗಿದೆ. ಜುಲೈನಲ್ಲಿ ಉತ್ಪಾದನಾ ವಲಯದಲ್ಲಿ ಗಮನಾರ್ಹ ಬೆಳವಣಿಗೆ ಕಂಡುಬಂದಿದೆ. ಈ ಏರಿಕೆ ಭಾರತದ ಆರ್ಥಿಕತೆಗೆ ಧನಾತ್ಮಕ ಸಂಕೇತವಾಗಿದೆಯೇ?
India Latest News Liveಎದೆ ಹಾಲಿನ ಬ್ಯಾಂಕ್‌ಗಳಿಗೆ ಭಾರೀ ಸಕ್ಸಸ್; 17 ಸಾವಿರ ಶಿಶುಗಳಿಗೆ ತಲುಪಿದ ಹಾಲು!
ಪ್ರಾಯೋಗಿಕವಾಗಿ ಆರಂಭವಾದ ಎದೆಹಾಲಿನ ಬ್ಯಾಂಕುಗಳು ಯಶಸ್ವಿಯಾಗಿವೆ. ಈ ಬ್ಯಾಂಕುಗಳು ಅನಾಥ ಮಕ್ಕಳು ಮತ್ತು ಎದೆಹಾಲುಣಿಸಲು ಸಾಧ್ಯವಾಗದ ತಾಯಂದಿರ ಮಕ್ಕಳಿಗೆ ಅನುಕೂಲವಾಗಿದೆ. 17 ಸಾವಿರಕ್ಕೂ ಅಧಿಕ ಮಕ್ಕಳಿಗೆ ಈ ಯೋಜನೆಯಿಂದ ಪ್ರಯೋಜನವಾಗಿದೆ.
India Latest News Liveಪಕ್ಕದ ಮನೆಯ 8 ವರ್ಷದ ಬಾಲಕಿಯ ರೇಪ್ & ಮರ್ಡರ್, 19ರ ಯುವಕನಿಗೆ ಸಾಯುವವರೆಗೂ ಜೈಲು ಶಿಕ್ಷೆ!
ಫಿರೋಜಾಬಾದ್‌ನಲ್ಲಿ 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ 19 ವರ್ಷದ ಯುವಕನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಅಪರಾಧ ಮರೆಮಾಚಲು ಸಹಕರಿಸಿದ ಆತನ ಕುಟುಂಬಕ್ಕೂ ಶಿಕ್ಷೆ. ಕೇವಲ ೨೫ ದಿನಗಳಲ್ಲಿ ವಿಚಾರಣೆ ಪೂರ್ಣ.
India Latest News Liveಸೆಲ್ಫಿಗಾಗಿ ವಿದೇಶಿ ಮಹಿಳೆಗೆ ಕಿರುಕುಳ - ಹೆಗಲಿಗೆ ಕೈ ಹಾಕಿ ಹಿಡಿದು ಎಳೆದಾಡಿದ ಭಾರತೀಯ ಪುರುಷರು!
ಮುಂಬೈನ ಗೇಟ್‌ವೇ ಆಫ್ ಇಂಡಿಯಾದಲ್ಲಿ ವಿದೇಶಿ ಮಹಿಳಾ ಪ್ರವಾಸಿಗರೊಬ್ಬರಿಗೆ ಸೆಲ್ಫಿಗಾಗಿ ಕಿರುಕುಳ ನೀಡಿದ ಘಟನೆ ನಡೆದಿದೆ. ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
India Latest News Liveಭಾರತಕ್ಕೆ ಬೆಂಬಲದಿಂದ ಪಾಕಿಸ್ತಾನದ ಅಪ್ಪುಗೆಯತ್ತ - ಬದಲಾವಣೆಯ ಹಾದಿಯಲ್ಲಿ ಟ್ರಂಪ್ ನಡೆ
India Latest News Liveಹಾವನ್ನು ಬೈಕ್‌ಗೆ ಕಟ್ಟಿ ಎಳೆದೊಯ್ದ ಯುವಕ - ಸುಮ್ಮನಿದ್ದ ಹಸುಗಳ ಕೆಣಕಿ ಒದೆ ತಿಂದ ಪ್ರವಾಸಿಗ - ವೈರಲ್ ವೀಡಿಯೋ
India Latest News Live30 ನಿಮಿಷ, ತಿಂಗಳಿಗೆ 18 ಸಾವಿರ ಸಂಬಳ; ದಿನಕ್ಕೆ 10-12 ಮನೆಗಳಲ್ಲಿ ಕೆಲಸ, ಇದೆಂಥಾ ಜಾಬ್?
ಅಡುಗೆಯವರು ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಪಾದಿಸುತ್ತಾರೆ ಎಂಬ ವಕೀಲರೊಬ್ಬರ ಪೋಸ್ಟ್ ವೈರಲ್ ಆಗಿದೆ. ಕೇವಲ ಅರ್ಧ ಗಂಟೆ ಕೆಲಸಕ್ಕೆ 18,000 ರೂಪಾಯಿ ಸಂಬಳ ಪಡೆಯುತ್ತಾರೆ.
India Latest News Liveಟ್ರಾಫಿಕ್ ಜಾಮ್‌ಗೆ ಕಾರಣವಾದ ಪಾರ್ಕ್ ಮಾಡಿದ್ದ ಕಾರು - ಹತ್ತಿರ ಹೋಗಿ ಕಾರೊಳಗೆ ಇಣುಕಿ ನೋಡಿದವರಿಗೆ ಶಾಕ್
India Latest News Liveಕಡಲೆಬೀಜದ ಸಾಲ ಹಿಂದಿರುಗಿಸಲು 12 ವರ್ಷಗಳ ನಂತರ ಅಮೆರಿಕದಿಂದ ಭಾರತಕ್ಕೆ ಬಂದ ಅಣ್ಣ-ತಂಗಿ
ಸಾಲ ತೀರಿಸಲು ಅಮೆರಿಕದಿಂದ ಭಾರತಕ್ಕೆ ಬಂದ ಅಣ್ಣ ತಂಗಿಯ ಕಥೆ. 12 ವರ್ಷಗಳ ಹಿಂದೆ ತಂದೆ ಪಡೆದಿದ್ದ ಕಡಲೆಬೀಜದ ಸಾಲವನ್ನು ಮಕ್ಕಳು ತೀರಿಸಿದರು. ವ್ಯಾಪಾರಿಯನ್ನು ಹುಡುಕಿ ಕುಟುಂಬಕ್ಕೆ ಹಣ ನೀಡಿದರು.
India Latest News Liveಲೋಕಸಭೆಯಲ್ಲಿ ಸಮೋಸಾ ಚರ್ಚೆ! ಅಂಥದ್ದೇನಿದ್ಯಪ್ಪಾ ಇದ್ರಲ್ಲಿ? ಮನೆಯಲ್ಲೇ ಸುಲಭದಲ್ಲಿ ಹೀಗೆ ತಯಾರಿಸಿ...
ಲೋಕಸಭೆಯಲ್ಲಿಯೂ ಬಿಸಿಬಿಸಿ ಸಮೋಸಾ ಚರ್ಚೆಗೆ ಬಂದಿದೆ. ಅಲ್ಲಿ ಆಗಿದ್ದೇನು? ಬಾಯಲ್ಲಿ ನೀರು ತರಿಸೋ ಸಮೋಸಾವನ್ನು ಮನೆಯಲ್ಲಿಯೇ ಹೇಗೆ ಸುಲಭದಲ್ಲಿ ಮಾಡಬಹುದು? ಇಲ್ಲಿದೆ ಸ್ಟೆಪ್ ಬೈ ಸ್ಟೆಪ್ ಮಾಹಿತಿ...
India Latest News Live40 ವರ್ಷದ ಮನೆ ಮಾಲೀಕನ ಜೊತೆಯೇ ಅಪ್ರಾಪ್ತ ಮಗಳ ಮದುವೆ ಮಾಡಿಸಿದ ತಾಯಿ
ತೆಲಂಗಾಣದಲ್ಲಿ 40 ವರ್ಷದ ವ್ಯಕ್ತಿಯೊಬ್ಬ 13 ವರ್ಷದ ಬಾಲಕಿಯನ್ನು ವಿವಾಹವಾದ ಘಟನೆ ಬೆಳಕಿಗೆ ಬಂದಿದೆ. ಬಾಲಕಿ ಶಾಲೆಯಲ್ಲಿ ಶಿಕ್ಷಕರಿಗೆ ಮಾಹಿತಿ ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
India Latest News Liveರೀಲ್ಸ್‌ಗಾಗಿ ರೈಲು ಪ್ರಯಾಣಿಕರ ಮೇಲೆ ಹಲ್ಲೆ - ಸ್ಕೂಟರ್ ಮೇಲೆ ಉರುಳಿ ಬಿದ್ದ ಕರೆಂಟ್ ಕಂಬ - ವೈರಲ್ ವೀಡಿಯೋ
ರೈಲಿನಲ್ಲಿ ಪ್ರಯಾಣಿಕರ ಮೇಲೆ ಕೋಲಿನಿಂದ ಹಲ್ಲೆ ನಡೆಸಿದ ಘಟನೆ, ಚಲಿಸುತ್ತಿದ್ದ ಸ್ಕೂಟರ್ ಮೇಲೆ ಕರೆಂಟ್ ಕಂಬ ಬಿದ್ದ ಘಟನೆ ಹಾಗೂ ಪಂಜಾಬ್‌ನಲ್ಲಿ ನೀರಿನಲ್ಲಿ ಕೊಚ್ಚಿಹೋದ ಯುವಕರು ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಕೆಲ ಘಟನೆಗಳ ವೀಡಿಯೋ ಇಲ್ಲಿದೆ ನೋಡಿ.
India Latest News Liveಬಂಗಾರದಲ್ಲಿ 2ನೇ ದಿನವೂ ಇಳಿಕೆ - ಇಲ್ಲಿದೆ ಇಂದಿನ ಚಿನ್ನಾಭರಣಗಳ ದರ
India Latest News Liveಚಿಕನ್ ಚಿಲ್ಲಿ ಅಂತ ಬಾವಲಿ ಮಾಂಸದಿಂದ ತಯಾರಿಸಿದ ಖಾದ್ಯ ಮಾರಾಟ - ಇಬ್ಬರ ಬಂಧನ
ಚಿಕನ್ ಚಿಲ್ಲಿ ಎಂದು ಬಾವಲಿ ಮಾಂಸ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ. ತಮಿಳುನಾಡಿನ ಸೇಲಂನಲ್ಲಿ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಇದು ಸಾರ್ವಜನಿಕ ಆರೋಗ್ಯದ ಬಗ್ಗೆ ತೀವ್ರ ಆತಂಕ ಮೂಡಿಸಿದೆ.