11:00 PM (IST) Jul 13

India latest news live 13th july 2025ನೀನು ಸೂಪರ್ ಆಕ್ಟರ್, ಹೀಗೆ ಜೀವನ ಹಾಳು ಮಾಡ್ಕೋಬೇಡ - ಕೋಟಗೆ ಎಚ್ಚರಿಕೆ ಕೊಟ್ಟಿದ್ರು ಚಿರಂಜೀವಿ

ಪ್ರಸಿದ್ಧ ನಟ ಕೋಟ ಶ್ರೀನಿವಾಸ ರಾವ್ ಅವರ ನಿಧನದಿಂದ ಚಿತ್ರರಂಗದಲ್ಲಿ ದುಃಖ ಮಡುಗಟ್ಟಿದೆ. ಕೋಟ ಶ್ರೀನಿವಾಸ ರಾವ್ 750 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕಾಮಿಡಿ ಪಾತ್ರಗಳಲ್ಲಿ, ವಿಲನ್ ಆಗಿ, ಪೋಷಕ ನಟರಾಗಿ ಅವರು ತಮ್ಮದೇ ಆದ ವಿಶಿಷ್ಟ ಶೈಲಿಯನ್ನು ಪ್ರದರ್ಶಿಸಿದ್ದಾರೆ.
Read Full Story
10:45 PM (IST) Jul 13

India latest news live 13th july 2025ನಾಪತ್ತೆಯಾಗಿರುವ ವಿದ್ಯಾರ್ಥಿನಿ ಸ್ನೇಹಾ ದೇಬನಾತ್ ಕೈಬರಹದ ಪತ್ರ ಪತ್ತೆ, ಕುಟಂಬಕ್ಕ ಶಾಕ್

ಕಳೆದ ಒಂದು ವಾರದಿಂದ ನಾಪತ್ತೆಯಾಗಿರುವ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಸ್ನೇಹಾ ದೇಬನಾಥ್ ಕೊಠಡಿಯಲ್ಲಿ ನೋಟ್ ಪತ್ತೆಯಾಗಿದೆ. ಮಿಸ್ಸಿಂಗ್ ಪ್ರಕರಣಕ್ಕೆ ತಿರುವು ನೀಡಿದೆ.

Read Full Story
10:32 PM (IST) Jul 13

India latest news live 13th july 2025ಕೊಡಗಿಗೆ ಹೋದರೆ ಕಡ್ಡಾಯವಾಗಿ ರುಚಿಸಬೇಕು ಈ ಮಳೆಗಾಲದ ಆಹಾರಗಳು!

ದಕ್ಷಿಣದ ಕಾಶ್ಮೀರ ಎಂದು ಕರೆಸಿಕೊಳ್ಳುವ ಕೊಡಗಿಗೆ ಹೋದರೆ ಪಂದಿಕರಿ, ಕಡುಂಬಟ್ಟು, ನೂಪ್ಪುಟ್ಟು ಇಂತಹ ಆಹಾರಗಳ ರುಚಿಯನ್ನು ನೋಡದೆ ಯಾರು ಬರ್ತೀರಾ ಅಲ್ವಾ.

Read Full Story
10:17 PM (IST) Jul 13

India latest news live 13th july 2025ಲಂಡನ್‌ನಲ್ಲಿ ಒಂದೇ ಕಡೆ ಫೋಟೋ ವೈರಲ್ - ಕ್ರಿಕೆಟರ್ ಚಹಾಲ್, ಆರ್ ಜೆ ಮೆಹ್ವಾಶ್ ಡೇಟಿಂಗ್ ರೂಮರ್ಸ್‌

ಯಜುವೇಂದ್ರ ಚಹಾಲ್ ಮತ್ತು ಆರ್‌ಜೆ ಮೆಹ್ವಾಶ್ ಲಂಡನ್‌ನಲ್ಲಿ ಒಂದೇ ಸ್ಥಳದಲ್ಲಿ ತೆಗೆದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು,ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಗಾಳಿಸುದ್ದಿಗಳು ಹಬ್ಬಿವೆ.

Read Full Story
10:06 PM (IST) Jul 13

India latest news live 13th july 2025ಲಾರ್ಡ್ಸ್ ಟೆಸ್ಟ್‌ನಲ್ಲಿ ಸುಲಭ ಟಾರ್ಗೆಟ್ ಪಡೆದ ಭಾರತಕ್ಕೆ ಆರಂಭದಲ್ಲೇ ಶಾಕ್, ವಿಕೆಟ್ ಪತನ

ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 193 ರನ್ ಸುಲಭ ಟಾರ್ಗೆಟ್ ಪಡೆದಿದೆ. ಆದರೆ ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಆರಂಭದಲ್ಲೇ ಆಘಾತ ಅನುಭವಿಸಿದೆ.

Read Full Story
09:43 PM (IST) Jul 13

India latest news live 13th july 2025ಲಾರ್ಡ್ಸ್ ಟೆಸ್ಟ್‌ನಲ್ಲಿ ಇಂಗ್ಲೆಂಡ್ 192 ರನ್‌ಗೆ ಆಲೌಟ್, ಭಾರತಕ್ಕೆ 193 ರನ್ ಟಾರ್ಗೆಟ್

ಲಾರ್ಡ್ಸ್ ಟೆಸ್ಟ್ 2ನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡವನ್ನು 192 ರನ್‌ಗೆ ಆಲೌಟ್ ಮಾಡುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿದೆ. ಹೀಗಾಗಿ ಭಾರತಕ್ಕೆ 193 ರನ್ ಟಾರ್ಗೆಟ್ ಸಿಕ್ಕಿದ್ದು, ಮತ್ತೊಂದು ಗೆಲುವಿನ ವಿಶ್ವಾಸದಲ್ಲಿದೆ.

Read Full Story
09:42 PM (IST) Jul 13

India latest news live 13th july 2025ನಮ್ಮ ಸಂಬಂಧಗಳಲ್ಲಿ ಟಿಬೆಟ್ ವಿಷಯ ಯಾವುತ್ತೂ ಮುಳ್ಳೆ, ದಲೈ ಲಾಮಾ ವಿಷಯ ನಿಮಗೆ ಬೇಡ - ಭಾರತಕ್ಕೆ ಚೀನಾ ಎಚ್ಚರಿಕೆ!

ದಲೈ ಲಾಮಾ ಅವರ ಉತ್ತರಾಧಿಕಾರಿ ಆಯ್ಕೆ ವಿಚಾರದಲ್ಲಿ ಚೀನಾ ಮಧ್ಯಪ್ರವೇಶಿಸಬಾರದು ಎಂದು ಭಾರತ ಹೇಳಿದೆ. ಚೀನಾ ಇದನ್ನು ತನ್ನ ಆಂತರಿಕ ವಿಚಾರ ಎಂದು ಹೇಳುತ್ತಿದೆ. ಈ ವಿವಾದ ಉಭಯ ದೇಶಗಳ ಸಂಬಂಧವನ್ನು ಹದಗೆಡಿಸುತ್ತಿದೆ.
Read Full Story
09:24 PM (IST) Jul 13

India latest news live 13th july 2025ಸಿಗಂದೂರು ಸೇತುವೆ ಉದ್ಘಾಟನೆಗೆ ಬರಲ್ಲ - ಗಡ್ಕರಿಗೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ

ಸಿಗಂದೂರು ಸೇತುವೆ ಲೋಕಾರ್ಪಣೆ ಸೋಮವಾರ (ಜು.14) ನಡೆಯಲಿದ್ದು, ಸಿಗಂದೂರು ಸೇತುವೆ ಉದ್ಘಾಟನೆಗೆ ಬರಲ್ಲ ಎಂದು ಸಿಎಂ ಸಿದ್ದರಾಮಯ್ಯ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದಿದ್ದಾರೆ.

Read Full Story
09:08 PM (IST) Jul 13

India latest news live 13th july 2025ಪೊಲೀಸ್ ಠಾಣೆ ಮೆಟ್ಟಿಲೇರಿದ ಖ್ಯಾತ್ ಬಿಗ್ ಬಾಸ್ ಸ್ಪರ್ಧಿ, ಮನೆಕೆಲಸದವನ ವಿರುದ್ಧ ದೂರು

ಖ್ಯಾತ ಬಿಗ್ ಬಾಸ್ ಸ್ಪರ್ಧಿ ರಿಯಾಲಿಟಿ ಶೋ ಹಾಗೂ ತಮ್ಮ ನಟೆಯಿಂದಲೂ ಭಾರಿ ಗಮನಸೆಳೆದಿದ್ದಾರೆ. ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರುವ ಮೂಲಕ ಸುದ್ದಿಯಾಗಿದ್ದಾರೆ. ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ನೌಕರನ ವಿರುದ್ದವೇ ದೂರು ದಾಖಲಿಸಿದ್ದಾರೆ.

Read Full Story
09:02 PM (IST) Jul 13

India latest news live 13th july 2025ಪವನ್ ಸಿನಿಮಾಗೆ ಪೈಪೋಟಿ ನೀಡಲು ಕನ್ನಡ ಡಬ್ ಸಿನಿಮಾ - ಅಲ್ಲು ಅರ್ಜುನ್ ತಂದೆ ಪ್ಲ್ಯಾನ್ ಏನು?

ಪವನ್ ಕಲ್ಯಾಣ್ ನಟಿಸಿರುವ 'ಹರಿಹರ ವೀರಮಲ್ಲು' ಸಿನಿಮಾ ಕೊನೆಗೂ ಬಿಡುಗಡೆಯಾಗಲಿದೆ. ಆದರೆ ಈ ಚಿತ್ರಕ್ಕೆ ಪೈಪೋಟಿಯಾಗಿ ಒಂದು ಡಬ್ಬಿಂಗ್ ಸಿನಿಮಾವನ್ನು ತರುತ್ತಿದ್ದಾರೆ ಅಲ್ಲು ಅರವಿಂದ್.

Read Full Story
08:49 PM (IST) Jul 13

India latest news live 13th july 2025ಭಾರತದಲ್ಲಿ ಹೊಸದಕ್ಕಿಂತ 2 ಪಟ್ಟು ಹೆಚ್ಚು ಸೆಕೆಂಡ್ ಹ್ಯಾಂಡ್ ಕಾರಿಗೆ ಬೇಡಿಕೆ , 6 ಮಿಲಿಯನ್ ಮಾರಾಟ ನಿರೀಕ್ಷೆ

ಬಳಸಿದ ಕಾರುಗಳ ಮಾರಾಟ ಈ ವರ್ಷ 6 ಮಿಲಿಯನ್ ದಾಟುವ ನಿರೀಕ್ಷೆ. ಹೊಸ ಕಾರುಗಳಿಗಿಂತ ಬಳಸಿದ ಕಾರುಗಳ ಮಾರಾಟ ದ್ವಿಗುಣಗೊಂಡಿದೆ. ಈ ಬೆಳವಣಿಗೆಯ ಹಿಂದಿನ ಕಾರಣಗಳೇನು?
Read Full Story
08:36 PM (IST) Jul 13

India latest news live 13th july 2025ರೈಲ್ವೆ ಇಲಾಖೆಯಲ್ಲಿ ಕ್ರಾಂತಿಕಾರಕ ಬದಲಾವಣೆ - ಕೇಂದ್ರ ಸಚಿವ ವಿ.ಸೋಮಣ್ಣ

ವಂದೇ ಭಾರತ ಸ್ಲೀಪರ್ ರೈಲು ಶೀಘ್ರದಲ್ಲಿಯೇ ಆರಂಭಿಸಲಾಗುವುದು ಎಂದು ಕೇಂದ್ರ ರೈಲ್ವೆ ಇಲಾಖೆಯ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಹೇಳಿದರು.

Read Full Story
08:33 PM (IST) Jul 13

India latest news live 13th july 2025ಪದವಿ, ರೆಸ್ಯೂಮ್ ಬೇಡ ಆದ್ರೂ ₹1 ಕೋಟಿ ಸಂಬಳದ IT ಉದ್ಯೋಗ! ಬೆಂಗಳೂರು ಸ್ಟಾರ್ಟಪ್ ಜಾಬ್ ಆಫರ್!

ಬೆಂಗಳೂರಿನ ಸ್ಟಾರ್ಟ್‌ಅಪ್ ಸ್ಮಾಲೆಸ್ಟ್ AI, ಯಾವುದೇ ಡಿಗ್ರಿ ಅಥವಾ ರೆಸ್ಯೂಮೆ ಇಲ್ಲದೆ ₹1 ಕೋಟಿ ವಾರ್ಷಿಕ ಸಂಬಳದ ಫುಲ್-ಸ್ಟಾಕ್ ಎಂಜಿನಿಯರಿಂಗ್ ಲೀಡ್ ಹುದ್ದೆಗೆ ನೇಮಕಾತಿ ನಡೆಸುತ್ತಿದೆ. ಅನುಭವಿ ಡೆವಲಪರ್‌ಗಳಿಗೆ ಇದು ಉತ್ತಮ ಅವಕಾಶ. ಅಭ್ಯರ್ಥಿಗಳು info@smallest.ai ಗೆ ಮಾಹಿತಿ ಕಳುಹಿಸಬೇಕು.

Read Full Story
08:16 PM (IST) Jul 13

India latest news live 13th july 2025ಇಂದಿನ ಯುವಕರೇ ಮುಂದಿನ ಭವಿಷ್ಯದ ನಾಯಕರು - ಸಚಿವ ಪ್ರಿಯಾಂಕ್‌ ಖರ್ಗೆ

ಯುವ ಕಾಂಗ್ರೆಸ್ ಭರವಸೆಯ ಬೆಳಕಾಗಿದೆ. ಇಂದಿನ ಯುವಕರೇ ಮುಂದಿನ ಭವಿಷ್ಯದ ನಾಯಕರು ಎಂದು ಗ್ರಾಮೀಣಾಭಿವೃದ್ಧಿ ಐಟಿ, ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

Read Full Story
08:01 PM (IST) Jul 13

India latest news live 13th july 2025ತಮಿಳು ಸಾಹಸ ಕಲಾವಿದನ ಸಾವು ಖಚಿತಪಡಿಸಿದ ನಟ ವಿಶಾಲ್! ದಕ್ಷಿಣ ಭಾರತಕ್ಕೆ ಮತ್ತೊಂದು ಬರಸಿಡಿಲು

ತಮಿಳು ನಟ ಆರ್ಯ ಅಭಿನಯದ ವೆಟ್ಟುವಂ ಚಿತ್ರದ ಚಿತ್ರೀಕರಣದ ವೇಳೆ ಸ್ಟಂಟ್‌ಮ್ಯಾನ್ ರಾಜು ಅವರು ಕಾರು ಪಲ್ಟಿ ಸಾಹಸದ ಸಮಯದಲ್ಲಿ ದುರಂತವಾಗಿ ಸಾವನ್ನಪ್ಪಿದ್ದಾರೆ. ಈ ಘಟನೆಯನ್ನು ನಟ ವಿಶಾಲ್ ದೃಢಪಡಿಸಿದ್ದು, ಚಿತ್ರರಂಗದಲ್ಲಿ ಶೋಕ ಮಡುಗಟ್ಟಿದೆ.

Read Full Story
07:55 PM (IST) Jul 13

India latest news live 13th july 2025ಬೆಂಗಳೂರಿಗೆ ಆರೇಂಜ್ ಅಲರ್ಟ್, ಮರ-ರೆಂಬೆ ಕೊಂಬೆ ಮುರಿದು ಬೀಳುವ ಎಚ್ಚರಿಕೆ

ಬೆಂಗಳೂರಿಗೆ ಮುಂದಿನ ಮೂರು ಗಂಟೆ ಆರೇಂಜ್ ಅಲರ್ಟ್ ನೀಡಲಾಗಿದೆ. ಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಮರ, ರೆಂಬೆ ಕೊಂಬೆಗಳು ಮುರಿದು ಬೀಳುವ ಸಾಧ್ಯತೆ ಇದೆ. ಅತೀವ ಎಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಸೂಚಿಸಿದೆ.

Read Full Story
07:36 PM (IST) Jul 13

India latest news live 13th july 2025ಕೈಗಾರಿಕಾ ಕ್ಷೇತ್ರದಲ್ಲಿ ಸ್ಕಿಲ್‌, ಸ್ಕೇಲ್‌, ಸ್ಪೀಡ್‌ ಅಗತ್ಯ - ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ

ಕೈಗಾರಿಕೆ ಉತ್ಪಾದನಾ ಕ್ಷೇತ್ರದಲ್ಲಿ ಸ್ಕಿಲ್, ಸ್ಕೇಲ್ ಮತ್ತು ಸ್ಪೀಡ್ ಇಂದಿನ ತುರ್ತು ಅಗತ್ಯವಾಗಿದ್ದು, ಅದನ್ನು ಮೈಗೂಡಿಸಿಕೊಂಡಲ್ಲಿ ಭಾರತ ಸಮಗ್ರ ಅಭಿವೃದ್ಧಿಯ ಜತೆಗೆ ಮತ್ತಷ್ಟು ಆರ್ಥಿಕ ಬಲಿಷ್ಠ ರಾಷ್ಟ್ರವಾಗಲಿದೆ ಎಂದು ಪ್ರಲ್ಹಾದ್‌ ಜೋಶಿ ಹೇಳಿದರು.

Read Full Story
07:33 PM (IST) Jul 13

India latest news live 13th july 2025ಯೂಟ್ಯೂಬ್ ಲೈವ್‌‌ಸ್ಟ್ರೀಮ್‌ ಹುಚ್ಚಿಗೆ ಮಕ್ಕಳನ್ನೇ ಮಾರಿದ ತಾಯಿ, ಹಲವರು ಅರೆಸ್ಟ್

ಲೈವ್‌ಸ್ಟ್ರೀಮ್, ಹೆಚ್ಚು ವೀಕ್ಷಣೆ, ಲೈಕ್ಸ್ ಈ ಮೂಲಕ ಆದಾಯ ಬಯಸಿದ್ದ ತಾಯಿಯ ಹುಚ್ಚುತನಕ್ಕೆ ಇದೀಗ ಇಬ್ಬರು ಮಕ್ಕಳು ಅನಾಥವಾಗಿದ್ದು ಮಾತ್ರವಲ್ಲ, ಭವಿಷ್ಯವೇ ಅತಂತ್ರವಾಗಿದೆ.

Read Full Story
07:16 PM (IST) Jul 13

India latest news live 13th july 2025ಆಧಾರ್ ಕಾರ್ಡ್ ಕ್ಯಾನ್ಸಲ್ ಆಗಿದೆಯಾ? ಈ ವಿಧಾನದ ಮೂಲಕ ರಿ-ಆಕ್ಟಿವೇಟ್ ಮಾಡಿ!

ನಿಮ್ಮ ಆಧಾರ್ ಕಾರ್ಡ್ ರದ್ದುಗೊಂಡಿದೆಯೇ? ಸರ್ಕಾರದ ಯೋಜನೆಗೆ ಆಧಾರ್ ಕಾರ್ಡ್ ಕೊಟ್ಟರೂ ಅದನ್ನು ಸ್ವೀಕಾರ ಮಾಡುತ್ತಿಲ್ಲ ಎಂದಾದಲ್ಲಿ ಕೂಡಲೇ ನೀವು ಈ ಸರಳ ವಿಧಾನ ಅನುಸರಿಸಿ ಪುನಃ ಸಕ್ರಿಯಗೊಳಿಸಿಕೊಳ್ಳಬಹುದು. ಮೂವತ್ತು ದಿನಗಳಲ್ಲಿ ಆಧಾರ್ ರಿ-ಆಕ್ಟಿವೇಟ್ ಆಗುತ್ತದೆ.

Read Full Story
06:57 PM (IST) Jul 13

India latest news live 13th july 2025Disha Madan - ಕನ್ನಡ ಮಾತಾಡಿಲ್ಲ ಅಂತ ಗಲಾಟೆ ಮಾಡೋರಿಗೆ ಹೀಗೆ ಕ್ಲಾಸ್​​ ತೆಗೆದುಕೊಳ್ಳೋದಾ ಲಕ್ಷ್ಮೀನಿವಾಸ ಭಾವನಾ?

ಬ್ಯಾಂಕ್​ ಸೇರಿದಂತೆ ಕೆಲವು ಕಡೆಗಳಲ್ಲಿ ಕನ್ನಡ ಮಾತನಾಡದೇ ಉಲ್ಟಾ ಮಾತನಾಡುವ ಸಿಬ್ಬಂದಿಯ ಬಗೆಗಿನ ವಿಷಯ ಹೈಲೈಟ್​ ಆಗುತ್ತಿದ್ದಂತೆಯೇ, ಲಕ್ಷ್ಮೀ ನಿವಾಸ ಸೀರಿಯಲ್​ ಭಾವನಾ ಉರ್ಫ್​ ದಿಶಾ ಮದನ್​ ಹೇಳಿದ್ದೇನು ನೋಡಿ!

Read Full Story