Asianet Suvarna News Asianet Suvarna News

ಕೇಜ್ರಿವಾಲ್‌ ಎದುರು ಕನ್ನಡಿಗ ಸ್ವಾಮೀಜಿ ಸ್ಪರ್ಧೆ

ದಿಲ್ಲಿ ಚುನಾವಣೆ ಸಮೀಪಿಸಿದ್ದು ಇದೇ ವೇಳೆ ದಿಲ್ಲಿ ಹಾಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಕರ್ನಾಟಕದ ಸ್ವಾಮೀಜಿ ಕಣಕ್ಕೆ ಇಳಿಯುತ್ತಿದ್ದಾರೆ.

Delhi Election 2020 Vijayapura Swamiji Contest Against Arvind Kejriwal
Author
Bengaluru, First Published Jan 22, 2020, 12:03 PM IST

ವಿಜಯಪುರ [ಜ.22]: ದೆಹಲಿ ವಿಧಾನಸಭಾ ಚುನಾವಣೆಗೆ ನವದೆಹಲಿ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಮುಖ್ಯಮಂತ್ರಿ ಹಾಗೂ ಆಮ್‌ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರ ವಿರುದ್ಧ ಕನ್ನಡಿಗರೊಬ್ಬರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. 

ವಿಜಯಪುಡ ಜಿಲ್ಲೆಯ ಚಡಚಣ ತಾಲೂಕಿನ ಬರಡೋಲಾ ಗ್ರಾಮದವರಾಗಿರುವ ವೆಂಕಟೇಶ್ವರ ಮಹಾ ಸ್ವಾಮೀಜಿ ಕಾಂಗ್ರೆಸ್‌, ಬಿಜೆಪಿ, ಎನ್‌ಸಿಪಿಯಿಂದ ಕೇಜ್ರಿವಾಲ್ ವಿರುದ್ಧ ಸ್ಪರ್ಧಿಸುವ ಆಸೆ ಇಟ್ಟುಕೊಂಡಿದ್ದರು. 

ಕೇಜ್ರಿಯಿಂದ 10 ಭರವಸೆಯ ಗ್ಯಾರಂಟಿ ಕಾರ್ಡ್‌ ಬಿಡುಗಡೆ...

ಆದರೆ ಬಿ ಫಾರಂ ಸಿಗದ ಹಿನ್ನೆಲೆಯಲ್ಲಿ ವೆಂಕಟೇಶ್ವರ ಅವರು ಜ.14ರಂದು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ವೆಂಕಟೇಶ್ವರ ಸ್ವಾಮೀಜಿ ತಮ್ಮ ಬಳಿ  99,999 ರು. ಸಾಲವಿದೆ ಎಂದು ಚುನಾವಣಾ ಆಫಿಡವಿಟ್‌ನಲ್ಲಿ ಹೇಳಿಕೊಂಡಿದ್ದಾರೆ. 

ಟೋಕನ್‌ ಹಿಡಿದು 6 ತಾಸು ಕಾದು ಕೇಜ್ರಿ ನಾಮಪತ್ರ.

ಅವರು ಈ ಹಿಂದೆಯೂ ಕರ್ನಾಟಕ, ಗುಜರಾತ್‌, ಉತ್ತರ ಪ್ರದೇಶ, ಮಹಾರಾಷ್ಟ್ರ, ಗೋವಾಗಳಲ್ಲಿ ಗ್ರಾಮ ಪಂಚಾಯಿತಿಯಿಂದ ಹಿಡಿದು ಲೋಕಸಭೆಯವರೆಗೂ ಒಟ್ಟು 18 ಚುನಾವಣೆಗಳಲ್ಲಿ ಸ್ಪರ್ಧಿಸಿದ್ದಾರೆ. ಇವರ ಪೂರ್ವಾಶ್ರಮದ ಹೆಸರು ದೀಪಕ್‌.

Follow Us:
Download App:
  • android
  • ios