ಕುನ್ವಾರ್ ಜೊತೆ ಡೇಟಿಂಗ್ ಮಾಡುತ್ತಿದ್ದಾರಾ ಉರ್ಫಿ ಜಾವೇದ್ ?
ಬಿಗ್ ಬಾಸ್ ಒಟಿಟಿ ಖ್ಯಾತಿಯ ಉರ್ಫಿ ಜಾವೇದ್ (Urfi Javed) ತನ್ನ ಅಸಾಂಪ್ರದಾಯಿಕ ಫ್ಯಾಷನ್ ಶೈಲಿಗೆ ಹೆಸರುವಾಸಿಯಾಗಿದ್ದಾರೆ, ಆಗಾಗ್ಗೆ ಸಾಮಾಜಿಕ ಮಾಧ್ಯಮ (Social Media) ಬಳಕೆದಾರರಿಂದ ತನ್ನ ವಿಲಕ್ಷಣ ಬಟ್ಟೆಗಳಿಗಾಗಿ ಅಂತರ್ಜಾಲದಲ್ಲಿ ಭಾರಿ ಟ್ರೋಲ್‌ಗೆ ಒಳಗಾಗುತ್ತಾರೆ. ಅವರು ಈಗ ಟ್ಯಾಬ್ಲಾಯ್ಡ್‌ಗಳ ರಾಣಿಯಾಗಿಯೂ ಹೆಚ್ಚು ಪ್ರಚಾದಲ್ಲಿರುತ್ತಾರೆ. ಯಾವಾಗಲೂ ಟಾಕ್ ಆಫ್ ದಿ ಟೌನ್ (Talk of the Town) ಆಗಿದ್ದಾರೆ. ಈ ಭಾರಿ ಅವರು ತಮ್ಮ ಲವ್ ಲೈಫ್‌ನ (Love Life) ಕಾರಣದಿಂದ ಸುದ್ದಿಯಾಗಿದ್ದಾರೆ. ಉರ್ಫಿ ಜಾವೇದ್ ಕುನ್ವಾರ್ (Kunwarr) ಜೊತೆ ಡೇಟಿಂಗ್ (Dating) ಮಾಡುತ್ತಿದ್ದಾರಾ? ಎಂಬ ವದಂತಿ ಹುಟ್ಟುಕೊಂಡಿದೆ. ಇದಕ್ಕೆ ಕಾರಣವೇನು ಗೊತ್ತಾ?
ಈಗ ಅವರು ಇಂಡೋ-ಕೆನಡಾದ ಗಾಯಕ ಕುನ್ವಾರ್ ಜೊತೆ ಡೇಟಿಂಗ್ ಮಾಡುತ್ತಿರುವ ಸುದ್ದಿ ಇದೆ. ಉರ್ಫಿ ಮತ್ತು ಕುನ್ವಾರ್ ಇಬ್ಬರೂ ಇತ್ತೀಚೆಗೆ ತಮ್ಮ ಡೇಟಿಂಗ್ ವದಂತಿಗಳು ಖುದ್ದು ಕಾರಣರಾದರು. ಕುನ್ವಾರ್ ಅವರ ಇತ್ತೀಚಿನ ಇನ್‌ಸ್ಟಾಗ್ರಾಮ್ ಪೋಸ್ಟ್ (Instagram Post)ನಲ್ಲಿ, ಅವರು ರೊಮ್ಯಾಂಟಿಕ್ (Romantic) ಸ್ಥಳದಲ್ಲಿ ಉರ್ಫಿ ಜೊತೆಗಿನ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. 'There’s so much cooking up' ಎಂದು ಅವರು ಶೀರ್ಷಿಕೆ ನೀಡಿದ್ದಾರೆ.
ಉರ್ಫಿ ತನ್ನ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಅದೇ ಫೋಟೋವನ್ನು ಮರು ಪೋಸ್ಟ್ ಮಾಡಿದ್ದಾರೆ ಮತ್ತು 'ನೀವು ನನ್ನನ್ನು ಪ್ರೀತಿಸುತ್ತೀರಿ ಎಂದು ನನಗೆ ತಿಳಿದಿದೆ' ಎಂದು ಹೇಳಿದರು. ಉರ್ಫಿ ಮತ್ತು ಕುನ್ವಾರ್ ಅವರು ಸಂಬಂಧದಲ್ಲಿರುವುದನ್ನು ಸೂಚಿಸುತ್ತಿದ್ದಾರೆಯೇ? ಆದರೆ ಇದರ ಬಗ್ಗೆ ಇನ್ನೂ ತಿಳಿದಿಲ್ಲ ಮತ್ತು ನಿಗೂಢವಾಗಿದೆ
ಉರ್ಫಿ ತನ್ನ ಅಭಿಮಾನಿಗಳಿಗೆ ಪ್ರೇಮಿಗಳ ದಿನದಂದು ಪ್ರೇಮಿಗಳ ದಿನದ ಶುಭಾಶಯಗಳನ್ನು ಕೋರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಅದಕ್ಕೆ , 'ಹ್ಯಾಪಿ ವಿಡೇ ಉರ್ಫಿ ಜಿ' ಎಂದು ಕುನ್ವಾರ್ ಉತ್ತರಿಸಿದರು. ಈ ಜೋಡಿಯ ನಡುವೆ ನಿಸ್ಸಂದೇಹವಾಗಿ ಏನಾದರೂ ನಡೆಯುತ್ತಿದೆ ಇದೆ ಎಂಬ ಊಹೆಗಳನ್ನು ಹುಟ್ಟು ಹಾಕಿದೆ.
ಕುನ್ವಾರ್ ಅವರು ಇಂಡೋ-ಕೆನಡಾದ ಗಾಯಕ (Indo-Canadian Singer) ಎಂದು ಎಲ್ಲರಿಗೂ ತಿಳಿದಿದೆ. ಅವರು 'ಬೇವಾಫಾ' ನಂತಹ ಕೆಲವು ಹಿಟ್‌ಗಳನ್ನು ಹೊಂದಿದ್ದಾರೆ ಮತ್ತು ಅಫ್ಸಾನಾ ಖಾನ್‌ನಂತಹ ಜನಪ್ರಿಯ ಗಾಯಕರೊಂದಿಗೆ ಕೆಲಸ ಮಾಡಿದ್ದಾರೆ.
ಕುನ್ವಾರ್ ಅವರ ಇತ್ತೀಚಿನ ಹಾಡು ‘ಆ್ಯಟಿಟ್ಯೂಡ್’ (Attitude) ಸಾಕಷ್ಟು ಮೆಚ್ಚುಗೆ ಗಳಿಸಿದೆ. ಕುನ್ವಾರ್ ಶೀಘ್ರದಲ್ಲಿಯೇ ಅವರ ಮುಂಬರುವ ಯೋಜನೆಯನ್ನು ಘೋಷಿಸುವ ಸಾಧ್ಯತೆ ಇದೆ, ಇದು ಖಂಡಿತವಾಗಿಯೂ ಇದು ಅವರ ಹಿಂದಿನ ಕೆಲಸಕ್ಕಿಂತ ಹೆಚ್ಚಿನ ಭಾರಿ ಯಶಸ್ಸು ಪಡೆಯುವ ನಿರೀಕ್ಷೆ ಇದೆ.
ಮತ್ತೊಂದೆಡೆ, ಏಕ್ತಾ ಕಪೂರ್ (Ekta Kapoor) ಮತ್ತು ಕಂಗನಾ ರನೌತ್ (Kangana Ranauth) ಅವರ ಹೊಸ ರಿಯಾಲಿಟಿ ಶೋ ‘ಲಾಕ್ ಅಪ್’ಗಾಗಿ (Lock UPP) ಉರ್ಫಿ ಜಾವೇದ್ ಅವರನ್ನು ಸಂಪರ್ಕಿಸಲಾಗಿದೆ ಎಂಬ ಸುದ್ದಿ ಇದೆ, ಆದರೆ ಇದರ ಬಗ್ಗೆ ಇನ್ನೂ ಅಧಿಕೃತ ದೃಢೀಕರಣವಿಲ್ಲ.