ತಿಂಡಿ ಕಟ್ಟುವ ಪೇಪರ್‌ನಿಂದ ಬಿಕಿನಿ ಮಾಡಿಕೊಂಡ ಉರ್ಫಿ ಜಾವೇದ್; ನಮಗಿಲ್ವಾ ಎಂದು ಕಾಲೆಳೆದ ನೆಟ್ಟಿಗರು
ಎಲ್ಲಾ ರೀತಿ ಆಯ್ತು ಇದೊಂದು ಇರಲಿ ಎಂದು ಟ್ರೈ ಮಾಡಿ ಎಡವಟ್ಟು ಮಾಡಿಕೊಂಡು ಉರ್ಫಿ ಜಾವೇದ್...
ಇಡೀ ಬಾಲಿವುಡ್ ಚಿತ್ರರಂಗವೇ ಬೆಚ್ಚಿ ಬೀಳುವ ರೀತಿ ಉಡುಪು ಧರಿಸುವು ಉರ್ಫಿ ಜಾವೇದ್ ಈ ಸಲ ನೆಟ್ಟಿಗರಿಗೂ ಶಾಕ್ ಕೊಟ್ಟಿದ್ದಾರೆ.
ಸದಾ ಬ್ರೇಕಿಂಗ್ ನ್ಯೂಸ್ ಆಂಡ್ ಕಾಂಟ್ರವರ್ಸಿಯಲ್ಲಿ ಇರುವ ಉರ್ಫಿ ಮೊದಲ ಬಾರಿ DIY (Do it yourself) ಬಟ್ಟೆಯಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಮತ್ತು ಡಿಸೈನರ್ ಇಬ್ಬರೂ ಸೇರಿಕೊಂಡು ಮಾಡಿರುವ ಡಿಸೈನ್ ಇದ್ದಂತೆ.
ಚಪಾತಿ, ದೋಸೆಯನ್ನು ತಿಂಡಿ ಕಟ್ಟುವಾಗ ಬಿಸಿ ಇರಲಿ ಎಂದು ಫಾಯಿಲ್ ಪೇಪರ್ ಬಳಸಲಾಗುತ್ತದೆ. ಅದೇ ಫಾಯಿಲ್ ಪೇಪರ್‌ನ ಬಳಸಿಕೊಂಡು ಉರ್ಫಿ ಬಿಕಿನಿ ಸೂಟ್ ಮಾಡಿಕೊಂಡಿದ್ದಾರೆ.
ಸುದ್ದಿಯಲ್ಲಿರ ಬೇಕು ಕ್ಯಾಮೆರಾ ನನ್ನ ಮೇಲಿರಬೇಕು ಎಂದು ಉರ್ಫಿ ಏನೆಲ್ಲಾ ಮಾಡುತ್ತಾರೆ ನೋಡಿ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಇತ್ತೀಚಿಗಷ್ಟೆ ಗೋಣಿಚೀಲದಲ್ಲಿ ಡ್ರೆಸ್ ಮಾಡಿ ಧರಿಸಿದ್ದು ಉರ್ಫಿ ಇದೀಗ ಹೂವಿನ ಬಿಕಿನಿಯಲ್ಲಿ ಮಿಂಚಿದ್ದಾರೆ. ಸೇವಂತಿಗೆ ಹೂವಿನಲ್ಲಿ ಮಾಡಿದ ಬಿಕಿಯನ್ನು ಧರಿಸಿ ಉರ್ಫಿ ಗಮನ ಸೆಳೆದಿದ್ದಾರೆ.
ಉರ್ಫಿಯ ಸೇವಂತಿಗೆ ಬಿಕಿನಿ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ನೆಟ್ಟಿಗರುತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ನಿನ್ನ ಕ್ರಿಯೇಟಿವಿಟಿ ಆಕಾಶಕ್ಕಿಂತ ದೊಡ್ಡದಿದೆ ಬಿಡು ಎನ್ನುತ್ತಿದ್ದಾರೆ. ಹೂವಿನ ಬಿಕಿನಿ ಧರಿಸಿ ಕ್ಯಾಮರಾ ಮುಂದೆ ಉರ್ಫಿ ವೆರೈಟಿ ಪೋಸ್ ನೀಡಿದ್ದಾರೆ.