MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Relationship
  • ನಿಮಗೆ ಯಾರ ಮೇಲಾದ್ರೂ ಕ್ರಶ್ ಆಗಿದ್ಯಾ? ಏನಿದು ಆ್ಯಕ್ಚುಯಲಿ?

ನಿಮಗೆ ಯಾರ ಮೇಲಾದ್ರೂ ಕ್ರಶ್ ಆಗಿದ್ಯಾ? ಏನಿದು ಆ್ಯಕ್ಚುಯಲಿ?

ಎಷ್ಟು ರೀತಿಯ ಆಕರ್ಷಣೆಗಳಿವೆ ಎಂಬುದರ ಬಗ್ಗೆ ನಿಮಗೆ ಕಲ್ಪನೆ ಇರುವುದಿಲ್ಲ. ಜನರು ವಿವಿಧ ಕಾರಣಗಳಿಂದಾಗಿ ಇನ್ನೊಬ್ಬ ವ್ಯಕ್ತಿಯತ್ತ ಆಕರ್ಷಿತರಾಗುತ್ತಾರೆ. ಹೆಚ್ಚು ಜನರಿಗೆ ಯಾವ ರೀತಿಯ ವ್ಯಕ್ತಿಯ ಮೇಲೆ ಆಕರ್ಷಣೆ ಹೆಚ್ಚುತ್ತೆ ಅನ್ನೋದನ್ನು ನೋಡೋಣ.

2 Min read
Suvarna News
Published : Jun 12 2023, 05:44 PM IST
Share this Photo Gallery
  • FB
  • TW
  • Linkdin
  • Whatsapp
17

ನೀವು ಯಾರನ್ನಾದರೂ ಇಷ್ಟಪಟ್ಟಾಗ, ನೀವು ಅವರತ್ತ ಆಕರ್ಷಿತರಾಗುತ್ತೀರಿ (attraction) ಎಂಬುದರಲ್ಲಿ ಸಂದೇಹವಿಲ್ಲ. ಅನೇಕ ಜನರು ಈ ಆಕರ್ಷಣೆಯನ್ನು ಪ್ರೀತಿ ಎಂದು ಅರ್ಥಮಾಡಿಕೊಳ್ಳುತ್ತಾರೆ. ನಿಮಗೆ ಯಾರ ಮೇಲಾದರೂ ಆಕರ್ಷಣೆ ತೋರಿದರೆ ಅದರ ಹಿಂದೆ ಅನೇಕ ಕಾರಣಗಳಿರಬಹುದು. ವಾಸ್ತವವಾಗಿ, ಆಕರ್ಷಣೆಗಳು ಸಹ ಅನೇಕ ವಿಧಗಳಾಗಿವೆ, ಅವುಗಳ ಬಗ್ಗೆ ನಿಮಗೆ ತಿಳಿದಿಲ್ಲ. ಇಂದು ನಾವು ಅಂತಹ ಕೆಲವು ವಿಭಿನ್ನ ರೀತಿಯ ಆಕರ್ಷಣೆಗಳ ಬಗ್ಗೆ ನಿಮಗೆ ಹೇಳಲಿದ್ದೇವೆ. 

27

ಹತ್ತಿರ ಇರೋರ ಮೇಲೆ ಆಕರ್ಷಣೆ (attraction towards near one)
ಜನರು ಆಗಾಗ್ಗೆ ಭೇಟಿಯಾಗುವ ಮತ್ತು ಹತ್ತಿರದಲ್ಲಿರುವವರ ಕಡೆಗೆ ಆಕರ್ಷಣೆಯನ್ನು ಬೆಳೆಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತೆ. ಯಾಕಂದ್ರೆ ಅವರನ್ನು ತುಂಬಾ ಹತ್ತಿರದಿಂದ ಬಲ್ಲವರಾಗಿರೋದರಿಂದ ಅವರ ಬಗ್ಗೆ ತಿಳಿದು ಆಟ್ರಾಕ್ಷನ್ ಹೆಚ್ಚುತ್ತೆ.                       

37

ಒಂದೇ ರೀತಿ ಹವ್ಯಾಸ ಇರೋರು (same habits)
ಆಸಕ್ತಿಗಳು (intrests), ಮೌಲ್ಯಗಳು, ವರ್ತನೆಗಳು ಮತ್ತು ಹಿನ್ನೆಲೆಯ ವಿಷಯದಲ್ಲಿ ತಮ್ಮೊಂದಿಗೆ ಹೆಚ್ಚು ಹೋಲಿಕೆಯುಳ್ಳ ವ್ಯಕ್ತಿಗಳತ್ತ ಜನರು ಬೇಗನೆ ಆಕರ್ಷಿತರಾಗುತ್ತಾರೆ.

47

ಕೆಂಪು ಆಕರ್ಷಣೆ (red attraction)
ಕೆಂಪು ಬಣ್ಣವು ಆಕರ್ಷಣೆ ಮತ್ತು ಲೈಂಗಿಕ ಆಸಕ್ತಿ ಹೆಚ್ಚಿಸುತ್ತದೆ ಎಂದು ಸಂಶೋಧನೆ ತೋರಿಸಿದೆ. ಹಾಗಾಗಿ ಯಾರಾದರೂ ರೆಡ್ ಕಲರ್ ಡ್ರೆಸ್ ಹಾಕಿದ್ದರೆ ಅದರಿಂದ ಹುಡುಗ ಅಥವಾ ಹುಡುಗಿ ಅವರತ್ತ ಹೆಚ್ಚು ಆಕರ್ಷಿತರಾಗ್ತಾರೆ. 

57

ಹ್ಯೂಮರ್ ಸೆನ್ಸ್ ಇರೋರು (good humour sense)
ಯಾರಿಗೆ ಉತ್ತಮ ಹಾಸ್ಯ ಪ್ರಜ್ಞೆ ಇದೆಯೋ, ಅವರೆಡೆಗೆ ಜನ ಹೆಚ್ಚು ಆಕರ್ಷಿತರಾಗುತ್ತಾರೆ. ಹಾಸ್ಯದಲ್ಲಿ ಮನಸ್ಸನ್ನು ಸೆಳೆಯುವ ಶಕ್ತಿ ಇದೆ. ಈ ಹಾಸ್ಯ ಪ್ರಜ್ಞೆ ಎಲ್ಲರಿಗೂ, ಎಲ್ಲಾ ಸಮಯದಲ್ಲೂ ಒಲಿಯೋದಿಲ್ಲ. ಹಾಗಾಗಿ ಹಾಸ್ಯ ಮಾಡುವವರತ್ತ ಹೆಚ್ಚು ಗಮನ ಸೆಳೆಯುತ್ತದೆ.

67

ಲೈಂಗಿಕ ಆಕರ್ಷಣೆ (sexual attraction)
ಲೈಂಗಿಕ ಆಕರ್ಷಣೆ ಎಂದರೆ ನೀವು ಯಾರಿಗಾದರೂ ದೈಹಿಕವಾಗಿ ಆಕರ್ಷಿತರಾಗಲು ಪ್ರಾರಂಭಿಸಿದಾಗ ಅದು ಸೆಕ್ಸುವಲ್ ಅಟ್ರಾಕ್ಷನ್ ಆಗುತ್ತೆ. ಇಂಟಿಮೆಸಿ ಯಾವ ಮಟ್ಟದಲ್ಲಿದೆಯೆಂದರೆ ನೀವು ಆ ವ್ಯಕ್ತಿಯೊಂದಿಗೆ ಕಾಲ್ಪನಿಕ ಜಗತ್ತಿಗೆ ಪ್ರವೇಶಿಸುತ್ತೀರಿ. ಅವರೊಂದಿಗೆ ಎಲ್ಲಾ ರೀತಿಯಲ್ಲಿ ಕ್ಲೋಸ್ ಆಗಲು ಪ್ರಯತ್ನಿಸುತ್ತಿದ್ದರೆ, ಇದು ಕೇವಲ ಸೆಕ್ಸುವಲ್ ಆಕರ್ಷಣೆ ಅಷ್ಟೇ. 

77

ಇಮೋಶನಲ್ ಅಟ್ರಾಕ್ಷನ್ (emotional attraction)
ಅಂತಹ ಆಕರ್ಷಣೆಯು ಹೃದಯ ಮತ್ತು ಆತ್ಮ ಒಳಗೊಳ್ಳುತ್ತದೆ. ಇದು ಪ್ರತಿಯೊಬ್ಬರೂ ಹಂಬಲಿಸುವ ದೊಡ್ಡ ಬಂಧ. ನಾವೆಲ್ಲರೂ ನಮ್ಮ ಜೀವನದಲ್ಲಿ ಸಹಾನುಭೂತಿಯನ್ನು ಬಯಸುತ್ತೇವೆ ಮತ್ತು ಇತರರಂತೆ ಸ್ನೇಹ ಹಂಚಿಕೊಳ್ಳುತ್ತೇವೆ. ಇದು ಇತರ ವ್ಯಕ್ತಿಯ ಪ್ರೀತಿ ಮತ್ತು ಗೌರವ, ಬೆಂಬಲ ಮತ್ತು ಸ್ವೀಕಾರದ ರೂಪದಲ್ಲಿರಬಹುದು. ಅಂತಹ ಆಕರ್ಷಣೆಗಳಲ್ಲಿ ನೀವು ನಿಮ್ಮ ಕನಸುಗಳು, ಭಯಗಳು, ಭರವಸೆಗಳು ಇತ್ಯಾದಿಗಳನ್ನು ಹಂಚಿಕೊಳ್ಳಲು ಬಯಸುತ್ತೀರಿ.

About the Author

SN
Suvarna News
ಪ್ರೀತಿ
ಸಂಬಂಧಗಳು
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved