ಲೈಂಗಿಕ ಪರಾಕಾಷ್ಠೆ: ಕಾಂತಿಯುತ ಆರೋಗ್ಯಕರ ತ್ವಚೆಯ ರಹಸ್ಯವಿರುವುದು ಇಲ್ಲೇ
ಹೊಳೆಯುವ ಮತ್ತು ಆರೋಗ್ಯಕರ ಚರ್ಮವನ್ನು ಹೊಂದಲು ಹಲವು ಮಾರ್ಗಗಳನ್ನು ಹುಡುಕುತ್ತಿದ್ದೀರಾ? ಲೈಂಗಿಕ ಪರಾಕಾಷ್ಠೆ ಹೊಂದುವುದು ಇದಕ್ಕೆ ಸಹಾಯ ಮಾಡಬಹುದು! ಲೈಂಗಿಕ ಕ್ರಿಯೆಯಿಂದ ಅನೇಕ ಪ್ರಯೋಜನಗಳಿದ್ದರೂ, ಅದನ್ನು ಪೂರ್ಣವಾಗಿ ಆನಂದಿಸಲು ಇನ್ನೊಂದು ಕಾರಣ ಇಲ್ಲಿದೆ. ಲೈಂಗಿಕ ಪರಾಕಾಷ್ಠೆ ಹೊಂದುವುದು ಚರ್ಮವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ಸೂಚಿಸಿವೆ. ಆದರೆ ಲೈಂಗಿಕ ಪರಾಕಾಷ್ಠೆ ಹೊಂದುವುದು ಚರ್ಮವನ್ನು ಸುಧಾರಿಸಲು ಹೇಗೆ ಸಹಾಯ ಮಾಡುತ್ತದೆ ಇಲ್ಲಿದೆ ಮಾಹಿತಿ...
ಮೊಡವೆ: ಒತ್ತಡವು ಚರ್ಮವನ್ನು ಒಳಗೊಂಡಂತೆ ಇಡೀ ದೇಹದ ಮೇಲೆ ಪರಿಣಾಮ ಬೀರುತ್ತದೆ. ಇದು ರಾಸಾಯನಿಕ ಪ್ರತಿಕ್ರಿಯೆಯನ್ನು ಉಂಟುಮಾಡುತ್ತದೆ ಅದು ಚರ್ಮವನ್ನು ಹೆಚ್ಚು ಸೂಕ್ಷ್ಮವಾಗಿಸುತ್ತದೆ ಮತ್ತು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದು ಮೊಡವೆ, ರೊಸಾಸಿಯಾ, ಸೋರಿಯಾಸಿಸ್ ಮತ್ತು ಎಸ್ಜಿಮಾದಂತಹ ಚರ್ಮದ ಸಮಸ್ಯೆಗಳನ್ನು ಉಲ್ಬಣಗೊಳಿಸುತ್ತದೆ.
ಇದಕ್ಕೆ ಲೈಂಗಿಕೆ ಕ್ರಿಯೆಯೂ ಉತ್ತಮ ಔಷಧವಾಗಿದೆ. ಅಂದರೆ ಲೈಂಗಿಕ ಪರಾಕಾಷ್ಠೆಯನ್ನು ಹೊಂದಿರುವುದು ಒತ್ತಡವನ್ನು ನಿವಾರಿಸುತ್ತದೆ, ಇದರಿಂದಾಗಿ ಮೊಡವೆ, ಚರ್ಮದ ಸಮಸ್ಯೆ ಸೇರಿ ಹಲವು ಸಮಸ್ಯೆಗಳನ್ನು ಸುಧಾರಿಸುತ್ತದೆ.
ಚರ್ಮ: ಲೈಂಗಿಕ ಪರಾಕಾಷ್ಠೆಯನ್ನು ಹೊಂದಿರುವುದು ದೇಹದಲ್ಲಿ ಈಸ್ಟ್ರೊಜೆನ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಚರ್ಮಕ್ಕೆ ಈಸ್ಟ್ರೊಜೆನ್ ಏನು ಮಾಡುತ್ತದೆ ಎಂದು ಆಶ್ಚರ್ಯ ಪಡುತ್ತೀರಾ? ಈಸ್ಟ್ರೊಜೆನ್ ಕಾಲಜನ್ ಕಡಿಮೆಯಾಗುವುದನ್ನು ತಡೆಯುತ್ತದೆ, ಇದು ಆರೋಗ್ಯಕರ ಚರ್ಮವನ್ನು ಕಾಪಾಡಿಕೊಳ್ಳಲು ಅಗತ್ಯವಾದ ಪ್ರೋಟೀನ್ ಆಗಿದೆ.
ಈಸ್ಟ್ರೊಜೆನ್ ವಯಸ್ಸಾಗುವಿಕೆಯ ಚಿಹ್ನೆಗಳನ್ನು ನಿಧಾನಗೊಳಿಸಲು ಸಹಾಯ ಮಾಡುತ್ತದೆ ಮತ್ತು ಚರ್ಮವನ್ನು ಆರೋಗ್ಯಕರವಾಗಿರುವಂತೆ ನೋಡಿಕೊಳ್ಳುತ್ತದೆ. ಸುಂದರ ಚರ್ಮ ಪಡೆದುಕೊಳ್ಳಬಹುದು.
ಸುಕ್ಕುಗಳು: ಪ್ರತಿ ಬಾರಿ ಲೈಂಗಿಕೆ ಪಕ್ರಿಯೆ ಮಾಡುವಾಗ ಕೊನೆಯಲ್ಲಿ ಮುಖದಲ್ಲಿ ತಾಜಾ, ಗುಲಾಬಿ ಹೊಳಪನ್ನು ಎಲ್ಲಿ ಪಡೆಯುತ್ತೀರಿ ಎಂದು ಎಂದಾದರೂ ಯೋಚಿಸಿದ್ದೀರಾ? ಲೈಂಗಿಕ ಸಮಯದಲ್ಲಿ ರಕ್ತದ ಹರಿವು ಹೆಚ್ಚಾಗುತ್ತದೆ ಮತ್ತು ಹೆಚ್ಚಿನ ರಕ್ತ ಕಣಗಳು ಮುಖಕ್ಕೆ ಆಮ್ಲಜನಕವನ್ನು ಸಾಗಿಸಲು ಸಾಧ್ಯವಾಗುತ್ತದೆ.
ಮುಖಕ್ಕೆ ಹೆಚ್ಚು ಅಮ್ಲಜನಕ ದೊರೆತಾಗ, ಹಾಗೂ ರಕ್ತದ ಹರಿವು ಹೆಚ್ಚಿದಾಗ ಮುಖ ಹೊಳೆಯಲು ಆರಂಭವಾಗುತ್ತದೆ. ಇದು ಕಾಲಜನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ, ಅಂದರೆ ಸುಕ್ಕುಗಳು ಇಲ್ಲದ ಸುಂದರ ತ್ವಚೆಯನ್ನು ಪಡೆಯುತ್ತೀರಿ.
ನಿದ್ರೆ: ಆರ್ಗಸಂ ಉಂಟಾದ ಸಮಯದಲ್ಲಿ ದೇಹವು ಎಂಡಾರ್ಫಿನ್ ಮತ್ತು ಪ್ರೊಲ್ಯಾಕ್ಟಿನ್ ಅನ್ನು ಬಿಡುಗಡೆ ಮಾಡುತ್ತದೆ, ಅದು ಉತ್ತಮ ನಿದ್ದೆ ಪಡೆಯಲು ಸಹಾಯ ಮಾಡುತ್ತದೆ. ಇಂತಹ ಉತ್ತಮ ನಿದ್ರೆಯನ್ನು ಪಡೆಯುವುದು ದೇಹದ ದುರಸ್ತಿಗೆ ಸಹಾಯ ಮಾಡುತ್ತದೆ ಮತ್ತು ಆರೋಗ್ಯಕರ ದೇಹವನ್ನು ನೀಡುತ್ತದೆ.