Photos| ಕೇಜ್ರಿ ಮಂತ್ರಿಗಳೆಷ್ಟು ಓದಿದ್ದಾರೆ: ದೆಹಲಿ ಜನರಷ್ಟೇ ಅವರೂ ಜಾಣರಿದ್ದಾರೆ!

First Published 16, Feb 2020, 4:25 PM IST

ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಪ್ರಚಂಡ ಜಯ ಗಳಿಸಿದ ಬಳಿಕ ಇಂದು 2020 ಫೆಬ್ರವರಿ 16, ಭಾನುವಾರ ಬೆಳಗ್ಗೆ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರೀವಾಲ್ ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರ ಮಂತ್ರಿಮಂಡಲದ ಸದಸ್ಯರಾಗಿದ್ದ ಮನೀಷ್ ಸಿಸೋಡಿಯಾ, ಗೋಪಾಲ್ ರಾಯ್, ಸತ್ಯೇಂದ್ರ ಜೈನ್, ಕೈಲಾಶ್ ಗೆಹ್ಲೋಟ್, ಇಮ್ರಾನ್ ಹುಸೈನ್ ಹಾಗೂ ರಾಜೇಂದ್ರ ಪಾಲ್ ಗೌತಮ್ ಕೂಡಾ ಪ್ರಮಾಣವಚನ ಸ್ವೀಕರಿಸಿದ್ದಾರೆ. ಕಳೆದ ಬಾರಿ ಸರ್ಕಾರದ ನಡೆಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ಆರು ಸಚಿವರನ್ನು ಈ ಬಾರಿಯೂ ಕೇಜ್ರೀವಾಲ್ ತಮ್ಮ ಸಂಪುಟದಲ್ಲಿ ಉಳಿಸಿಕೊಳ್ಳುತ್ತಾರೆ. ಹಾಗಾದ್ರೆ ಈ ಸಚಿವರು ಯಾರು? ಇವರೆಷ್ಟು ಶಿಕ್ಷಿತರುಮೊದಲಾದ ಮಾಹಿತಿ ನಿಮಗಾಗಿ

ಅರವಿಂದ್ ಕೇಜ್ರೀವಾಲ್ ಸಮಾಜಸೇವೆಯಿಂದ ರಾಜಕೀಯಕ್ಕೆ ಎಂಟ್ರಿ ಕೊಟ್ಟವರು. RTI ಆಂದೋಲನಕ್ಕೆ ಅಡಿಪಾಯ ಹಾಕಿದ ಕೇಜ್ರೀವಾಲ್ ನಾಗರಿಕ ಸೇವಾ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಅಣ್ಣಾ ಹಜಾರೆಯೊಂದಿಗೆ ಕಪ್ಪುಹಣ ಹಾಗೂ ಭ್ರಷ್ಟಾಚಾರದ ವಿರುದ್ಧ ಅವರು ಆಂದೋಲನ ನಡೆಸಿದ್ದರು. ದೆಹಲಿಯಲ್ಲಿ ಮೂರನೇ ಬಾರಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇವರೊಂದಿಗೆ 6 ಮಂದಿ ಸಚಿವರೂ ಪ್ರಮಾಣವಚನ ಸ್ವೀಕರಿಸಿದ್ದಾರೆ. ಹೀಗಿರುವಾಗ ಅವರ ಹಿನ್ನೆಲೆ ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದ ಕೆಲ ಮಾಹಿತಿ ಇಲ್ಲಿದೆ.

ಅರವಿಂದ್ ಕೇಜ್ರೀವಾಲ್- ದೇಶದ ರಾಜಧಾನಿಯ ಸಿಎಂ, ಮೂರನೇ ಬಾರಿ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರ ಶಿಕ್ಷಣದ ಕುರಿತು ನೋಡುವುದಾದರೆ, ಅವರೊಬ್ಬ IIT ಪದವೀಧರ. ಇಷ್ಟೇ ಅಲ್ಲದೇ, ಸಿವಿಲ್ ಸರ್ವಿಸ್ ಪಾಸ್ ಮಾಡಿರುವ ಕೇಜ್ರೀ IRS ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ನವದೆಹಲಿಯಲ್ಲಿ ಪ್ರಚಂಡ ಜಯ ಗಳಿಸಿರುವ ಕೇಜ್ರೀವಾಲ್ ಬಿಜೆಪಿಯ ಸುನಿಲ್ ಕುಮಾರ್ ಯಾದವ್‌ರನ್ನು 21697 ಮತಗಳಿಂದ ಸೋಲಿಸಿದ್ದಾರೆ. ಕಳೆದ ಬಾರಿ ಸಿಎಂ ಆಗಿದ್ದ ಕೇಜ್ರೀವಾಲ್ ಜಲ ಸಂಪನ್ಮೂಲ ಖಾತೆಯನ್ನು ನಿಭಾಯಿಸಿದ್ದರು. ದೆಹಲಿ ಜನತೆಗೆ ಉಚಿತ ನೀರಿನ ವ್ಯವಸ್ಥೆ ಒದಗಿಸಿದ್ದರು. ರೆಮನ್ ಮ್ಯಾಸ್ಗೆಸೆ ಪುರಸ್ಕಾರ ಪಡೆದಿರುವ ಕೇಜ್ರೀವಾಲ್ ಕೆಲಸಕ್ಕೆ ಮತ ನೀಡಿ ಎಂಬ ಘೋಷಣೆ ಮಾಡಿ ದೆಹಲಿಯಲ್ಲಿ ಜಯ ಗಳಿಸಿದ್ದಾರೆ.

ಮನೀಷ್ ಸಿಸೋಡಿಯಾ: ದೆಹಲಿಯ ಡಿಸಿಎಂ ಸಿಸೋಡಿಯಾ, ಕೇಜ್ರೀವಾಲರ ಬಲ ಗೈ ಎಂದೇ ಪ್ರಖ್ಯಾತಿ ಪಡೆದಿದ್ದಾರೆ. ಶಿಕ್ಷಣ ಹೊರತುಪಡಿಸಿ, ಕಲೆ, ಸಂಸ್ಕೃತಿ ಹಾಗೂ ಭಾಷೆ ಜೊತೆಗೆ ಹಣಕಾಸು, ಭೂಮಿ ಹಾಗೂ ಭವನ, ಸೇವಾ ವಲಯ, ಮಹಿಳಾ ವಿಭಾಗ ಹೀಗೆ ಅಭಿವೃದ್ಧಿ ಸಾಧಿಸಬೇಕಾದ ಮಹತ್ವಪೂರ್ಣ ಇಲಾಖೆಗಳ ಜವಾಬ್ದಾರಿ ನಿಭಾಯಿಸಿದ್ದಾರೆ. ಹಾಗಾದ್ರೆ ಅವರೆಷ್ಟು ಶಿಕ್ಷಿತರು ಎಂಬ ಪ್ರಶ್ನೆಗೂ ಉತ್ತರ ಲಭಿಸಿದ್ದು, ಸಿಸೋಡಿಯಾ ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಕೋರ್ಸ್ ಮುಗಿಸಿದ್ದಾರೆ, ಹಾಗೂ ಓರ್ವ ಅತ್ಯುತ್ತಮ ಪತ್ರಕಾರರಾಗಿಯೂ ಹೆಸರು ಗಳಿಸಿದ್ದಾರೆ. ಪಟ್‌ಪಡ್ಗಂಜ್‌ ಕ್ಷೇತ್ರದಲ್ಲಿ ಜಯ ಗಳಿಸಿದ ಸಿಸೋಡಿಯಾ, ಬಿಜೆಪಿಯ ರವೀಂದ್ರ ಸಿಂಗ್ ನೇಗಿಯನ್ನು 3,207 ಮತಗಳ ಅಂತರದಿಂದ ಸೋಲಿಸಿದ್ದಾರೆ. ಕಳೆದ ವಧಿಯಲ್ಲಿ ಶಿಕ್ಷಣ ಹಾಗೂ ಹಣಕಾಸು ಸಚಿವರಾಗಿದ್ದ ಸಿಸೋಡಿಯಾ ಪಕ್ಷದ ಪ್ರಭಾವಿ ನಾಯಕರಾಗಿದ್ದಾರೆ.

ಸತ್ಯೇಂದ್ರ ಜೈನ್: ಆಮ್‌ ಆದ್ಮಿ ಪಕ್ಷದ ಅಂತರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದ ಮೊಹಲ್ಲಾ ಕ್ಲಿನಿಕ್ ನಿರ್ಮಾಣದ ಶ್ರೇಯಸ್ಸು ಸತ್ಯೇಂದ್ರ ಜೈನ್‌ರಿಗೆ ಸಲ್ಲುತ್ತದೆ. ಸತ್ಯೇಂದ್ರ ಜೈನ್‌ರಿಗೆ, ಆರೋಗ್ಯ, ಉದ್ಯೋಗ, ವಿದ್ಯುತ್, ಸಾರ್ವಜನಿಕ ನಿರ್ವಹಣಾ ವಿಭಾಗ, ಗೃಹ ಹಾಗೂ ನಗರ ಅಭಿವೃದ್ಧಿ ಇಲಾಖೆ ಜವಾಬ್ದಾರಿ ನಿಭಾಯಿಸಿದ್ದಾರೆ. ಸತ್ಯೇಂದ್ರ ಜೈನ್ ಬ್ಯಾಚುಲರ್ ಇನ್ ಆರ್ಕಿಟೆಕ್ಟ್ ಪೂರೈಸಿದ್ದಾರೆ. ಶಕೂರ್‌ಬಸ್ತಿ ಕ್ಷೇತ್ರದಿಂದ ಗೆಲುವಿನ ನಗೆ ಬೀರಿದ ಅವರು, ಬಿಜೆಪಿಯ ಎಸ್‌ಸಿ ವತ್ಸರನ್ನು 7592 ಮತಗಳ ಅಂತರದಿಂದ ಸೋಲಿಸಿದ್ದಾರೆ. ಕಳೆದ ಅವಧಿಯಲ್ಲಿ ಅವರು ಆರೋಗ್ಯ, ಇಂಧನ ಹಾಗೂ PWD ಮಿನಿಸ್ಟರ್ ಆಗಿ ಸೇವೆ ಸಲ್ಲಿಸಿದ್ದಾರೆ.

ಗೋಪಾಲ್ ರಾಯ್: ಕೇಜ್ರೀವಾಲ್ ನಂಬಿಕಸ್ಥ ನಾಯಕ ಗೋಪಾಲ್ ರಾಯ್ LLB ಪೂರೈಸಿದ್ದಾರೆ. ಬಾಬರ್‌ಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ರಾಯ್, ಬಿಜೆಪಿಯ ನರೇಶ್ ಗೌಡ್‌ರನ್ನು 33,204 ಮತಗಳ ಅಂತರದಿಂದ ಸೋಲಿಸಿದ್ದಾರೆ. ಕಳೆದ ಅವದಧಿಯಲ್ಲಿ ವಿಕಾಸ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಸಾಮಾನ್ಯ ಆಡಳಿತ ಖಾತೆ, ನೆರೆ ನಿಯಂತ್ರಣಾ ಮಂಡಳಿ ಹಾಗೂ ಗ್ರಾಮೀಣ ಅಭಿವೃದ್ಧಿ ಇಲಾಖೆಯ ಜವಾಬ್ದಾರಿಯೂ ರಾಯ್‌ಗೆ ವಹಿಸಲಾಗಿತ್ತು. ರಾಯ್ ಆಮ್ ಆದ್ಮಿ ಪಕ್ಷದ ದೆಹಲಿ ವಿಭಾಗದ ಸಂಯೋಜಕರೂ ಹೌದು. ಮುಂದಿನ ದಿನಗಳಲ್ಲಿ ಕಾರ್ಮಿಕರಿಗೆ ಕನಿಷ್ಟ ವೇತನ ಕಾನೂನು ಜಾರಿಗೊಳಿಸುವ ಸವಾಲು ಅವರೆದುರು ಇದೆ. ಇಷ್ಟೇ ಅಲ್ಲದೇ ಹಳ್ಳಿಗಳ ಅಭಿವೃದ್ಧಿಗೊಳಿಸುವ ಜವಾಬ್ದಾರಿಯೂ ಅವರಿಗಿದೆ.

ಇಮ್ರಾನ್ ಹುಸೈನ್: ಕೇಜ್ರೀವಾಲ್ ಮಂತ್ರಮಂಡಲದಲ್ಲಿರುವ ಮತ್ತೊಬ್ಬ ಬಲಿಷ್ಟ ನಾಯಕರೆಂದರೆ ಇಮ್ರಾನ್ ಹುಸೈನ್. ಆಪ್ ಅಧಿಕಾರಾವಧಿಯಲ್ಲಿ ರಾಜಧಾನಿಯಲ್ಲಿ ಪರಿಸರ ಸಂಬಂಧಿತ ನಿಯಮಗಳನ್ನು ಜಾರಿಗೊಳಿಸಿದ ಶ್ರೇಯಸ್ಸು ಇಮ್ರಾನ್‌ರಿಗೆ ಸಲ್ಲುತ್ತದೆ. ಪರಿಸರ, ಅರಣ್ಯ, ಆಹಾರ ಇಲಾಖೆ ಜವಾಬ್ದಾರಿ ನಿಭಾಯಿಸಿದ್ದಾರೆ. BBS ಪದವೀಧರರಾಗಿರುವ ಇಮ್ರಾನ್, ಬಿಲ್ಲೀಮಾರಾನ್‌ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ. ಕಳೆದ ಅವಧಿಯಲ್ಲಿ ಆಹಾರ ಸಚಿವರಾಗಿದ್ದ ಇಮ್ರಾನ್ ಪಡಿತರ ವಿತರಣೆಯಲ್ಲಿ ನಡೆಯುತ್ತಿದ್ದ ಗೋಲ್‌ಮಾಲ್‌ಗೆ ಬ್ರೇಕ್ ಹಾಕಿ ರೇಷನ್‌ ಕಾರ್ಡ್‌ ಸಂಬಂಧಿಸಿದ ತನಿಖೆಗೆ ಆದೇಶಿಸಿದ್ದರು. ಮುಂದಿನ 5 ವರ್ಷಗಳಲ್ಲಿ ಪಡಿತರ ಚೀಟಿ ಮಾಡುವ ಪ್ರಕ್ರಿಯೆ ಮತ್ತಷ್ಟು ಸುಧಾರಿಸುವ ಚಾಲೆಂಜ್ ಅವರಿಗಿದೆ.

ರಾಜೇಂದ್ರ ಗೌತಮ್: ಕೇಜ್ರೀವಾಲ್‌ ಸಂಪುಟದಲ್ಲಿ LLB ಪೂರೈಸಿದ ಮತ್ತೊಬ್ಬ ಸಚಿವರೆಂದರೆ ರಾಜೇಂದ್ರ ಪಾಲ್ ಗೌತಮ್. ಸೀಮಾಪುರಿ ಕ್ಷೇತ್ರದಿಂದ ಗೆದ್ದು ಮಂತ್ರಿಮಂಡಲಕ್ಕೆ ಎಂಟ್ರಿ ಪಡೆದಿದ್ದಾರೆ. ವಕೀಲರಾಗಿಯೂ ಸೇವೆ ಸಲ್ಲಿಸಿರುವ ಗೌತಮ್, 2014ರಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಪಾದಾರ್ಪಣೆ ಮಾಡಿದ್ದರು. ಗೌತಮ್ ಆಪ್‌ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯ ಸದಸ್ಯರೂ ಹೌದು. ಕಳೆದ ಅವಧಿಯಲ್ಲಿ ಸಮಾಜ ಕಲ್ಯಾಣ ಸಚಿವಾರಿದ್ದ ಗೌತಮ್ ವೃತ್ತಿಪರ ಕೋರ್ಸ್‌ಗಾಗಿ ಬಡ ಮಕ್ಕಳಿಗೆ ಕೋಚಿಂಗ್ ವ್ಯವಸ್ಥೆ ಕಲ್ಪಿಸುವ ಮುಖ್ಯಮಂತ್ರಿ ಜಯ್ ಭೀಮ್ ಯೋಜನೆಯ ಜನಮನ ಗೆದ್ದಿದ್ದರು.

ಕೈಲಾಶ್ ಗೆಹ್ಲೋಟ್: ದೆಹಲಿ ಸರ್ಕಾರದ ಕ್ಯಾಬಿನೆಟ್ ಮಿನಿಸ್ಟರ್ ಆಗಿರುವ ಕೈಲಾಶ್ ಗೆಹ್ಲೋಟ್ LLM ಪದವೀಧರರು. ವಕೀಲರಾಗಿಯೂ ಸವರು ಸೇವೆ ಸಲ್ಲಿಸಿದ್ದಾರೆ. ನಜಫ್ಘಡ್ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದ ಗೆಹ್ಲೋಫಟ್ ಬಿಜೆಪಿ ಅಭ್ಯರ್ಥಿ ಅಜಿತ್ ಸಿಂಗ್ ಖರ್ಖರೀ ಭಾರೀ ಮತಗಳ ಅಂತರದಿಂದ ಸೋಲಿಸಿ ಗೆಲುವಿನ ನಗೆ ಬೀರಿದ್ದಾರೆ. ಕಳೆದ ಅವಧಿಯಲ್ಲಿ ಅವರು ಪರಿಸರ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ದೆಹಲಿ ವಾಯು ಮಾಲಿನ್ಯವನ್ನು ಶೇ. 25ರಷ್ಟು ತಗ್ಗಿಸಿದ ಮತ್ತು ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆ ಜಾರಿಗೊಳಿಸಿದ ಶ್ರೇಯಸ್ಸು ಗೆಹ್ಲೋಟ್‌ಗೆ ಸಲ್ಲುತ್ತದೆ.

loader