ರೆಡ್ ಸ್ಯಾರಿಯಲ್ಲಿ ಹಾಟ್ ಬ್ಯೂಟಿ ಮಲೈಕಾ, ಚಳಿಯಲ್ಲಿ ಮೈ ಬೆಚ್ಚಗೆ ಮಾಡಿದ್ರಿ ಎಂದ ಫ್ಯಾನ್ಸ್!
ಮಲೈಕಾ ಅರೋರಾ, ಬಾಲಿವುಡ್ನ ಅತ್ಯಂತ ಬೇಡಿಕೆಯ ನಟಿ ಹಾಗೂ ಮಾಡೆಲ್. 50ರ ಆಸು-ಪಾಸಿನಲ್ಲಿದ್ರೂ ಸಖತ್ ಹಾಟ್. ಫಿಗರ್ ಮೈಂಟೇನ್ ಮಾಡ್ಕೊಂಡಿದ್ದಾರೆ. ಯೋಗ ಪಟುವಾಗಿ ಗುರುತಿಸಿಕೊಂಡಿರುವ ಈ ಫಿಟ್ನೆಸ್ ಫ್ರೀಕ್ ಸದ್ಯ ರೆಡ್ ಸ್ಯಾರಿಯಲ್ಲಿ ಸಖತ್ತಾಗಿ ಮಿಂಚಿದ್ದಾರೆ.
ಮಲೈಕಾ ಅರೋರಾ ಅವರು ಬಾಲಿವುಡ್ನ ಅತ್ಯಂತ ಬೇಡಿಕೆಯ ನಟಿ ಹಾಗೂ ಮಾಡೆಲ್. 50ರ ಆಸು-ಪಾಸಿನಲ್ಲಿದ್ರೂ ಸಖತ್ ಹಾಟ್. ಫಿಗರ್ ಮೈಂಟೇನ್ ಮಾಡ್ಕೊಂಡು ಇನ್ನೂ ಹದಿನೆಂಟರ ಹುಡುಗಿಯರು ನಾಚೋ ಹಾಗೆ ಇದ್ದಾರೆ. ಸಖತ್ ಸ್ಟೈಲಿಶ್ ಆಗಿ ಡ್ರೆಸ್ ಮಾಡ್ಕೊಂಡು ಪಡ್ಡೆಗಳ ನಿದ್ದೆಗೆಡಿಸುತ್ತಲೇ ಇರುತ್ತಾರೆ.
ಇತ್ತೀಚಿಗೆ ಮಲೈಕಾ ಅರೋರಾ ರೆಡ್ ಸೀರೆಯುಟ್ಟು ಸಿಜ್ಲಿಂಗ್ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಹಾಟ್ ಫೋಟೋಸ್ ಇಂಟರ್ನೆಟ್ನಲ್ಲಿ ವೈರಲ್ ಆಗ್ತಿದೆ.
ಫೋಟೋಸ್ ನೋಡಿದ ನೆಟ್ಟಿಗರು ಫೈರ್ ಎಮೋಜಿ ಕಮೆಂಟ್ ಮಾಡುತ್ತಿದ್ದು, ಅಷ್ಟರ ಮಟ್ಟಿಗೆ ಮಲೈಕಾ ಅವರು ಸೌಂದರ್ಯದಿಂದ ಪ್ರೇಕ್ಷಕರನ್ನು ಪ್ರಭಾವಿಸುತ್ತಾರೆ. ಅವರ ಫೋಟೋಗಳು ಪೋಸ್ಟ್ ಮಾಡಿದ ತಕ್ಷಣ ವೈರಲ್ ಆಗುತ್ತವೆ.
ಬಾಲಿವುಡ್ ಬ್ಯೂಟಿ ಮಲೈಕಾ ಅರೋರಾ ಅವರು ನಟಿಗಿಂತ ಮೊದಲು ರೂಪದರ್ಶಿ. ನಟಿಯಾಗಿ ಮಾತ್ರವಲ್ಲದೆ ಮಲೈಕಾ ಅರೋರಾ ಮಾಡೆಲಿಂಗ್ನಲ್ಲಿ ಯಾವಾಗಲೂ ಸಕ್ರಿಯರಾಗಿದ್ದಾರೆ. ತಮ್ಮ ಸ್ಟೈಲಿಶ್ ಫೋಟೋಶೂಟ್ನಿಂದಲೇ ಎಲ್ಲರ ಗಮನ ಸೆಳೆಯುತ್ತಾರೆ.
ಯೋಗ ಟೀಚರ್ ಆಗಿರುವ ಮಲೈಕಾ ಅರೋರಾ ಅವರ ಫಿಟ್ನೆಸ್ ಬಗ್ಗೆ ಎರಡನೇ ಮಾತೇ ಇಲ್ಲ. ನಟಿ ವಯಸ್ಸಾದರೂ ಸುಂದರವಾಗಿ ತಮ್ಮ ಫಿಟ್ನೆಸ್ ಕಾಯ್ದುಕೊಳ್ಳುತ್ತಾರೆ.
ಮಲೈಕಾ ಅರೋರಾ ಅವರು ಮಾಡೆಲಿಂಗ್ ಹಾಗೂ ನಟನೆಯನ್ನು ಬಿಟ್ಟು ರಿಯಾಲಿಟಿ ಶೋಗಳ ಜಡ್ಜ್ ಆಗಿಯೂ ಭಾಗವಹಿಸುತ್ತಿದ್ದಾರೆ. ಅವರು ಡ್ಯಾನ್ಸ್ ಶೋಗಳಿಗೆ ತೀರ್ಪುಗಾರರಾಗಿ ಭಾಗವಹಿಸಿ ಉತ್ತಮ ಸಂಭಾವನೆ ಗಳಿಸುತ್ತಾರೆ.
ಇತ್ತೀಚಿಗೆ ಮಲೈಕಾ ಅರ್ಜುನ್ ಕಪೂರ್ ಜೊತೆ ಲವ್ ಬ್ರೇಕಪ್ ಮಾಡಿಕೊಂಡಿದ್ದಾರೆ ಎನ್ನುವುದಾಗಿ ಸುದ್ದಿ ಹರಿದಾಡಿತ್ತು. ಆದ್ರೆ ಈ ಕುರಿತು ಮಲೈಕಾ ಅಥವಾ ಅರ್ಜುನ್ ಎಲ್ಲಿಯೂ ಅಧಿಕೃತವಾಗಿ ಹೇಳಿಕೆ ನೀಡಿಲ್ಲ.
ಮಲೈಕಾ ಅರೋರಾ ಈಗ ಸಿನಿಮಾಗಳಿಗಿಂತಲೂ ಅರ್ಜುನ್ ಕಪೂರ್ ವಿಚಾರದಲ್ಲಿಯೇ ಹೆಚ್ಚು ಸುದ್ದಿಯಲ್ಲಿ ಇರುತ್ತಾರೆ. ಹೊಸ ರೀತಿಯ ಫೋಟೋ ಶೂಟ್ ಮೂಲಕವೂ ಎಲ್ಲರ ದಿಲ್ ಅಲ್ಲಿ ಹಲ್ ಚಲ್ ಎಬ್ಬಿಸುತ್ತಲೇ ಇರುತ್ತಾರೆ.