ರಣವೀರ್ ಸಿಂಗ್ ಆಯಿತು, ಈಗ ಉರ್ಫಿ ಜಾವೇದ್ ನೂಡ್ ಫೋಟೋಶೂಟಿಗೆ ಟ್ರೋಲ್
ಟಿವಿ ನಟಿ ಮತ್ತು ಮಾಡೆಲ್ ಉರ್ಫಿ ಜಾವೇದ್ (Urfi Javed) ಅವರು ಸಾಮಾಜಿಕ ಮಾಧ್ಯಮದಲ್ಲಿ (Social Media) ಬಟ್ಟೆ ಇಲ್ಲದೇ ಹಾಸಿಗೆ ಮೇಲೆ ಮಲಗಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ತಮ್ಮ ದೇಹವನ್ನು ಗುಲಾಬಿ ದಳಗಳಿಂದ ಮುಚ್ಚಿದ್ದಾರೆ. ವೀಡಿಯೊ ಕ್ಲಿಪ್ನ ಹಿನ್ನೆಲೆಯಲ್ಲಿ, ಉರ್ಫಿ 'ರೂಪ್ ಸುಹಾನಾ ಲಗ್ತಾ ಹೈ, ಚಾಂದ್ ಪುರಾನಾ ಲಗ್ತಾ ಹೈ' ಹಾಡಿನ ರೀಮಿಕ್ಸ್ ಆವೃತ್ತಿಯನ್ನು ಹಾಕಿದ್ದಾರೆ. ಅಲ್ಲದೆ, ಶೀರ್ಷಿಕೆಯಲ್ಲಿ ಏನನ್ನೂ ಬರೆಯುವ ಬದಲು ಕೆಂಪು ಗುಲಾಬಿಯ ಎಮೋಜಿಯನ್ನು ಮಾತ್ರ ಹಾಕಲಾಗಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು 24 ವರ್ಷದ ಉರ್ಫಿಯ ಈ ವೀಡಿಯೊಗೆ ಸಖತ್ ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ಆಕೆಯ ಈ ವಿಡಿಯೋವನ್ನು ರಣವೀರ್ ಸಿಂಗ್ (Ranveer Singh) ಅವರ ಇತ್ತೀಚಿನ ನ್ಯೂಡ್ ಫೋಟೋಶೂಟ್ನೊಂದಿಗೆ ಹೋಲಿಕೆ ಮಾಡುತ್ತಿದ್ದಾರೆ. ಉರ್ಫಿ ಅವರ ವೀಡಿಯೊದಲ್ಲಿ ಜನರ ಕಾಮೆಂಟ್ಗಳು ಹೇಗಿವೆ ನೋಡಿ.
ಉರ್ಫಿಯ ವೀಡಿಯೊ ಕುರಿತು ಸಾಮಾಜಿಕ ಮಾಧ್ಯಮ ಬಳಕೆದಾರರು ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. 'ಯಾರಾದರೂ ಫ್ಯಾನ್ ಆನ್ ಮಾಡಿ' ಎಂದು ಬರೆದಿದ್ದಾರೆ. 'ಗಾಳಿ ಬೀಸಲಿ ಮತ್ತು ಹೂವುಗಳನ್ನು ತೆಗೆದುಕೊಂಡು ಹೋಗಲಿ' ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ.
ನೀವು ಏನು ಮಾಡಲು ಪ್ರಯತ್ನಿಸುತ್ತಿದ್ದೀರಿ? ಎಂದು ಇನ್ನೊಬ್ಬರು ಬರೆದಿದ್ದಾರೆ. 'ಕನಿಷ್ಠ ರಣವೀರ್ ಸಿಂಗ್ಗಿಂತ ಉತ್ತಮ' ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರ ಕಾಮೆಂಟ್ ಬಾಕ್ಸ್ನಲ್ಲಿ 'ಅವಳು ಸನ್ನಿ ಲಿಯೋನ್ ಜೊತೆ ಸ್ಪರ್ಧಿಸುತ್ತಿದ್ದಾಳೆ,' ಎಂದು ಬರೆದಿದ್ದಾರೆ. ಅದೇ ಸಮಯದಲ್ಲಿ ಮತ್ತೊಬ್ಬರು 'ರಣವೀರ್ ಸಿಂಗ್ ಕೊ ಡಿಕ್ಕಿ' ಎಂದು ಬರೆದಿದ್ದಾರೆ.
'ರಣವೀರ್ ಸಿಂಗ್ ಮತ್ತು ಉರ್ಫಿ ದೂರದ ಸಂಬಂಧಿ ಅಲ್ಲ. ಆದರೆ ಇಬ್ಬರೂ ಒಂದೇ ರೀತಿಯ ಹವ್ಯಾಸಗಳನ್ನು ಹೊಂದಿದ್ದಾರೆ' ಎಂದು ಒಬ್ಬ ಯೂಸರ್ ಬರೆದಿದ್ದಾರೆ. 'ಬಹುಶಃ ಶ್ರೀಮತಿ ರಣವೀರ್ ಪಡುಕೋಣೆ ಅವರೊಂದಿಗೆ ಸ್ಪರ್ಧಿಸಲು ಪ್ರಯತ್ನಿಸುತ್ತಿದ್ದಾರೆ,' ಎಂದು ಮಗದೊಬ್ಬರು ಕಾಲೆಳೆದಿದ್ದಾರೆ.
ರಣವೀರ್ ಸಿಂಗ್ ಅವರು ಇತ್ತೀಚೆಗೆ ಮ್ಯಾಗಜೀನ್ಗಾಗಿ ನ್ಯೂಡ್ ಫೋಟೋಶೂಟ್ ಮಾಡಿದ್ದಾರೆ, ಅದು ಸಾಕಷ್ಟು ವೈರಲ್ ಆಗಿದೆ. ಈ ಬಗ್ಗೆ ಹಲವರು ರಣವೀರ್ ಅವರನ್ನು ಟೀಕಿಸಿದರೆ, ಹಲವರು ಅವರ ಧೈರ್ಯವನ್ನು ಕೊಂಡಾಡಿದ್ದಾರೆ.
ಇತ್ತೀಚೆಗೆ, ಅವರು ಕಪ್ಪು ಪಾರದರ್ಶಕ ಉಡುಪಿನಲ್ಲಿ ಕಾಣಿಸಿಕೊಂಡರು, ಲೋ ವೇಸ್ಟ್ ಕಪ್ಪು ಸೀ-ಥ್ರೂ ನೆಟ್ ಮೊನೊಕಿನಿ ಧರಿಸಿದ ಅವರ ಲುಕ್ ಸಖತ್ ವೈರಲ್ ಆಗಿತ್ತು ಮತ್ತು ಅವರ ಲುಕ್ ಪೂರ್ಣಗೊಳಿಸಲು ಕಪ್ಪು ಹೈ ಹೀಲ್ಡ್ ಪೀಪ್ ಟೋಜ್ಸ್ ಧರಿಸಿದ್ದರು.
ಉರ್ಫಿ ಸಾಮಾನ್ಯವಾಗಿ ವಿಚಿತ್ರ ಬಟ್ಟೆಗಳನ್ನು ಧರಿಸಿ ಸಾರ್ವಜನಿಕರ ಎದರು ಬರುತ್ತಾರೆ. ಈ ಹಿಂದೆಯೂ ಉರ್ಫಿ ಜಾವೇದ್ ಹೂವುಗಳ ಜೊತೆ ಹಲವು ಪ್ರಯೋಗಗಳನ್ನು ಮಾಡಿದ್ದಾರೆ. ಒಮ್ಮೆ ಅವರು ಹೂವಿನಿಂದ ಮಾಡಿದ ಟೂ ಪೀಸ್ ಔಟ್ಫಿಟ್ ಧರಿಸಿ ಸಂಚಲನ ಮೂಡಿಸಿದರು.