ಬೆತ್ತಲಾಗಿ ಪೋಸ್ ನೀಡಿದ ಸುದೀಪ್ 'ನಮ್ಮಣ್ಣ' ಸಿನಿಮಾ ನಟಿ; ಬೋಲ್ಡ್ ಫೋಟೋ ವೈರಲ್
ರಣವೀರ್ ಸಿಂಗ್ ಬೆತ್ತಲೇ ಫೋಟೋಶೂಟ್ ಬೆನ್ನಲ್ಲೇ ಇದೀಗ ಮತ್ತೋರ್ವ ನಟಿಯ ಹಾಟ್ ಫೋಟೋಶೂಟ್ ವೈರಲ್ ಆಗಿದೆ. ಹೌದು, ಬಹುಭಾಷ ನಟಿ ಫ್ಲೋರಾ ಸೈನಿ ಬೆತ್ತಲಾಗಿ ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಫ್ಲೋರಾ ಬೆತ್ತಲೇ ಫೋಟೋಶೂಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಇತ್ತೀಚಿನ ದಿನಗಳಲ್ಲಿ ಬೆತ್ತಲಾಗಿ ಫೋಟೋಶೂಟ್ ಮಾಡಿಸುವ ಟ್ರೆಂಡ್ ಹೆಚ್ಚಾಗುತ್ತಿದೆ. ನಟ-ನಟಿಯರು ಕ್ಯಾಮರಾ ಮುಂದೆ ಬಟ್ಟೆ ಬಿಚ್ಚಿ ನಗ್ನವಾಗಿ ಪೋಸ್ ನೀಡುತ್ತಿದ್ದಾರೆ. ಇತ್ತೀಚಿಗಷ್ಟೆ ಬಾಲಿವುಡ್ ಸ್ಟಾರ್ ನಟ ರಣವೀರ್ ಸಿಂಗ್ ಬೆತ್ತಲೆ ಫೋಟೋಶೂಟ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅಲ್ಲದೆ ರಣವೀರ್ ಸಿಂಗ್ ವಿರುದ್ಧ ದೂರು ಕೂಡ ದಾಖಲಾಗಿತ್ತು.
ರಣವೀರ್ ಸಿಂಗ್ ಬೆತ್ತಲೇ ಫೋಟೋಶೂಟ್ ಬೆನ್ನಲ್ಲೇ ಇದೀಗ ಮತ್ತೋರ್ವ ನಟಿಯ ಹಾಟ್ ಫೋಟೋಶೂಟ್ ವೈರಲ್ ಆಗಿದೆ. ಹೌದು, ಬಹುಭಾಷ ನಟಿ ಫ್ಲೋರಾ ಸೈನಿ ಬೆತ್ತಲಾಗಿ ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಫ್ಲೋರಾ ಬೆತ್ತಲೇ ಫೋಟೋಶೂಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ.
ನಟಿ ಫ್ಲೋರಾ ಮ್ಯಾಗಜಿನ್ ಒಂದಕ್ಕೆ ಬತ್ತಲಾಗಿದ್ದಾರೆ. ಫ್ಯಾಷನ್ ಹೆರಾಲ್ಡ್ ಮ್ಯಾಜಿನ್ ಗಾಗಿ ಫ್ಲೋರಾ ಬಟ್ಟೆ ಬಿಚ್ಚಿ ಪೋಸ್ ನೀಡಿದ್ದಾರೆ. ಟೆವೆಲ್ ಮಾತ್ರ ಹಾಕಿಕೊಂಡು ಫ್ಲೋರಾ ಬೆತ್ತಲೆ ಬೆನ್ನನ್ನು ಕ್ಯಾಮರಾಗೆ ತೋರಿಸಿದ್ದಾರೆ. ಕ್ಯಾಮರಾ ಮುಂದೆ ಸುಂದರ ಮೈ ಮಾಟ ತೋರಿಸಿರುವ ನಟಿಯ ಬೋಲ್ಡ್ ಫೋಟೋಶೂಟ್ ಈಗ ಎಲ್ಲಾ ಕಡೆ ಹರಿದಾಡುತ್ತಿದೆ.
ಅಂದಹಾಗೆ ಯಾರು ಈ ಫ್ಲೋರಾ ಸೈನಿ? ಉತ್ತರ ಭಾರತದ ಈ ನಟಿ ಖ್ಯಾತಗಳಿಸಿದ್ದು ದಕ್ಷಿಣ ಭಾರತೀಯ ಸಿನಿಮಾರಂಗದಲ್ಲಿ. ತೆಲುಗು ಮತ್ತು ಕನ್ನಡದ ಅನೇಕ ಸಿನಿಮಾಗಳಲ್ಲಿ ಫ್ಲೋರಾ ಸೈನಿ ನಟಿಸಿದ್ದಾರೆ. ಪ್ರೇಮ್ ಕೋಸಮ್ ಸಿನಿಮಾ ಮೂಲಕ ಬಣ್ಣದ ಲೋಕದ ಪಯಣ ಪ್ರಾರಂಭಿಸಿದ ಫ್ಲೋರಾ ಬಳಿಕ ಅನೇಕ ಸಿನಿಮಾಗಳಲ್ಲಿ ನಟಿಸಿದರು.
ಫ್ಲೋರಾ ಸೈನಿ ಸ್ಕ್ರೀನ್ ಹೆಸರು ಆಶಾ ಸೈನಿ. ಆಶಾ ಸೈನಿಯಾಗಿಯೇ ಸಿನಿಮಾರಂಗದಲ್ಲಿ ಮಿಂಚಿದ್ದಾರೆ. ಕೊದಂಡ ರಾಮ ಸಿನಿಮಾ ಮೂಲಕ ಕನ್ನಡಕ್ಕೆ ಬಂದ ಪ್ಲೋರಾ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಶ್ರೀನಗರ ಕಿಟ್ಟಿ ಜೊತೆ ಗಿರಿ, ಸುದೀಪ್ ನಟನೆಯ ನಮ್ಮಣ್ಣ, ದಿಮಾಕು, ವಿಸ್ಮಯ, ಸಿಐಡಿ ಇಷ ಸೇರಿದಂತೆ ಇನ್ನು ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಬಳಿಕ ಮತ್ತೆ ಹಿಂದಿ ಸಿನಿಮಾರಂಗದ ಕಡೆ ಹೊರಟ ಫ್ಲೋರಾ ಹಿಂಯಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾಗಿಂತ ಹೆಚ್ಚಾಗಿ ಫ್ಲೋರಾ ವೆಬ್ ಸೀರಿಸ್ ಕಡೆ ಹೆಚ್ಚು ಗಮನ ಹರಿಸಿದ್ದರು, ಸದ್ಯ ವೆಬ್ ಸೀರಿಸ್ನಲ್ಲಿ ಬ್ಯುಸಿಯಾಗಿದ್ದಾರೆ. ಕಿರುತೆರೆಯಲ್ಲೂ ಬ್ಯುಸಿಯಾಗಿದ್ದರು. ಇದೀಗ ಮತ್ತೆ ಹಾಟ್ ಫೋಟೋ ಶೂಟ್ ಮೂಲಕ ಮತ್ತೆ ಸದ್ದು ಮಾಡುತ್ತಿದ್ದಾರೆ.