ಹಳದಿ ಬಿಕಿನಿಯಲ್ಲಿ ಮತ್ತೆ ಹಾಟ್ ಆದ ಇಲಿಯಾನಾ; ಬೋಲ್ಡ್ ಫೋಟೋ ವೈರಲ್
ನಟಿ ಇಲಿಯಾನಾ ಬಿಕಿನಿ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಹಳದಿ ಬಣ್ಣದ ಬಿಕಿನಯಲ್ಲಿ ಹಾಟ್ ಆಗಿರುವ ಇಲಿಯಾನಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ನಟಿ ಇಲಿಯಾನಾ ಡಿಕ್ರೂಸ್ ಇತ್ತೀಚಿಗೆ ಸಿನಿಮಾರಂಗದಲ್ಲಿ ಮಿಂಚಿದ್ದು ಕಡಿಮೆ. ಆದರೂ ಆಗಾಗ ಸುದ್ದಿಯಲ್ಲಿರುತ್ತಾರೆ. ಬಾಯ್ ಫ್ರೆಂಡ್ ವಿಚಾರವಾಗಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದ ನಟಿ ಇಲಿಯಾನಾ ಬಳಿಕ ಬ್ರೇಕಪ್ ಮಾಡಿಕೊಂಡು ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಸಿನಿಮಾ ಜೊತೆಗೆ ಆಗಾಗ ಪ್ರವಾಸ ಎಂಜಾಯ್ ಮಾಡುವ ಇಲಿಯಾನಾ ಸದ್ಯ ಗೋವಾ ಬೀಚ್ನಲ್ಲಿ ಮಸ್ತ್ ಮಜಾ ಮಾಡುತ್ತಿದ್ದಾರೆ. ಸದಾ ಬೀಚ್ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ನಟಿ ಇಲಿಯಾನಾ ಇದೀಗ ಮತ್ತೆ ಬೀಚ್ ಸುಂದರಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಮಿಂಚುತ್ತಿದ್ದಾರೆ.
ಗೋವಾ ಪ್ರವಾಸಕ್ಕೆ ಹೋಗಿರುವ ನಟಿ ಇಲಿಯಾನಾ ಹಾಟ್ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಹಳದಿ ಬಿಕಿನಿ ಧರಿಸಿ ಫೋಟೋ ಕ್ಲಿಕ್ಕಿಸಿಕೊಂಡಿರುವ ಇಲಿಯಾನಾ ಫೋಟೋಗಳನ್ನು ತನ್ನ ಇನ್ಸ್ಟಾಗ್ರಾಮ್ ಸ್ಟೇಟಸ್ನಲ್ಲಿ ಶೇರ್ ಮಾಡಿದ್ದಾರೆ.
ಹಾಟ್ ಸುಂದರಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಅಂದಹಾಗೆ ಇಲಿಯಾನಾ ಬಿಕಿನಿ ಧರಿಸಿ ಪೋಸ್ ನೀಡುತ್ತಿರುವುದು ಇದೇ ಮೊದಲಲ್ಲ. ಅನೇಕ ಬಾರಿ ಬಿಕಿನಿ ಧರಿಸಿ ಹಾಟ್ ಆಗುವ ಮೂಲಕ ಪಡ್ಡೆ ಯುವಕರ ನಿದ್ದೆ ಗೆಡಿಸಿದ್ದಾರೆ. ಇದೀಗ ಮತ್ತೊಮ್ಮೆ ಹಾಟ್ ಆಗಿ ಅಭಿಮಾನಿಗಳಿಗೆ ಕಿಕ್ ಏರಿಸಿದ್ದಾರೆ.
ಇಲಿಯಾನಾ ಸದ್ಯ ಕತ್ರಿನಾ ಕೈಫ್ ಸಹೋದರನ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಕತ್ರಿನಾ ಕೈಫ್ ಅವರ ಹುಟ್ಟುಹಬ್ಬದ ಸಮಯದಲ್ಲಿ ಕತ್ರಿನಾ ಕೈಫ್ ಕುಟುಂಬದ ಜೊತೆ ಇಲಿಯಾನಾ ಕೂಡ ಕಾಣಿಸಿಕೊಂಡಿದ್ದರು. ಕತ್ರಿನಾ ಕೈಫ್ ಸಹೋದರನ ಜೊತೆ ಕ್ಯಾಮರಾಗೆ ಪೋಸ್ ನೀಡುವ ಫೋಟೋಗಳು ವೈರಲ್ ಆಗಿದ್ದವು.
ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ಇಲಿಯಾನಾ ಕೊನೆಯದಾಗಿ ಬಿಗ್ ಬುಲ್ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅಲ್ಲದೇ ಇಲಿಯಾನಾ ಅಭಿನಯಕ್ಕೆ ಎಲ್ಲರಿಂದ ಪ್ರಶಂಸೆ ವ್ಯಕ್ತವಾಗಿತ್ತು.