ನವರಾತ್ರೀಲಿ ಕರಣಿಕ ಮುತ್ತೈದೆಗೆ ಬಾಗೀನಾ ಕೊಡೋದ್ರಿಂದ ಏನು ಶುಭ?
ನವರಾತ್ರಿಯ ಸಮಯದಲ್ಲಿ ಬಾಗಿನ ನೀಡುವ ಪದ್ಧತಿ ಎಲ್ಲೆಡೆ ಇದೆ. ಕೆಲವು ಕಡೆ 10 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ದುರ್ಗಿ ಬಾಗಿನ ನೀಡಲಾದರೆ, ಕೆಲವೆಡೆ ಮುತ್ತೈದೆಯರಿಗೆ ಬಾಗಿನ ನೀಡಿ ಸತ್ಕರಿಸಲಾಗುತ್ತದೆ. ಉತ್ತರ ಭಾರತದಲ್ಲಿ ಮಹಾನವಮಿಯಂದು ಕನ್ಯಾ ಪೂಜೆ ಮಾಡಲಾಗುತ್ತದೆ. 2ರಿಂದ 10ರ ವಯೋಮಾನದ ಹೆಣ್ಣುಮಕ್ಕಳನ್ನು ದೇವಿ ದುರ್ಗೆಯ ಸ್ವರೂಪ ಎಂದು ಪರಿಗಣಿಸಲಾಗಿದೆ.

ಶರನ್ನವರಾತ್ರಿಯ ಆಚರಣೆ ಅಂತಿಮ ಘಟ್ಟಕ್ಕೆ ತಲುಪುತ್ತಿದೆ. ಇನ್ನು ಎರಡೇ ದಿನಗಳಲ್ಲಿ ನವದುರ್ಗೆಯರ ಆರಾಧನೆ ಮಾಡುವ ಪುಣ್ಯದ ಕಾಲ ಮುಗಿದುಹೋಗುತ್ತದೆ. ಬಳಿಕ, ವಿಜಯದಶಮಿಯ ಸಂಭ್ರಮ. ನವರಾತ್ರಿಯ ಸಮಯದಲ್ಲಿ ಪ್ರತಿ ಮನೆಗಳಲ್ಲೂ ಸಾಮಾನ್ಯವಾಗಿ ಬಾಗಿನ ನೀಡಲಾಗುತ್ತದೆ. ವ್ರತ ಅಥವಾ ಪೂಜೆಯನ್ನು ಕೈಗೊಳ್ಳುವ ಪ್ರತಿಯೊಬ್ಬರೂ ಬಾಗಿನ ನೀಡಲೇಬೇಕು. ಬಾಗಿನ ನೀಡದಿದ್ದರೆ ನವರಾತ್ರಿಯ ಆಚರಣೆ ಪೂರ್ಣವಾಗುವುದಿಲ್ಲ. ಉತ್ತರ ಭಾರತದಲ್ಲಿ ನವರಾತ್ರಿಯ ಅಂತಿಮ ದಿನದಂದು ಅಂದರೆ, ಮಹಾನವಮಿಯಂದು ಕನ್ಯಾ ಪೂಜೆಯನ್ನು ಮಾಡಲಾಗುತ್ತದೆ. ಕನ್ಯೆಯರು ಅಂದರೆ 10 ವರ್ಷದೊಳಗಿನ ಹೆಣ್ಣುಮಕ್ಕಳಿಗೆ ಪೂಜೆ ಅರ್ಪಿಸಿ, ಬಾಗಿನ ನೀಡಲಾಗುತ್ತದೆ. ಕನ್ಯಾ ಪೂಜೆ ಮಾಡಲಾಗದಿದ್ದರೆ ನವರಾತ್ರಿಯ ಆಚರಣೆ ಅಪೂರ್ಣವೆಂದು ಭಾವಿಸಲಾಗುತ್ತದೆ. 9 ಕನ್ಯೆಯರಿಗೆ ಬಾಗಿನ ನೀಡಿದ ಬಳಿಕ, ಭೋಜನ ಮಾಡಿಸುವುದು ಪದ್ಧತಿ. ದಕ್ಷಿಣ ಭಾರತದ ಕರ್ನಾಟಕ, ತಮಿಳುನಾಡುಗಳಲ್ಲಿಯೂ ಬಾಗಿನ ನೀಡುವ ಪದ್ಧತಿ ಇದೆ. ಹಾಗೆಯೇ, ಹಲವು ಪ್ರದೇಶಗಳಲ್ಲಿ “ಮುತ್ತೈದೆಯರ ಊಟ’ ಎನ್ನುವ ಕಾರ್ಯಕ್ರಮವೂ ಇದೆ. ಮುತ್ತೈದೆಯರಿಗೆ ಬಾಗಿನ ನೀಡಿ, ಅವರನ್ನು ಸತ್ಕರಿಸುವುದು ಕೆಲ ಪ್ರದೇಶಗಳಲ್ಲಿ ಚಾಲ್ತಿಯಲ್ಲಿದೆ. ಜತೆಗೆ, ದುರ್ಗಿ ಬಾಗಿನ ಎಂದೇ ಕರೆಯಲ್ಪಡುವ ಬಾಗಿನವನ್ನು ಪುಟ್ಟ ಹೆಣ್ಣುಮಕ್ಕಳಿಗೆ ನೀಡುವುದು ಸಹ ಪದ್ಧತಿ. ಮಹಿಳೆಯರು ಮತ್ತು ಹೆಣ್ಣುಮಕ್ಕಳಿಗೆ ಹೀಗೆ ಬಾಗಿನ ನೀಡಿ ಸತ್ಕರಿಸುವುದರಿಂದ ಮನೆಯಲ್ಲಿ ಎಂದಿಗೂ ಸಂಪತ್ತಿನ ಕೊರತೆ ಆಗುವುದಿಲ್ಲ, ಸಮೃದ್ಧಿ ಹೆಚ್ಚುತ್ತದೆ ಎಂಬ ನಂಬಿಕೆ ಇದೆ. ಜತೆಗೆ, ಆ ಮನೆಗೆ ಸದಾಕಾಲ ದೇವಿಯ ಕೃಪೆ ಲಭಿಸುತ್ತದೆ ಎನ್ನಲಾಗುತ್ತದೆ.
ದುರ್ಗಿ ಬಾಗಿನ
10 ವರ್ಷದೊಳಗಿನ ಹೆಣ್ಣುಮಕ್ಕಳಿಗೆ (Girls) ದುರ್ಗಿ ಬಾಗಿನ ನೀಡಲಾಗುತ್ತದೆ. ಸಾಮಾನ್ಯವಾಗಿ, ನವರಾತ್ರಿಯ (Navaratri) ಯಾವುದೇ ದಿನಗಳಂದು ಬಾಗಿನ ನೀಡಬಹುದು. ಆದರೆ, ಮಹಾನವಮಿಯಂದು (Navaratri) ನೀಡುವುದು ಹೆಚ್ಚು ಶ್ರೇಯಸ್ಕರ ಎನ್ನಲಾಗುತ್ತದೆ. ಕೆಲವು ಪ್ರದೇಶಗಳಲ್ಲಿ ಅಷ್ಟಮಿ ದಿನದಂದು ಸಹ ಕನ್ಯೆಯರಿಗೆ ಬಾಗಿನ ನೀಡಿ, ಸತ್ಕರಿಸುವ ಪದ್ಧತಿ ಇದೆ.
ನಾಳೆ ನವರಾತ್ರಿ 8ನೇ ದಿನ ಮಹಾಗೌರಿ ಪೂಜೆ ಮಹತ್ವ, ಮಂತ್ರ
2 ವರ್ಷದ ಹೆಣ್ಣುಮಕ್ಕಳಿಂದ ಹಿಡಿದು 10 ವರ್ಷದ ಹೆಣ್ಣುಮಕ್ಕಳನ್ನು ದೇವಿ ದುರ್ಗೆಯ ಪ್ರತಿರೂಪ ಎಂದು ಭಾವಿಸಲಾಗುತ್ತದೆ. ಈ ಕನ್ಯೆಯರಿಗೆ ಬಾಗಿನ, ಭೋಜನದಿಂದ ಸತ್ಕರಿಸುವ ಮೂಲಕ ಎಲ್ಲ ರೀತಿಯ ದೋಷಗಳಿಂದ ಮುಕ್ತಿ ದೊರೆಯುತ್ತದೆ ಎಂದು ಕೆಲವು ಶಾಸ್ತ್ರಗ್ರಂಥಗಳಲ್ಲಿ ಹೇಳಲಾಗಿದೆ. ಮನೆಗೆ ಕರೆದು ಸತ್ಕರಿಸುವುದು ಉತ್ತಮ. ಒಂದೊಮ್ಮೆ ಸಾಧ್ಯವಾಗದಿದ್ದರೆ ಆ ಹೆಣ್ಣುಮಕ್ಕಳಿರುವ ಮನೆಗಳಿಗೇ ತೆರಳಿ ನೀಡಬಹುದು. ಬಾಗಿನ ನೀಡುವ ಮುನ್ನ ಅದನ್ನು ದೇವಿಯ ಎದುರು ಪೂಜೆ ಮಾಡಿರಬೇಕು.
ಕನ್ಯೆಯರ ಮಹತ್ವವೇನು?
ಜ್ಯೋತಿಷ್ಯ ತಜ್ಞರ ಪ್ರಕಾರ, 2ರ ಮೇಲ್ಪಟ್ಟ ವಯಸ್ಸಿನ ಹೆಣ್ಣುಮಕ್ಕಳು ದೇವಿಯ (Devi Durga) ಒಂದೊಂದು ಪ್ರತಿರೂಪವಾಗಿದ್ದಾರೆ. 2 ವರ್ಷದ (2 Year) ಹೆಣ್ಣು ಮಗುವನ್ನು ಕೌಮಾರೀ ಎನ್ನಲಾಗಿದೆ. ಇವರ ಪೂಜೆ ಮಾಡುವುದರಿಂದ ದುಃಖ (Sad) ಹಾಗೂ ದಾರಿದ್ರ್ಯ (Poor) ನಾಶವಾಗುತ್ತದೆ. 3 ವರ್ಷದ ಹೆಣ್ಣುಮಕ್ಕಳನ್ನು ತ್ರಿಮೂರ್ತಿ ಎಂದು ಪರಿಗಣಿಸಲಾಗಿದೆ. ಇವರ ಪೂಜೆಯಿಂದ ಧನ-ಧಾನ್ಯದ ಆಗಮನ ಮತ್ತು ಕುಟುಂಬದ ಕಲ್ಯಾಣವಾಗುತ್ತದೆ. 4 ವರ್ಷದ (4 Year) ಕನ್ಯೆಯರನ್ನು ಕಲ್ಯಾಣೀ ಎನ್ನಲಾಗಿದ್ದು, ಇವರ ಪೂಜೆಯಿಂದ ಸುಖ-ಸಮೃದ್ಧಿ ದೊರೆಯುತ್ತದೆ. 5 ವರ್ಷದ ಹೆಣ್ಣುಮಗುವನ್ನು ರೋಹಿಣಿ ಎಂದು ಪರಿಗಣಿಸಲಾಗುತ್ತದೆ. ಇವರ ಪೂಜೆಯಿಂದ ರೋಗದಿಂದ (Illness) ಮುಕ್ತಿ ದೊರೆಯುತ್ತದೆ.
ದೇವಿಯ ಕನಸು ಬೀಳ್ತಾ? ಸದ್ಯದಲ್ಲೇ ಜೀವನದಲ್ಲಿ ಒಳ್ಳೇದಾಗ್ಬಹುದು, ಆದ್ರೂ ಎಚ್ಚರ!
ಹಾಗೆಯೇ, 6 ವರ್ಷದ ಹೆಣ್ಣುಮಕ್ಕಳನ್ನು ಕಾಳಿಕಾ (ಕರಣಿಕ) ಎಂದು ಭಾವಿಸಲಾಗಿದ್ದು, ಇವರ ಪೂಜೆಯಿಂದ ವಿದ್ಯೆ (Education) ಮತ್ತು ರಾಜಯೋಗ ಪ್ರಾಪ್ತಿಯಾಗುತ್ತದೆ. 7 ವರ್ಷದ ಹೆಣ್ಣುಮಕ್ಕಳನ್ನು ಚಂಡಿಕಾ ಎಂದು ಕರೆಯಲಾಗಿದ್ದು, ಇವರ ಪೂಜೆಯಿಂದ ಐಶ್ವರ್ಯ ಲಭಿಸುತ್ತದೆ. 8 ವರ್ಷದ ಹೆಣ್ಣುಮಕ್ಕಳನ್ನು ಶಾಂಭವಿ ಎಂದು ಹೇಳಲಾಗಿದ್ದು, ಇವರ ಪೂಜೆಯಿಂದ ಲೋಕಪ್ರಿಯತೆ ಸಿಗುತ್ತದೆ. 9 ವರ್ಷದ ಕನ್ಯೆಯರನ್ನು ದುರ್ಗಾ ಎಂದು ಪರಿಗಣಿಸಲಾಗಿದ್ದು, ಇವರ ಪೂಜೆಯಿಂದ ಶತ್ರುಗಳ (Enemy) ವಿರುದ್ಧ ಜಯ (Victory) ಹಾಗೂ ಅಸಾಧ್ಯವಾದ ಕಾರ್ಯ ಸಿದ್ಧಿ ದೊರೆಯುತ್ತದೆ. 10 ವರ್ಷದ ಕನ್ಯೆಯರನ್ನು ಸುಭದ್ರಾ ಎಂದು ಪರಿಗಣಿಸಲಾಗಿದ್ದು, ಇವರ ಪೂಜೆಯಿಂದ ಮನೋಕಾಮನೆಗಳು ಪೂರ್ಣಗೊಂಡು ಸುಖ ಲಭಿಸುತ್ತದೆ ಎಂದು ಹೇಳಲಾಗಿದೆ.