Asianet Suvarna News Asianet Suvarna News

Karthika Masa 2022: ದಿನಾಂಕ, ಪ್ರಾಮುಖ್ಯತೆ, ಈ ಮಾಸದ ಹಬ್ಬ ಹರಿದಿನಗಳು..

ಎಲ್ಲ ಮಾಸಗಳಲ್ಲಿ ಅತ್ಯಂತ ಮಂಗಳಕರ ಮಾಸ ಎನಿಸಿಕೊಂಡಿದೆ ಕಾರ್ತಿಕ ಮಾಸ. ಈ ಮಾಸವು ಭಗವಾನ್ ವಿಷ್ಣು ಹಾಗೂ ಶಿವ ಇಬ್ಬರಿಗೂ ಪ್ರಿಯವಾದ ತಿಂಗಳು, ಈ ಮಾಸದ ಮಹತ್ವ, ಈ ಮಾಸದಲ್ಲಿ ಬರುವ ಎಲ್ಲ ಪ್ರಮುಖ ಹಬ್ಬಹರಿದಿನಗಳ ಬಗ್ಗೆ ಇಲ್ಲಿ ವಿವರ ನೀಡಲಾಗಿದೆ..

Kannada Kartik Masa 2022 Calendar significance date skr
Author
First Published Oct 26, 2022, 12:59 PM IST

ಕಾರ್ತಿಕ ಮಾಸವು ಸಾಂಪ್ರದಾಯಿಕ ಹಿಂದೂ ಕನ್ನಡ ಕ್ಯಾಲೆಂಡರ್‌ನಲ್ಲಿ ಎಂಟನೇ ತಿಂಗಳಾಗಿದೆ. ಇದು ವಿಷ್ಣು ಮತ್ತು ಶಿವ ಇಬ್ಬರಿಗೂ ಅತ್ಯಂತ ಪ್ರಿಯವಾದ ತಿಂಗಳು. ಹಾಗಾಗಿ ಕಾರ್ತಿಕ ಮಾಸವು ಭಗವಾನ್ ವಿಷ್ಣು ಮತ್ತು ಭಗವಾನ್ ಶಿವನ ಭಕ್ತರಿಗೆ ಮಂಗಳಕರವಾಗಿದೆ. ಭಕ್ತರು ಈ ಮಾಸದುದ್ದಕ್ಕೂ ಶಿವ ಮತ್ತು ವಿಷ್ಣುವಿನ ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ವಿಶೇಷವಾಗಿ ಕಾರ್ತಿಕ ಸೋಮವಾರದ ದಿನಗಳಲ್ಲಿ ಉಪವಾಸ ಮತ್ತು ಕಾರ್ತಿಕ ಮಾಸ ವ್ರತವನ್ನು ಆಚರಿಸುತ್ತಾರೆ.

ಕಾರ್ತಿಕ ಮಾಸ 2022 (Karthika Masam 2022)
ಈ ವರ್ಷ ಗುಜರಾತಿ, ಮರಾಠಿ, ಕನ್ನಡ ಮತ್ತು ತೆಲುಗು ಮತ್ತು ಗೋವಾ ಕ್ಯಾಲೆಂಡರ್‌ಗಳ ಪ್ರಕಾರ ಕಾರ್ತಿಕ ಮಾಸವು ಅಕ್ಟೋಬರ್ 26ರಿಂದ ಆರಂಭವಾಗಿ ನವೆಂಬರ್ 23ರಂದು ಕೊನೆಗೊಳ್ಳುತ್ತದೆ. ಈ ರಾಜ್ಯಗಳಲ್ಲಿ ಅಮಾವಾಸ್ಯೆಯಿಂದ ಮಾಸಾರಂಭ ಲೆಕ್ಕ ಹಾಕಲಾಗುತ್ತದೆ. ಉಳಿದೆಡೆಯಲ್ಲಿ ಪೂರ್ಣಿಮೆಯಿಂದ ಮಾಸ ಆರಂಭವಾಗುತ್ತದೆ. 

ಕಾರ್ತಿಕ ಮಾಸವು ಎಲ್ಲಾ 12 ಹಿಂದೂ ತಿಂಗಳುಗಳಲ್ಲಿ ಅತ್ಯಂತ ಮಂಗಳಕರ ತಿಂಗಳು. ಇದನ್ನು ದಾಮೋದರ ಮಾಸ, ಕಾರ್ತಿಗೈ, ಕಾರ್ತಿಕ ಮುಂತಾದ ಹೆಸರುಗಳಿಂದ ಕರೆಯಲಾಗುತ್ತದೆ. ಕಾರ್ತಿಕ ಮಾಸದಲ್ಲಿ ರುದ್ರಾಭಿಷೇಕ, ರುದ್ರ ಹವನ, ಶಿವಪೂಜೆ, ಲಿಂಗಾರ್ಚನೆ, ಕೇದಾರೇಶ್ವರ ವ್ರತ ಪೂಜೆ ಮತ್ತು ಸತ್ಯನಾರಾಯಣ ವ್ರತ ಮಾಡಿಸುವುದು ಹೆಚ್ಚು ಶ್ರೇಯಸ್ಕರ, ಫಲಪ್ರದ ಎನ್ನಲಾಗುತದೆ. 

ಕಾರ್ತಿಕ ಮಾಸದಲ್ಲಿ ಈ ನಾಲ್ಕು ಕೆಲಸ ಮಾಡಲು ಮರೆಯಬೇಡಿ!

ಕಾರ್ತಿಕ ಮಾಸದ ಮಹತ್ವ(Significance)
ಚಂದ್ರನ ಪಂಚಾಂಗವನ್ನು ದಕ್ಷಿಣಾಯನ ಮತ್ತು ಉತ್ತರಾಯಣ ಎಂದು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಕಾರ್ತಿಕ ಮಾಸವು ದಕ್ಷಿಣಾಯನದ ಅಡಿಯಲ್ಲಿ ಬರುತ್ತದೆ. ಸಾಧನೆಯ ವಿಷಯದಲ್ಲಿ ದಕ್ಷಿಣಾಯನವು ಶುದ್ಧಿಗಾಗಿ, ಉತ್ತರಾಯಣವು ಜ್ಞಾನೋದಯಕ್ಕಾಗಿ. ಸಾಧನ ಎಂದರೆ ಮೋಕ್ಷವನ್ನು ಪಡೆಯುವ ಪ್ರಕ್ರಿಯೆ. ದಕ್ಷಿಣಾಯನದ ಎಲ್ಲ ಮಾಸಗಳಲ್ಲಿ ಕಾರ್ತಿಕ ಮಾಸವು ಸಾಧನಾಕ್ಕೆ ಸೂಕ್ತವಾಗಿರುತ್ತದೆ. ಆದ್ದರಿಂದ ಕಾರ್ತಿಕ ಮಾಸವು ಚಂದ್ರನ ಕ್ಯಾಲೆಂಡರ್‌ನ ಅತ್ಯಂತ ಮಂಗಳಕರ ತಿಂಗಳುಗಳಲ್ಲಿ ಒಂದಾಗಿದೆ.

ಪದ್ಮ ಪುರಾಣ ಮತ್ತು ಸ್ಕಂದ ಪುರಾಣದ ಪ್ರಕಾರ, ಕಾರ್ತಿಕ ಮಾಸವು ನಾಲ್ಕು ರೀತಿಯ ಪ್ರಯೋಜನಗಳನ್ನು ನೀಡುತ್ತದೆ - ಧಾರ್ಮಿಕ, ಆರ್ಥಿಕ, ಉತ್ತಮ ವೈವಾಹಿಕ ಜೀವನ ಮತ್ತು ಜ್ಞಾನೋದಯ. ಕಾರ್ತಿಕ ಮಾಸದ ಮಹತ್ವ ಮತ್ತು ಪ್ರಾಮುಖ್ಯತೆಯನ್ನು ಮೊದಲು ನಾರಾಯಣನು ಬ್ರಹ್ಮನಿಗೆ, ಬ್ರಹ್ಮನು ನಾರದನಿಗೆ ಮತ್ತು ನಾರದನು ರಾಜ ಪೃಥುವಿಗೆ ಮನುಕುಲದ ಕಲ್ಯಾಣಕ್ಕಾಗಿ ವಿವರಿಸುತ್ತಾನೆ.

ಕಾರ್ತಿಕ ಮಾಸದ ಪ್ರಮುಖ ಹಬ್ಬಹರಿದಿನಗಳು(Festivals and vrats)
26ನೇ ಅಕ್ಟೋಬರ್: ಚಂದ್ರ ದರ್ಶನಂ, ಗೋವರ್ಧನ ಪೂಜೆ, ಕಾರ್ತಿಕ ಮಾಸ ಆರಂಭ
27ನೇ ಅಕ್ಟೋಬರ್: ಯಮ ದ್ವಿತೀಯ, ಭಗಿನಿ ಹಸ್ತ ಭೋಜನಂ
28ನೇ ಅಕ್ಟೋಬರ್: ನಾಗುಲ ಚವಿತಿ, ಚತುರ್ಥಿ ವ್ರತ
30ನೇ ಅಕ್ಟೋಬರ್: ಸೂರ್ಯ ಷಷ್ಠಿ, ಸ್ಕಂದ ಷಷ್ಠಿ
31ನೇ ಅಕ್ಟೋಬರ್: ಕಾರ್ತಿಕ ಸೋಮವಾರ ವ್ರತ
ನವೆಂಬರ್ 1: ಗೋಪಾಷ್ಟಮಿ, ದುರ್ಗಾಷ್ಟಮಿ ವ್ರತ, ತಿರುಮಲದಲ್ಲಿ ಪುಷ್ಪಯಾಗ ಮಹೋತ್ಸವ
ನವೆಂಬರ್ 2: ಅಕ್ಷಯ ನವಮಿ
ನವೆಂಬರ್ 4: ಕಾರ್ತಿಕ ಏಕಾದಶಿ, ಉತ್ಥಾನ ಏಕಾದಶಿ, ಪ್ರಬೋಧಿನಿ ಏಕಾದಶಿ, ಚಾತುರ್ಮಾಸ್ಯ ವ್ರತ ಸಮಾಪ್ತಿ
ನವೆಂಬರ್ 5: ಕ್ಷೀರಬ್ಧಿ ದ್ವಾದಶಿ, ಕೈಶಿಕ ದ್ವಾದಶಿ, ಸನಿತ್ರಯೋದಶಿ, ಪ್ರದೋಷ ವ್ರತಂ, ತುಳಸಿ ವಿವಾಹ
ನವೆಂಬರ್ 6: ವಿಶ್ವೇಶ್ವರ ವ್ರತ, ವೈಕುಂಠ ಚತುರ್ದಶಿ
ನವೆಂಬರ್ 7: ವಿಶಾಖ ಕರ್ತೆ, ಜ್ವಾಲಾತೋರಣಂ
ನವೆಂಬರ್ 8: ಕಾರ್ತಿಕ ಪೌರ್ಣಮಿ, ಶ್ರೀ ಸತ್ಯನಾರಾಯಣ ಪೂಜೆ , ಉಮಾ ಮಹೇಶ್ವರ ವ್ರತ , ಪೌರ್ಣಮಿ ವ್ರತಂ , ಪೌರ್ಣಮಿ
ನವೆಂಬರ್ 11: ಸೌಭಾಗ್ಯ ಸುಂದರಿ ತೀಜ್
ನವೆಂಬರ್ 12: ಸಂಕಷ್ಟಹರ ಚತುರ್ಥಿ
ನವೆಂಬರ್ 16: ಕಲಷ್ಟಮಿ, ಬುದ್ಧ ಅಷ್ಟಮಿ ವ್ರತ, ವೃಶ್ಚಿಕ ಸಂಕ್ರಮಣಂ
ನವೆಂಬರ್ 17: ಶಬರಿಮಲೆ ಮಂಡಲ ಕಲಾಂ ಪ್ರಾರಂಭ
ನವೆಂಬರ್ 20: ಅನುರಾಧಾ ಕರ್ತೆ, ಉತ್ಥಾನ ಏಕಾದಶಿ
ನವೆಂಬರ್ 21: ಸೋಮ ಪ್ರದೋಷ ವ್ರತ
ನವೆಂಬರ್ 22: ಮಾಸ ಶಿವರಾತ್ರಿ
ನವೆಂಬರ್ 23: ಅಮವಾಸ್ಯೆ, ಕಾರ್ತಿಕ ಮಾಸ ಮುಕ್ತಾಯ

Bhai Dooj 2022: ಅ.27 ಅಣ್ಣನ ಆಯಸ್ಸು ಹೆಚ್ಚಿಸೋ ಯಮದ್ವಿತೀಯ, ಆಚರಣೆ ಹೇಗೆ?

ಕಾರ್ತಿಕ ಸೋಮವಾರದ ದಿನಾಂಕಗಳು(Karthik Monday)
ಕಾರ್ತಿಕ ಮಾಸದಲ್ಲಿ ಸೋಮವಾರದಂದು ವಿಶೇಷ ಆಚರಣೆಗಳು ಮತ್ತು ಉಪವಾಸವನ್ನು ಆಚರಿಸಲಾಗುತ್ತದೆ. ದಕ್ಷನ ಶಾಪದಿಂದ ಪಾರಾಗಲು ಮತ್ತು ಭಗವಾನ್ ಶಿವನಿಂದ ಆಶೀರ್ವಾದ ಮತ್ತು ಅವನ ಜಡೆಯಲ್ಲಿ ಸ್ಥಾನ ಪಡೆಯಲು ಚಂದ್ರನು ಸೋಮವಾರ ವ್ರತವನ್ನು ಆಚರಿಸುತ್ತಾನೆ ಎಂದು ನಂಬಲಾಗಿದೆ. ಸೋಮವಾರಗಳು ಸಾಮಾನ್ಯವಾಗಿ ಶಿವನ ಆರಾಧನೆಗೆ ಮೀಸಲಾಗಿವೆ.
ಅಕ್ಟೋಬರ್ 31 
ನವೆಂಬರ್ 7
ನವೆಂಬರ್ 14 
ನವೆಂಬರ್ 21

ಶಿವ ಪ್ರದೋಷಂ ಉಪವಾಸದ ದಿನಾಂಕಗಳು
ಪ್ರದೋಷ - ನವೆಂಬರ್ 5
ಪ್ರದೋಷ - ನವೆಂಬರ್ 21

ಕಾರ್ತಿಕ ಮಾಸದಲ್ಲಿ ಆಚರಣೆಗಳು
ಕಾರ್ತಿಕ ಮಾಸದಲ್ಲಿ ದೀಪಗಳನ್ನು ಬೆಳಗಿಸಿ ತುಳಸಿ ಗಿಡದ ಮುಂದೆ ಮತ್ತು ಮನೆಯ ಮುಖ್ಯ ದ್ವಾರದ ಬಳಿ ಸೂರ್ಯೋದಯಕ್ಕೆ ಮೊದಲು ಮತ್ತು ಸೂರ್ಯಾಸ್ತದ ಮೊದಲು ಇಡಲಾಗುತ್ತದೆ.

ಕುಟುಂಬವೇ ಶಕ್ತಿ ಎಂದು ನಂಬುವ ರಾಶಿಗಳಿವು!

ಏಕಾದಶಿ ಉಪವಾಸದ ದಿನಾಂಕಗಳು
ಪ್ರಬೋಧಿನಿ ಏಕಾದಶಿ - ನವೆಂಬರ್ 4 
ಉತ್ಪತ್ತಿ ಏಕಾದಶಿ - ನವೆಂಬರ್ 20
 

Follow Us:
Download App:
  • android
  • ios