Asianet Suvarna News Asianet Suvarna News

ಅನಂತ ಚತುರ್ದಶಿ ಮಾಡ್ತಿದ್ದೀರಾ? ಈ ಹಬ್ಬದ ಹಿನ್ನಲೆ ತಿಳಿಯಿರಿ!

ಗಣೇಶ ಚತುರ್ಥಿಯ ಕೊನೆಯ ದಿನ ಹಾಗೂ ವಿಷ್ಣುವಿನ ಆರಾಧನೆ ಮಾಡುವ ಅನಂತ ಚತುರ್ಧಶಿ ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಕಾಣಿಸಿಕೊಳ್ಳುವ ಹಬ್ಬವಾಗಿದೆ. ಜೈನರು ಈ ಹಬ್ಬವನ್ನು ಅನಂತ್ ಚೌದಾಸ್ ಎಂದು ಕರೆಯುತ್ತಾರೆ. ಈ ಬಾರಿ 2022 ಸೆಪ್ಟೆಂಬರ್ 9ರಂದು ಅನಂತ ಚತುರ್ದಶಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ಅನಂತ ಚತುರ್ದಶಿಯ ವಿಶೇಷತೆ, ಇತಿಹಾಸ ಹಾಗೂ ಆಚರಿಸುವ ವಿಧಾನದ ಕುರಿತು ಇಲ್ಲಿದೆ ಮಾಹಿತಿ.

Anantha Chathurthi Festival History Significance Method
Author
First Published Sep 7, 2022, 5:43 PM IST

ಭಾದ್ರಪದ ಮಾಸವು ಒಟ್ಟು ಹದಿನೈದು ದಿನಗಳನ್ನು ಹೊಂದಿದ್ದು, 14ನೇ ದಿನಕ್ಕೆ ಈ ಅನಂತ ಚತುರ್ದಶಿ ಹಬ್ಬವು ಬರುತ್ತದೆ. ಈ ದಿನದಂದು ಗಣೇಶನನ್ನು ವಿಸರ್ಜಿಸಲಾಗುತ್ತದೆ. ಈ ಬಾರಿ 2022 ಸೆಪ್ಟೆಂಬರ್ 9ರಂದು ಅನಂತ ಚತುರ್ದಶಿ ಹಬ್ಬವನ್ನು ಆಚರಿಸಲಾಗುತ್ತದೆ. ಜೈನರ 12ನೇ ತೀರ್ಥಂಕರರಾದ ಭಗವಾನ್ ವಾಸುಪೂಜ್ಯರು ನಿರ್ವಾಣ ಹೊಂದಿದ ದಿನ ಇದಾಗಿದ್ದು, ಜೈನರಿಗೆ ಇದು ದೊಡ್ಡ ಹಬ್ಬವೂ ಹೌದು. 
ಹಿಂದೂ ಸಂಪ್ರದಾಯದಲ್ಲಿ ಅನಂತ ಚತುರ್ದಶಿಯ ದಿನದಂದು ಮಹಿಳೆಯರು ತಮ್ಮ ಕುಟುಂಬದ ಯೋಗಕ್ಷೇಮಕ್ಕಾಗಿ ಉಪವಾಸ ಮಾಡುತ್ತಾರೆ. ಪುರುಷರು ಮುಂಬರುವ ಹದಿನಾಲ್ಕು ವರ್ಷಗಳ ಕಾಲ ವಿಷ್ಣುವಿನ ಆಶೀರ್ವಾದ ಪಡೆಯಲು ಉಪವಾಸ ಆಚರಿಸುತ್ತಾರೆ. ಈ ಹಬ್ಬವು ಹಿಂದೂ ಹಾಗೂ ಜೈನ ಸಮುದಾಯದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ.

ಅನಂತ ಚತುರ್ದಶಿಯು ವಿಷ್ಣುವನ್ನು ತನ್ನ ಅನಂತ ಅವತಾರದಲ್ಲಿ ಪೂಜಿಸುವ ಅತ್ಯಂತ ಗಮನಾರ್ಹ ದಿನವಾಗಿದೆ. ಈ ದಿನದಂದು, ವಿಷ್ಣುವಿನ ಭಕ್ತರು ದಿನವಿಡೀ ಉಪವಾಸ ಆಚರಿಸಿ, ವಿವಿಧ ಪೂಜೆಗಳನ್ನು ಮಾಡುತ್ತಾರೆ. ಪೂಜಾ ನಂತರ ತಮ್ಮ ಮಣಿಕಟ್ಟಿನ ಮೇಲೆ ಪವಿತ್ರ ದಾರವನ್ನು ಕಟ್ಟುತ್ತಾರೆ. ಹಿಂದೂ ಹಬ್ಬವಾದ ಗಣೇಶೋತ್ಸವದ ಕೊನೆಯ ದಿನವೂ ಇದಾಗಿದ್ದು, ಜನರು ಗಣೇಶನನ್ನು, ದೊಡ್ಡ ಮೆರವಣಿಗೆ ಮಾಡುತ್ತಾ, ಕುಣಿಯುತ್ತಾ, ವಿಜೃಂಬಣೆಯಿAದ ಕಳಿಸಿಕೊಡುತ್ತಾರೆ. ಈ ಹಬ್ಬವನ್ನು ಭಾರತದಲ್ಲಿ ವಿಶೇಷವಾಗಿ ಮಹಾರಾಷ್ಟ, ಗುಜರಾತ್, ಕರ್ನಾಟಕ, ಆಂಧ್ರ ಪ್ರದೇಶ ಮತ್ತು ಬಿಹಾರ ರಾಜ್ಯಗಳಲ್ಲಿ ಆಚರಿಸುವುದನ್ನು ಕಾಣಬಹುದು.

Astrology Tips: ಹನುಮಂತನ ಪೂಜೆಯಲ್ಲಿ ಈ ತಪ್ಪು ಮಾಡಿದ್ರೆ ಕಷ್ಟ ಫೇಸ್ ಮಾಡಬೇಕಾಗುತ್ತೆ!

ಅನಂತ ಚತುರ್ದಶಿಯ ಮಹತ್ವ (Significance)
ವಿಷ್ಣುವಿನ ಇನ್ನೊಂದು ಹೆಸರು ಅನಂತ ಎಂದೂ ಕರೆಯಲಾಗುತ್ತದೆ. ಚತುರ್ದಶಿ ಎಂದರೆ 14 ಎಂದರ್ಥ. ಇದು ಸಂಪೂರ್ಣವಾಗಿ ವಿಷು ದೇವರಿಗೆ ಸಮರ್ಪಿತವಾಗಿದ್ದು, ಜನರು ವಿವಿಧ ರೀತಿಯ ಪೂಜೆ ಸಲ್ಲಿಸಿ ದೇವರ ಆಶೀರ್ವಾದ ಪಡೆಯುತ್ತಾರೆ. ಭಕ್ತರು ಕಟ್ಟುನಿಟ್ಟಾದ ಉಪವಾಸ ಆಚರಿಸಿ, "ಅನಂತ ಸೂತ್ರ" ಎಂದು ಕರೆಯಲ್ಪಡುವ ಹದಿನಾಲ್ಕು ಗಂಟುಗಳನ್ನು ಹೊಂದಿರುವ ಕುಂಕುಮ ಬಣ್ಣದ ದಾರವನ್ನು ತಮ್ಮ ಮಣಿಕಟ್ಟಿನ ಮೇಲೆ ಕಟ್ಟಿಕೊಳ್ಳುತ್ತಾರೆ.

ಜೈನ ಧರ್ಮ (Jain Religion)
ಜೈನರಿಗೆ ಇದು ಪ್ರಮುಖ ಹಬ್ಬವಾಗಿದೆ. ಜೈನ ಸಮುದಾಯದಲ್ಲಿ ಅತ್ಯುನ್ನತ ಸ್ಥಾನ ಹೊಂದಿರುವ ದಿಗಂಬರ ಜೈನರು ಭಾಡೋ ಮಾಸದ ಕೊನೆಯ 8 ದಿನಗಳಲ್ಲಿ ಪರ್ಯೂಷನ ಪರ್ವವನ್ನು ಆಚರಿಸುತ್ತಾರೆ. ಆದರೆ, ಪರ್ಯುಷಣದ ಕೊನೆಯ ದಿನ ಅನಂತ ಚತುರ್ಥಿಯನ್ನು ಆಚರಿಸಲಾಗುತ್ತದೆ. ಈ ದಿನವು ದೀರ್ಘ 14 ದಿನಗಳ ಉಪವಾಸದ ಅಂತ್ಯವನ್ನು ಸೂಚಿಸುತ್ತದೆ ಮತ್ತು ವಿವಿಧ ಪೂಜೆಗಳು ಮತ್ತು ಆಚರಣೆಗಳೊಂದಿಗೆ ಸ್ವಾಗತಿಸಲಾಗುತ್ತದೆ. ಜೈನರಿಗೆ ಈ ಹಬ್ಬದ ನಂತರ ದೀಪಾವಳಿ ಎರಡನೇ ಅತಿ ದೊಡ್ಡ ಹಬ್ಬವಾಗಿದೆ. 

195 ವರ್ಷಗಳ ಇತಿಹಾಸ ಹೊಂದಿರುವ ಛಬ್ಬಿ ಗಣಪ! ಸಂತಾನದಾತ ಈ ವಿನಾಯಕ

ಅನಂತ ಚತುರ್ಥಿ ಮಹತ್ವ: 
1. ಇದು ಗಣಪತಿ ವಿಸರ್ಜನೆ ಮಾಡುವ ಮೂಲಕ ಗಣಪತಿ ಹಬ್ಬದ ಅಂತ್ಯ ಎಂದು ಸೂಚಿಸುತ್ತದೆ. ಜನರು ಗಣಪತಿಯ ಮೂರ್ತಿ ನೀರಿನಲ್ಲಿ ಮುಳುಗಿಸಲು ದೊಡ್ಡ ಮೆರವಣಿಗೆಗಳಲ್ಲಿ ಸರೋವರಗಳು ಅಥವಾ ಸಮುದ್ರಕ್ಕೆ ತೆಗೆದುಕೊಂಡು ಹೋಗುತ್ತಾರೆ. 
2. ಈ ದಿನ, ಜನರು ಸಾಮಾನ್ಯವಾಗಿ ಅನಂತ ಎಂದೂ ಕರೆಯಲ್ಪಡುವ ವಿಷ್ಣುವಿನ ಕಥೆಗಳನ್ನು ಪಠಿಸುತ್ತಾರೆ ಮತ್ತು ಕೇಳುತ್ತಾರೆ. ವೇದಗಳ ಪಠಣವನ್ನು "ಅನಂತ ವ್ರತ" ಎಂದೂ ಕರೆಯುತ್ತಾರೆ.

ಅನಂತ ಚತುರ್ದಶಿಯ ಇತಿಹಾಸ (History)
ಹಿಂದೂ ಪುರಾಣಗಳ ಪ್ರಕಾರ, ಅಣಮತ ಚತುರ್ದಶಿಯು ಮಹಾಭಾರತಕ್ಕಿಂತಲೂ ಪುರಾತನವೆಂದು ನಂಬಲಾಗಿದೆ. ಕೌರವರು ಪಾಂಡವರನ್ನು ಮೋಸಗೊಳಿಸುವ ಕ್ರಿಯೆಯೊಂದಿಗೆ ಜೂಜಿನ ಆಟದಲ್ಲಿ ಸೋಲಿಸಿದಾಗ ಇದು ಪ್ರಾರಂಭವಾಯಿತು. ನಿಯಮಗಳ ಪ್ರಕಾರ, ಪಾಂಡವರು ತಮ್ಮ ಸಂಪತ್ತು, ಆಸ್ತಿ, ಐಷಾರಾಮಿ ಎಲ್ಲವನ್ನೂ ತ್ಯಾಗ ಮಾಡಬೇಕು ಮತ್ತು ದೇಶ ಬಿಟ್ಟು ದೂರ ವನವಾಸಕ್ಕೆ ಹೋಗಬೇಕು. ಈ ಸಮಯದಲ್ಲಿ, ಪಾಂಡವರು ಬಹಳಷ್ಟು ತೊಂದರೆಗಳನ್ನು ಎದುರಿಸಿದರು ಮತ್ತು ನೋವು ಮತ್ತು ಹೋರಾಟದ ಅತ್ಯಂತ ಕಠಿಣ ಅವಧಿಯನ್ನು ಅನುಭವಿಸಿದರು.

ಒಂದು ದಿನ, ಶ್ರೀಕೃಷ್ಣನು ಒಂದು ಮಿತಿಯವರೆಗೆ ಪಾಂಡವರ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ ಕಾಡಿನಲ್ಲಿ ಭೇಟಿಯಾಗಲು ಹೋದನು. ಪಾಂಡವರು ಶ್ರೀಕೃಷ್ಣನನ್ನು ಸರಿಯಾದ ಗೌರವ ಮತ್ತು ಘನತೆಯಿಂದ ಸ್ವಾಗತಿಸಿದರು. ಅದರ ನಂತರ, ಹಿರಿಯ ಪಾಂಡವ ಯುಧಿಷ್ಠಿರನು ತನ್ನ ಕಳೆದುಹೋದ ರಾಜ್ಯವನ್ನು ಮರಳಿ ಪಡೆಯಲು ಮತ್ತು ತನ್ನ ಭೂಮಿಗೆ ಮರಳಲು ಕೆಲವು ಉಪಾಯವನ್ನು ಸೂಚಿಸಲು ಶ್ರೀ ಕೃಷ್ಣನನ್ನು ಕೇಳುತ್ತಾನೆ.
ಸಮಸ್ಯೆ ಕೇಳಿದ ಶ್ರೀಕೃಷ್ಣನು ಅವನಿಗೆ ಪರಿಹಾರವನ್ನು ಸೂಚಿಸುತ್ತಾನೆ. ಈ ಪರಿಹಾರವನ್ನು ಸರಿಯಾಗಿ ಅನುಸರಿಸಿದ್ದೇ ಆದಲ್ಲಿ ರಾಜ್ಯವನ್ನು ಮರಳಿ ಪಡೆಯಬಹುದು ಎಂದು ಭರವಸೆ ನೀಡಿದನು. ಪರಿಹಾರವೇನೆಂದರೆ ಅನಂತ ಚತುರ್ದಶಿಯ ಉಪವಾಸದಲ್ಲಿ ಯುಧಿಷ್ಠಿರನು ತನ್ನ ಹೆಂಡತಿ ಮತ್ತು ಸಹೋದರರೊಂದಿಗೆ ಸತತ 14 ದಿನಗಳ ಕಾಲ ಉಪವಾಸ ಮಾಡಿ ವಿಷ್ಣುವಿಗೆ ನಮನ ಸಲ್ಲಿಸಬೇಕು ಎಂದು.
ಇದನ್ನು ಕೇಳಿದ ಯುಧಿಷ್ಠಿರನು ಕೃಷ್ಣನಿಗೆ ಅನಂತ ಯಾರು? ಅನಂತರ ವಿಷ್ಣುವಿನ ಇನ್ನೊಂದು ಅವತಾರವೆಂಬುದನ್ನು ಶ್ರೀಕೃಷ್ಣನು ಅವನಿಗೆ ವಿವರಿಸಿದನು. ಇದಲ್ಲದೆ, ಸತತ 14 ದಿನಗಳ ಕಾಲ ಏನನ್ನೂ ತಿನ್ನದೆ ಅಥವಾ ಏನನ್ನೂ ಕುಡಿಯದೆ ಅವನನ್ನು ಪೂಜಿಸುವುದರಿಂದ ನಿಮ್ಮ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುತ್ತದೆ ಮತ್ತು ನೀವು ಕಳೆದುಕೊಂಡ ಗೌರವ ಮತ್ತು ರಾಜ್ಯವನ್ನು ಮರಳಿ ಪಡೆಯುತ್ತೀರಿ ಎಂದು ಕೃಷ್ಣನು ಅವನಿಗೆ ಹೇಳಿದನು. ಯುಧಿಷ್ಠಿರನು ತನ್ನ ಕುಟುಂಬದೊAದಿಗೆ 14 ದಿನಗಳ ಕಾಲ ಯಶಸ್ವಿಯಾಗಿ ಉಪವಾಸವನ್ನು ಆಚರಿಸಿದನು ತನ್ನ ರಾಜ್ಯವನ್ನು ಮರಳಿ ಪಡೆದರು. ಅಂದಿನಿAದ, ಅನಂತ ಚತುರ್ದಶಿಯನ್ನು ಪವಿತ್ರ ಹಬ್ಬವಾಗಿ ಆಚರಿಸಲಾಗುತ್ತದೆ.  

Garuda Purana: ಪ್ರತಿ ದಿನ ಈ ಕೆಲಸ ಮಾಡಿದ್ರೆ ಯಶಸ್ಸು ಕಟ್ಟಿಟ್ಟ ಬುತ್ತಿ

ಅನಂತ ಚತುರ್ದಶಿ ವಿಧಿವಿಧಾನ
ಈ ದಿನವು ವಿಷ್ಣುವಿನ ಆರಾಧನೆಗೆ ಸಂಪೂರ್ಣವಾಗಿ ಮೀಸಲಾಗಿರುವುದರಿಂದ, ಜನರು ಹಬ್ಬಕ್ಕೆ ಸಂಬಂಧಿಸಿದ ವಿವಿಧ ಪದ್ಧತಿಗಳು ಮತ್ತು ಆಚರಣೆಗಳನ್ನು ಮಾಡುತ್ತಾರೆ. ಪೂಜೆಯನ್ನು ಸಾಮಾನ್ಯವಾಗಿ ಹಗಲಿನಲ್ಲಿ ಮಾಡಲಾಗುತ್ತದೆ. ಈ ಬಾರಿ 2022 ಸೆಪ್ಟೆಂಬರ್ 9ರಂದು ಅನಂತ ಚತುರ್ದಶಿ ಹಬ್ಬವನ್ನು ಆಚರಿಸಲಾಗುತ್ತದೆ.
1. ಬೆಳಗ್ಗೆ ಸ್ನಾನ ಮಾಡಿ ನಂತರ ಪೂಜೆಯ ಬಲಿಪೀಠದ ಮೇಲೆ ಕಲಶವನ್ನು ಇಡುತ್ತಾರೆ.
2. 14 ಪುವಾಸ್ (ಡೀಪ್ ಫ್ರೈ ಮಾಡಿದ ಸಿಹಿ ಗೋಧಿ ಬ್ರೆಡ್) ಮತ್ತು ಹದಿನಾಲ್ಕು ಪೂರಿಗಳನ್ನು (ಡೀಪ್ ಫ್ರೈ ಮಾಡಿದ ಗೋಧಿ ಬ್ರೆಡ್) ವಿವಿಧ ತಿಲಕಗಳ ಮೇಲೆ ತಯಾರಿಸಲಾಗುತ್ತದೆ.
3. ಹಲಗೆ ಮೇಲೆ ಪಂಚಾಮೃತವನ್ನು ಇಡುತ್ತಾರೆ.
4. ಸಿಂಧೂರ, ಕುಂಕುಮ ಮತ್ತು ಅರಿಶಿನದಲ್ಲಿ ಅದ್ದಿ ದಾರವನ್ನು ತಯಾರಿಸುವುದು. ದಾರವು 14 ಗಂಟುಗಳನ್ನು ಹೊಂದಿರಬೇಕು ಮತ್ತು ನಂತರ ಈ ದಾರವನ್ನು ವಿಷ್ಣುವಿನ ವಿಗ್ರಹದ ಮುಂದೆ ಇಡಬೇಕು.
5. ದಾರವನ್ನು ಪೂಜಿಸಿದ ನಂತರ ಮತ್ತು ವಿವಿಧ ಮಂತ್ರಗಳನ್ನು ಪಠಿಸಿದ ನಂತರ, ದಾರವನ್ನು ತಮ್ಮ ಮಣಿಕಟ್ಟಿಗೆ ಬಿಗಿಯಾಗಿ ಕಟ್ಟಿಕೊಳ್ಳುತ್ತಾರೆ.
6. ಪುರುಷರು ಸಾಮಾನ್ಯವಾಗಿ ಎಡಗೈಗೆ ಮತ್ತು ಮಹಿಳೆಯರು ಬಲಗೈಗೆ ಈ ದಾರವನ್ನು ಕಟ್ಟಿಕೊಳ್ಳುತ್ತಾರೆ.
7. 14 ದಿನಗಳ ನಂತರ, ಪವಿತ್ರ ದಾರವನ್ನು ತೆಗೆದುಹಾಕಲಾಗುತ್ತದೆ.

Follow Us:
Download App:
  • android
  • ios