Fashion Wear : ಸ್ಟ್ರಾಪ್ ಲೆಸ್ ಬ್ರಾ ಖರೀದಿಗೆ ಮುನ್ನ ಇದನ್ನೋದಿ
Fashion news in Kannada: ಫ್ಯಾಷನ್ ಮಾಡ್ಬೇಕೆಂದು ಎಲ್ಲ ಮಹಿಳೆಯರೂ ಬಯಸ್ತಾರೆ. ಡ್ರೆಸ್ ಖರೀದಿ ಕೂಡ ಆಗಿರುತ್ತದೆ. ಆದ್ರೆ ಸರಿಯಾದ ಬ್ರಾ ಧರಿಸದ ಕಾರಣ ಡ್ರೆಸ್ ಅಸಹ್ಯವಾಗಿ ಕಾಣುತ್ತದೆ. ಯಾವುದೇ ಡ್ರೆಸ್ ಒಳಗೆ ಬ್ರಾ ಧರಿಸುವ ಮೊದಲು ಅದ್ರ ಬಗ್ಗೆ ಸರಿಯಾಗಿ ತಿಳಿದಿರಬೇಕು.
ಈ ದಿನಗಳಲ್ಲಿ ಆಫ್ ಶೋಲ್ಡರ್ ಟಾಪ್ಸ್ ಮತ್ತು ಡ್ರೆಸ್ (Dress) ಗಳು ಫ್ಯಾಷನ್ (Fashion) ನಲ್ಲಿವೆ. ಆದರೆ ಹೆಚ್ಚಿನ ಮಹಿಳೆಯರು ಈ ಡ್ರೆಸ್ ಕೆಳಗೆ ಬ್ರಾ (bra) ಧರಿಸಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ಆಫ್ ಶೋಲ್ಡರ್ ಟಾಪ್ಸ್ ಮತ್ತು ಡ್ರೆಸ್‌ಗಳನ್ನು ಧರಿಸುವುದಿಲ್ಲ. ವಾಸ್ತವವಾಗಿ, ಸಾಮಾನ್ಯ ಬ್ರಾ, ಟ್ಯೂಬ್ ಟಾಪ್ ಮತ್ತು ಆಫ್ ಶೋಲ್ಡರ್ ಡ್ರೆಸ್‌ನಲ್ಲಿ ಗೋಚರಿಸುತ್ತದೆ. ಇದರಿಂದ ಮಹಿಳೆಯರು ಕಿರಿಕಿರಿ ಅನುಭವಿಸುವುದು ಮಾತ್ರವಲ್ಲ ಈ ಡ್ರೆಸ್ ನಲ್ಲಿ ಅವರ ನೋಟವೂ ಕೆಟ್ಟದಾಗಿ ಕಾಣುತ್ತದೆ. ಈ ಡ್ರೆಸ್ ಧರಿಸಬೇಕು ಎನ್ನುವವರು ಒಳಗೆ ಧರಿಸಿರುವ ಬ್ರಾ ಕಾಣಿಸಿದಂತೆ ಎಚ್ಚರಿಕೆ ವಹಿಸಬೇಕು. ಅದಕ್ಕಾಗಿ ಮಹಿಳೆಯರು ಸಾಮಾನ್ಯ ಬ್ರಾಗಿಂತ ಸ್ಟ್ರಾಪ್‌ಲೆಸ್ ಬ್ರಾ ಧರಿಸಬಹುದು. ಇನ್ನೂ ಅನೇಕ ಮಹಿಳೆಯರಿಗೆ ಸ್ಟ್ರಾಪ್‌ಲೆಸ್ ಬ್ರಾಗಳ ಬಗ್ಗೆ ಹೆಚ್ಚು ತಿಳಿದಿಲ್ಲ. ಕೆಲವು ಮಹಿಳೆಯರು ಸ್ಟ್ರಾಪ್‌ಲೆಸ್ ಬ್ರಾಗಳ ಬಗ್ಗೆ ಅನೇಕ ಪ್ರಶ್ನೆಗಳನ್ನು ಮತ್ತು ತಪ್ಪು ಕಲ್ಪನೆಗಳನ್ನು ಹೊಂದಿದ್ದಾರೆ. ಸ್ಟ್ರಾಪ್‌ಲೆಸ್ ಬ್ರಾ ಧರಿಸಲು ಬಯಸಿದರೆ, ಸ್ಟ್ರಾಪ್‌ಲೆಸ್ ಬ್ರಾವನ್ನು ಸರಿಯಾಗಿ ಧರಿಸಲು ಯಾವ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು ಎಂಬುದನ್ನು ಮೊದಲು ತಿಳಿಯಿರಿ.
ಸ್ಟ್ರಾಪ್‌ಲೆಸ್ ಬ್ರಾ ಎಂದರೇನು? : ಸ್ಟ್ರಾಪ್ ಲೆಸ್ ಬ್ರಾಗಳು ಧರಿಸಲು ಸುಲಭ. ಅದರ ಹೆಸರಿನಂತೆಯೇ, ಈ ಬ್ರಾ ವಿನ್ಯಾಸವು ಪಟ್ಟಿಯನ್ನು ಹೊಂದಿರುವುದಿಲ್ಲ. ಬ್ರಾಗೆ ಪಟ್ಟಿಯಿರದ ಕಾರಣ ಅನೇಕ ಮಹಿಳೆಯರು ಇದನ್ನು ಧರಿಸಲು ಹೆದರುತ್ತಾರೆ. ಬ್ರಾ ಕಳಚಿ ಬಿದ್ದರೆ, ಲೂಸ್ ಆದ್ರೆ ಎಂಬ ಭಯವಿರುತ್ತದೆ. ಸ್ಟ್ರಾಪ್‌ಲೆಸ್ ಬ್ರಾ ಧರಿಸುವ ವಿಧಾನ ತಿಳಿದಿದ್ದರೆ ಈ ಸಮಸ್ಯೆ ಆಗುವುದಿಲ್ಲ. ಮೊದಲು ಸ್ಟ್ರಾಪ್ ಲೆಸ್ ಬ್ರಾ ಧರಿಸುವುದು ಹೇಗೆ ಎಂಬುದು ತಿಳಿದಿರಬೇಕು. ಎಲ್ಲ ರೀತಿಯ ಬ್ರಾನಲ್ಲಿಯೂ ಬ್ಯಾಂಡ್ ಇರುತ್ತದೆ. ಬ್ಯಾಂಡ್, ಬ್ರೆಸ್ಟ್ ಎತ್ತಿ ಹಿಡಿದಿರುತ್ತದೆ. ಆದ್ರೆ ಸ್ಟ್ರಾಪ್ ಬ್ರಾ ಬರೀ ನಿಮ್ಮ ಬ್ರೆಸ್ಟ್ ಮೇಲಿರುತ್ತದೆ.
ಸ್ಟ್ರಾಪ್‌ಲೆಸ್ ಬ್ರಾ ಧರಿಸುವಾಗ ವಹಿಸಬೇಕಾದ ಮುನ್ನೆಚ್ಚರಿಕೆಗಳು :
ಬ್ರಾ ಸಡಿಲವಾಗಿರಬಾರದು : ನೀವು ಸ್ಟ್ರಾಪ್‌ಲೆಸ್ ಬ್ರಾವನ್ನು ಖರೀದಿಸುತ್ತಿದ್ದರೆ, ನಿಮ್ಮ ಬ್ರೆಸ್ಟ್ ಗಾತ್ರಕ್ಕಿಂತ ಚಿಕ್ಕದಾದ ಬ್ಯಾಂಡ್ ಖರೀದಿಸಬೇಕು ಎಂಬುದನ್ನು ನೆನಪಿನಲ್ಲಿಡಿ. ಬ್ಯಾಂಡ್ ಲೂಸ್ ಆಗಿದ್ದರೆ ಬ್ರಾ ಜಾರಿ ಬೀಳುವ ಸಾಧ್ಯತೆ ಇದೆ. ಅಂತಹ ಪರಿಸ್ಥಿತಿಯಲ್ಲಿ, ಸ್ಟ್ರಾಪ್‌ಲೆಸ್ ಬ್ರಾ ನಿಮ್ಮ ಬ್ರೆಸ್ಟ್ ಗೆ ಬಿಗಿಯಾಗಿರಬೇಕು. ಬಿಗಿಯಾಗಿರಬೇಕು ಎನ್ನುವ ಕಾರಣಕ್ಕೆ ಅತಿಯಾದ ಬಿಗಿ ಬ್ರಾ ಧರಿಸಬೇಡಿ.
ಸಣ್ಣ ಬ್ಯಾಂಡ್ ಇರಲಿ : ಬ್ರೆಸ್ಟ್ ದೊಡ್ಡದಾಗಿದ್ದರೆ ಬ್ಯಾಂಡ್ ಕೂಡ ಅಗಲವಾಗಿರಬೇಕು. ಹಾಗೆ ಒಳ್ಳೆ ಗುಣಮಟ್ಟದ ಬ್ರಾ ಖರೀದಿ ಮಾಡಿ. ಇದು ನಿಮ್ಮ ದೇಹಕ್ಕೆ ಸರಿಯಾಗಿ ಫಿಟ್ ಆಗುತ್ತದೆ.
ನೀತಾ ಅಂಬಾನಿ ಬಳಸ್ತಿರೋ ಮೊಬೈಲ್ ಬೆಲೆ ಎಷ್ಟು ಗೊತ್ತಾ ? ಮುನ್ನೂರು ಮಂದಿಗೆ ಐಷಾರಾಮಿ ಬಂಗಲೆಯನ್ನೇ ಖರೀದಿಸಬಹುದು !
ಬ್ರಾ ಬಟ್ಟೆ : ಸ್ಟ್ರಾಪ್ಲೆಸ್ ಬ್ರಾ, ನಿಮ್ಮ ಟ್ಯೂಬ್ ಟಾಪ್ ಅಥವಾ ಆಫ್ ಶೋಲ್ಡರ್ ಡ್ರೆಸ್‌ನಲ್ಲಿ ಆರಾಮದಾಯಕವಾಗುವಂತೆ ಇರಬೇಕು ಮತ್ತು ಬ್ರಾ ಫ್ಯಾಬ್ರಿಕ್ ಯಾವುದೇ ರೀತಿಯಲ್ಲಿ ಹೊರಗೆ ಗೋಚರಿಸಬಾರದು. ಇದಕ್ಕಾಗಿ, ಬ್ರಾನ ಕಪ್ ಗಾತ್ರವು ಸರಿಯಾದ ಫಿಟ್ಟಿಂಗ್ ಇರುವಂತೆ ನೋಡಿಕೊಳ್ಳಿ. ಫ್ಯಾಬ್ರಿಕ್ ದಪ್ಪವಾಗಿದ್ದರೆ ಅದನ್ನು ಖರೀದಿಸಬೇಡಿ. ದಪ್ಪವಾದ ಫ್ಯಾಬ್ರಿಕ್, ಉಡುಪಿನಲ್ಲಿ ಕೆಟ್ಟದಾಗಿ ಕಾಣುತ್ತದೆ. ಸ್ಟ್ರಾಪ್‌ಲೆಸ್ ಬ್ರಾ ಖರೀದಿಸುವಾಗ, ಅನ್ಲೈನ್ಡ್ ಕಪ್ ಇರುವ ಬ್ರಾ ಖರೀದಿ ಮಾಡಿ. ಈ ರೀತಿಯ ಬ್ರಾ ಬ್ರೆಸ್ ಮೇಲೆ ಬಿಗಿಯಾಗಿ ಹೊಂದಿಕೊಳ್ಳುತ್ತದೆ.
Home Remedies : ನಿಮ್ಮ ಶೂನಿಂದ ವಾಸನೆ ಬರ್ತಿದ್ದರೆ ಚಿಂತೆ ಬೇಡ
ಸರಿಯಾದ ಸ್ಟ್ರಾಪ್ಲೆಸ್ ಬ್ರಾ ಹೇಗೆ ಆರಿಸುವುದು? : ನಿಮ್ಮ ಬ್ರೆಸ್ ಗಾತ್ರಕ್ಕೆ ಅನುಗುಣವಾಗಿ ಸರಿಯಾದ ಬ್ರಾ ಧರಿಸಿ. ಹೆಚ್ಚಿನ ಮಹಿಳೆಯರು ಇದ್ರ ಬಗ್ಗೆ ಗಮನ ನೀಡುವುದಿಲ್ಲ. ಸರಿಯಾದ ಗಾತ್ರದ ಬ್ರಾ ಖರೀದಿ ಮಾಡದೆ ಸಮಸ್ಯೆ ಎದುರಿಸುತ್ತಾರೆ. ಕೆಲ ಬ್ರಾ ತುಂಬಾ ಬಿಗಿಯಾಗಿ ಹಿಂಸೆ ನೀಡಿದ್ರೆ ಮತ್ತೆ ಕೆಲ ಬ್ರಾ ಗಳು ಸಡಿಲವಾಗಿ ಆಕಾರ ಕೆಡಿಸುತ್ತವೆ.