ಪುರುಷರನ್ನು ಸಿಹಿಗೆ ಹೋಲಿಸಿದ ನಟಿ : ಅಕ್ಷಯ್ ಕುಮಾರ್ ಪತ್ನಿ ಹೇಳಿಕೆಗೆ ಆಕ್ರೋಶ
ಬಾಲಿವುಡ್ ನಟಿ ಟ್ವಿಂಕಲ್ ಖನ್ನಾ ಅವರು ತಮಗನಿಸಿದನ್ನು ಯಾವುದೇ ಫಿಲ್ಟರ್ ಇಲ್ಲದೇ ನೇರವಾಗಿ ಹೇಳುವ ಕಾರಣಕ್ಕೆ ಫೇಮಸ್ ಆದವರು. ನಟಿ ಟ್ವಿಂಕಲ್ ಹೇಳಿಕೆಗಳು ಆಗಾಗ ವಿವಾದಕೀಡಾಗುವುದು ಸಾಮಾನ್ಯವಾಗಿದೆ. ಅದೇ ರೀತಿ ಈಗ ಪುರುಷರಿಗೆ ಸಂಬಂಧಿಸಿದಂತೆ ಅವರು ನೀಡಿದ ಹೇಳಿಕೆಯೊಂದು ವಿವಾದಕ್ಕೀಡಾಗಿದೆ.
ಬಾಲಿವುಡ್ ನಟಿ ಟ್ವಿಂಕಲ್ ಖನ್ನಾ ಅವರು ತಮಗನಿಸಿದನ್ನು ಯಾವುದೇ ಫಿಲ್ಟರ್ ಇಲ್ಲದೇ ನೇರವಾಗಿ ಹೇಳುವ ಕಾರಣಕ್ಕೆ ಫೇಮಸ್ ಆದವರು. ನಟಿ ಟ್ವಿಂಕಲ್ ಹೇಳಿಕೆಗಳು ಆಗಾಗ ವಿವಾದಕೀಡಾಗುವುದು ಸಾಮಾನ್ಯವಾಗಿದೆ. ಬಾಲಿವುಡ್ ನಟರಾದ ಡಿಂಪಲ್ ಕಪಾಡಿಯಾ ರಾಜೇಶ್ ಖನ್ನಾ ಪುತ್ರಿಯಾದ ಆಕೆ ಬಾಲಿವುಡ್‌ನ ಮೇಳಾ, ಬಾದ್‌ಶಾ, ಜಾನ್, ಬರಾಸತ್, ಜಬ್ ಪ್ಯಾರ್ ಕಿಸಿಸೆ ಹೋತಾ ಹೈ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದು, ನಂತರ ಸಿನಿಮಾದಿಂದ ಬ್ರೇಕ್ ತೆಗೆದುಕೊಂಡು ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು.
ತಮ್ಮ ಬರವಣಿಗೆಯಿಂದ ಫನ್ನಿಬೋನ್ಸ್ ಎಂದು ಹೆಸರಾಗಿರುವ ಟ್ವಿಂಕಲ್ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರನ್ನು ಮದುವೆಯಾಗಿ ಅರವ್ ಹಾಗೂ ನಿತಾರಾ ಎಂಬ ಇಬ್ಬರು ಮಕ್ಕಳನ್ನು ಹೊಂದಿದ್ದು, ಇತ್ತೀಚೆಗೆ ಅವರು ಗಂಡಸರನ್ನು ಸಿಹಿ ತಿನಿಸಿಗೆ ಹೋಲಿಸಿದ್ದರು. ಈ ಹೇಳಿಕೆ ಈಗ ವಿವಾದಕ್ಕೀಡಾಗಿದೆ. ಸ್ತ್ರೀವಾದ ಹಾಗೂ ಪಿತೃ ಪ್ರಧಾನತ್ವಕ್ಕೆ ಸಂಬಂಧಿಸಿದಂತೆ ಟ್ವಿಂಕಲ್ ಹೇಳಿಕೆಗಳು ಆಗಾಗ ವಿವಾದಕ್ಕೀಡಾಗುತ್ತಿರುತ್ತವೆ. ಅದೇ ರೀತಿ ಈಗ ಅವರ ಈ ಹೋಲಿಕೆ ವಿವಾದಕ್ಕೀಡಾಗಿದೆ.
ಅಹಂಕಾರ ಬಿಟ್ಟು 'ಪಠಾಣ್'ನಲ್ಲಿ ಆ್ಯಕ್ಟ್ ಮಾಡು: ಅಮ್ಮನಿಗೇ ಬುದ್ಧಿ ಹೇಳಿದ್ದ ಟ್ವಿಂಕಲ್ ಖನ್ನಾ!
ತಮ್ಮ ಮತ್ತೊಂದು ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ತಮ್ಮ ಅಭಿಮಾನಿಗಳು ಹಾಗೂ ಓದುಗರೊಂದಿಗಿನ ಚರ್ಚೆ ವೇಳೆ ಸ್ವತಃ ಓದುಗರೊಂದಿಗೆ ವೀಕ್ಷಕರಂತೆ ಕುಳಿತಿದ್ದ ಟ್ವಿಂಕಲ್ ಪತಿ ಅಕ್ಷಯ್ ಕುಮಾರ್ ಆಕೆಗೊಂದು ಪ್ರಶ್ನೆ ಕೇಳಿದ್ದಾರೆ. ನಿಮ್ಮ ಪುಸ್ತಕ ಪುರುಷರಿಗೆ ಸಂಬಂಧಿಸಿಲ್ಲವೇ ಏಕೆಂದರೆ ಅದರಲ್ಲಿರುವ ಎಲ್ಲಾ ಪಾತ್ರಗಳು ಮಹಿಳೆಯರದ್ದಾಗಿದೆ ಎಂದು ಹೇಳಿದ್ದಾರೆ. ಇದಕ್ಕೆ ಉತ್ತರಿಸಿದ ಟ್ವಿಂಕಲ್ ಹಾಸ್ಯ ಹಾಗೂ ವ್ಯಂಗ್ಯವಾಗಿ ಉತ್ತರಿಸಿದ್ದಾರೆ.
ಇದಕ್ಕೆ ಉತ್ತರಿಸಿದ ಟ್ವಿಂಕಲ್ ಇಲ್ಲ, ನಿಮಗೆ ಖುಷಿಯಾಗಿರಲು ಸಿಹಿ ಬೇಕು ಅಲ್ಲವೇ? ನಮ್ಮತನವನ್ನು ನಾವು ನಮ್ಮಲ್ಲಿಯೇ ಆನಂದಿಸಲು ಖುಷಿಪಡಲು ಪುರುಷರು ನಮಗೆ ಬಹಳ ಅಗತ್ಯ. ಅವರು ನಮ್ಮನ್ನು ಬೆಂಬಲಿಸದೇ ಇದ್ದರೆ ನಾನು ಇದನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ. ಹೀಗೆ ಪುರುಷರನ್ನು ಸಿಹಿಗೆ ಹೋಲಿಸಿದಕ್ಕೆ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದರು.
Shilpa Shetty Birthday: ಶಿಲ್ಪಾ ಜತೆ ಸಂಬಂಧ, ಟ್ವಿಂಕಲ್ ಜತೆ ಮದ್ವೆ, ಅಕ್ಷಯ್ ಮಹಾಮೋಸ ಬಯಲು!
ನಾವು ಕೂಡ ಮಹಿಳೆಯರನ್ನು ಸಿಹಿ ಎಂದು ಕರೆದು ಜೊತೆಯಲ್ಲಿ ಹೊತ್ತೊಯ್ಯಬಹುದೇ ಎಂದು ಒಬ್ಬರು ಪ್ರಶ್ನಿಸಿದ್ದರು. ಇದಕ್ಕೆ ಸ್ವತಃ ಟ್ವಿಂಕಲ್ ಖನ್ನಾ ಪ್ರತಿಕ್ರಿಯಿಸಿದ್ದಾರೆ. ಮಹಿಳೆಯನ್ನು ಸಿಹಿ ಎಂದು ಕರೆಯುವುದು ಸರಿಯಲ್ಲ ಎಂದು ಹೇಳಿದ ನಟಿ, ಆದರೆ ಅದೇ ಸಮಯದಲ್ಲಿ ಮಹಿಳೆಯರು ಪುರುಷ ಪ್ರಧಾನ ವ್ಯವಸ್ಥೆಯ ಅಡಿ ಧೀರ್ಘಕಾಲದಿಂದಲೂ ಸಂಕಟವನ್ನು ಎದುರಿಸುತ್ತಿದ್ದಾರೆ ಎಂಬುದನ್ನು ಮರೆಯಬಾರದು ಎಂದು ಹೇಳಿದ್ದಾರೆ.
ಇದಕ್ಕೂ ಮೊದಲು ನಟಿ ಅಕ್ಷಯ್ ಕುಮಾರ್ ಅನ್ನು 5ನೇ ಡೇಟ್ ವೇಳೆ ಮದುವೆಯಾಗಲು ನಿರಾಕರಿಸಿದ್ದನ್ನು ಬಹಿರಂಗಪಡಿಸಿದ್ದರು. ಕಳೆದ ಜನವರಿಗೆ ಅಕ್ಷಯ್ ಕುಮಾರ್ ಹಾಗೂ ಟ್ವಿಂಕಲ್ ಖನ್ನಾ ದಂಪತಿ 22 ವರ್ಷಗಳನ್ನು ಪೂರೈಸಿದ್ದು, ಆಗ ತನ್ನ ಪತಿಗೆ ಮುದ್ದಾಗಿ ವಿಶ್ ಮಾಡಿದ ಟ್ವಿಂಕಲ್, ನಮ್ಮ 5ನೇ ಡೇಟ್‌ಗೆ ನಾನು ನಿನ್ನಂತಹವನನ್ನು ಮದುವೆಯಾಗಲಾರೆ ಎಂದಿದ್ದೆ. ಅದಕ್ಕೆ ಆತ ನಾನು ಆ ಬಗ್ಗೆ ನಿನ್ನನ್ನು ಯಾವತ್ತೂ ಕೇಳಿಯೇ ಇಲ್ಲ. ಆ ಒಂದು ಮಾತಿನಿಂದ ನಾನು ತುಂಬಾ ಇಂಪ್ರೆಸ್ ಆದೇ ಎಂದು ಟ್ವಿಂಕಲ್ ಹೇಳಿಕೊಂಡಿದ್ದರು.